ಕುಂಭಮೇಳ: ಭಕ್ತರ ಪುಣ್ಯಸ್ನಾನ ಕಂಡು ಗಡಗಡ ನಡುಗಿದ ಚಳಿ!

By Web DeskFirst Published Jan 15, 2019, 12:40 PM IST
Highlights

ಪುಣ್ಯ ಸ್ನಾನದ ಮೂಲಕ ಕುಂಭಮೇಳಕ್ಕೆ ಚಾಲನೆ| ಮಕರ ಸಂಕ್ರಾಂತಿಯ ಪ್ರಯುಕ್ತ ಸಾವಿರಾರು ಭಕ್ತರಿಂದ ಪುಣ್ಯಸ್ನಾನ| ಪ್ರಯಾಗ್ ರಾಜ್ ನ ಸಂಗಮದಲ್ಲಿ ಮಿಂದೆದ್ದ ಭಕ್ತರು| ದೇಶ ವಿದೇಶಗಳಿಂದ ಬಂದಿರುವ ಸಾವಿರಾರು ಭಕ್ತರು 

ಪ್ರಯಾಗ್‌ರಾಜ್(ಜ.15): ಮಕರ ಸಂಕ್ರಾಂತಿಯ ಪ್ರಯುಕ್ತ ಸಾವಿರಾರು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಭಕ್ತಿಯಿಂದ ಕುಂಭ ಮೇಳದಲ್ಲಿ ಪಾಲ್ಗೊಂಡು ಮಿಂದೆದ್ದರು.

ಕುಂಭಮೇಳ ಸಂದರ್ಭದಲ್ಲಿ ಸಕಲ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸಂಗಮದಲ್ಲಿ ಸ್ನಾನದ ಘಾಟ್ ಪ್ರದೇಶದಲ್ಲಿ 5 ಕಿ.ಮೀ  ಉದ್ದ ಸಂಚರಿಸುವ ಭಕ್ತರಿಗೆ ಅನುಕೂಲವಾಗಲು ತೆಪ್ಪದ ಸೇತುವೆ ನಿರ್ಮಿಸಲಾಗಿತ್ತು.

Varanasi: Devotees take holy dip in river Ganga on . pic.twitter.com/fVeQZE0h51

— ANI UP (@ANINewsUP)

ಭಕ್ತರ ಪ್ರವೇಶ ಮತ್ತು ನಿರ್ಗಮನಕ್ಕೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಧ್ಯರಾತ್ರಿ ಕಳೆದ ಕೂಡಲೇ ಸಾವಿರಾರು ದೇಶ ವಿದೇಶಗಳಿಂದ ಬಂದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಕುಂಭಮೇಳದ ಶುಭ ಮುಹೂರ್ತದಲ್ಲಿ ಧಾರ್ಮಿಕ ಪಠಣಗಳು, ಭಜನೆಗಳು ಕೇಳಿಬಂದವು.

Hindu seers and saints head towards Sangam Ghat for a holy dip in river Ganga on the occasion of first ‘Shahi Snan’ at in Uttar Pradesh's Prayagraj (Early morning visuals) pic.twitter.com/9PBx4yBODE

— ANI (@ANI)

ಇನ್ನು ಇಲ್ಲಿನ ಕುಂಭ ಮೇಳದಲ್ಲಿ 45 ನಿಮಿಷಗಳ ಶಾಹಿ ಸ್ನಾನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕಲ್ಪಿಸಿದ್ದು, ಅದು ಈ ದಿನದ ನಿರ್ದಿಷ್ಟ ಘಳಿಗೆಯಲ್ಲಿ ನಡೆಯಲಿದೆ. ಪ್ರತಿ 6 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತಿದ್ದು ಮಹಾ ಕುಂಭ ಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ.

click me!