
ಅಗರ್ತಲಾ[ಸೆ.17]: ಗೃಹ ಸಚಿವ ಅಮಿತ್ ಶಾ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಮನವಿ ಮಾಡಿದ್ದ ವಿಚಾರ ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿವಾದ ತಣ್ಣಗಾಗುವ ಮುನ್ನವೇ ಇದೀಗ ಮತ್ತೊಬ್ಬ ಸಿಎಂ 'ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಯಾರು ವಿರೊಧಿಸುತ್ತಾರೋ ಅವರೆಲ್ಲರೂ ದೇಶಪ್ರೇಮಿಗಳಲ್ಲ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದಿ ಹೇರಿಕೆ; ತಮಿಳು ತಂಟೆಗೆ ಬಂದ್ರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೀವಿ ಎಂದ ಕಮಲ್ ಹಾಸನ್
ಹೌದು ಅಟಲ್ ಬಿಹಾರಿ ವಾಜಪೇಯಿ ಪ್ರಾದೇಶಿಕ ಕ್ಯಾನ್ಸರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ತ್ರಿಪುರಾ ಸಿಎಂ ಬಿಪ್ಲವ್ ಕುಮಾರ್ ದೇವ್ 'ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಯಾರೆಲ್ಲಾ ವಿರೋಧ ವ್ಯಕ್ತಪಡಿಸುತ್ತಾರೋ, ಅವರ‍್ಯಾರೂ ದೇಶಪ್ರೇಮಿಗಳಲ್ಲ. ಭಾರತದಲ್ಲಿ ಅತಿಹೆಚ್ಚು ಮಂದಿ ಹಿಂದಿ ಭಾಷೆಯನ್ನು ಬಳಸುತ್ತಾರೆ, ಈ ಕಾರಣದಿಂದ ನಾನು ಇದನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಬೆಂಬಲಿಸುತ್ತೇನೆ' ಎಂದಿದ್ದಾರೆ.
ಅತ್ತ ದೇಶಕ್ಕೊಂದೇ ಭಾಷೆ ಎಂದ ಶಾ: ಇತ್ತ ಹಿಂದಿ ದಿನ ಆಚರಣೆಗೆ ಸಿದ್ದು ವಿರೋಧ!
ಅಲ್ಲದೇ 'ಹಲವರು ಪ್ರತಿಷ್ಠೆಗಾಗಿ ಆಂಗ್ಲ ಭಾಷೆಯನ್ನು ಬಳಸುತ್ತಾರೆ. ಆದರೆ ಆಂಗ್ಲ ಭಾಷೆ ಬಳಸುವ ದೇಶಗಳು ಮಾತ್ರ ಅಭಿವೃದ್ಧಿ ಕಾಣುತ್ತವೆ ಎಂಬುವುದು ಅತ್ಯಕ್ಕೆ ದೂರವಾದ ಸಂಗತಿ. ಯಾಕೆಂದರೆ ಜರ್ಮನಿ, ಚೀನಾ, ಜಪಾನ್, ರಷ್ಯಾ ಹಾಗೂ ಇಸ್ರೇಲ್ ಇಂದು ಅಭಿವೃದ್ಧಿ ಕಂಡ ರಾಷ್ಟ್ರಗಳಾಗಿ ಗುರುತಿಸಿಕೊಳ್ಳುತ್ತಿವೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು ಕೂಡಾ ಜನರು ತಮ್ಮ ಬಳಿ ಕೆಲಸಕ್ಕಾಗಿ ಬಂದಾಗ ಇಂಗ್ಲೀಷ್ ಭಾಷೆಗಿಂತ ಹೆಚ್ಚು ಹಿಂದಿ ಅಥವಾ ಸ್ಥಳೀಯ ಭಾಷೆಯನ್ನು ಬಳಸಬೇಕು' ಎಂದು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.