ಭೂ ಮಾಫಿಯಾಕ್ಕೆ ಸಿಲುಕಿದ್ದ ಶಿರೂರು ಶ್ರೀ..? ಕೊಟ್ಯಂತರ ಸಾಲದ ಒತ್ತಡ

By Kannadaprabha NewsFirst Published Jul 21, 2018, 7:46 AM IST
Highlights

ವಿಶ ಪ್ರಾಶನದಿಂದ ಮೃತಪಟ್ಟಿದ್ದಾರೆಂದು ಅನುಮಾನ ಇರುವ ಬೆನ್ನಲ್ಲೇ ಶಿರೂರು ಶ್ರೀಗಳ ಸಾವಿಗೆ ಇದೀಗ ಇನ್ನೊಂದು ಆಯಾಮ ದೊರಕಿದೆ. ಅವರು ಭೂ ಮಾಫಿಯಾದಲ್ಲಿ ಸಿಲುಕಿದ್ದು ಕೊಟ್ಯಂತರ ರು ಸಾಲವನ್ನು ಮಾಡಿದ್ದರು ಎನ್ನಲಾಗುತ್ತಿದೆ. 

ಉಡುಪಿ :  ಮಣಿಪಾಲ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದ ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥರ ಸಾವಿನ ಹಿಂದೆ  ವಿಷಪ್ರಾಶನದ ಆಯಾಮ ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆ ಆರಂಭಿಸಿದ ಪೊಲೀಸರ ಕಣ್ಣು ಈಗ ಸ್ವಾಮೀಜಿ ಅವರ ಕೋಟ್ಯಂತರ ರುಪಾಯಿ ಮೌಲ್ಯದ ಹಣಕಾಸು, ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೂ ನೆಟ್ಟಿದೆ. 

ಚಿಕಿತ್ಸೆ ನೀಡಿದ್ದ ಮಣಿಪಾಲದ ವೈದ್ಯರೇ ಅನುಮಾನ ಪಟ್ಟಂತೆ ಶ್ರೀಗಳಿಗೆ ವಿಷಪ್ರಾಶನವಾಗಿದ್ದು ನಿಜವೇ ಆಗಿದ್ದರೆ ಅದಕ್ಕೆ ಕಾರಣ ಏನಿರಬಹುದು ಎಂಬ ಸಾಧ್ಯತೆಗಳ ಕುರಿತು ತನಿಖೆ ಆರಂಭವಾಗುತ್ತಿದ್ದಂತೆ ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಜತೆಗೆ ಅವರ ಆರ್ಥಿಕ ವ್ಯವಹಾರಗಳು,ಮಠದ ಜಮೀನು ಪರಭಾರೆ, ಕೋಟ್ಯಂತರ ರುಪಾಯಿ ಸಾಲ, ಭೂ ವ್ಯವಹಾರ ಚಟುವಟಿಕೆಗಳ ಮೇಲೂ ಅನುಮಾನದ ನೋಟ ಬಿದ್ದಿದೆ. ಶ್ರೀಗಳ ಮೇಲೆ ನಡೆದಿದೆ ಎನ್ನಲಾದ ವಿಷಪ್ರಾಶನದ ಮಸಲತ್ತಿಗೆ ಇದೇ ಕಾರಣ ಇರಬಹುದೇ ಎಂಬ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. 

ಜಮೀನು ಒಡೆತನ: ಶಿರೂರು ಮಠದ ಮೂಲ ಮಠ ಇರುವ, ಉಡುಪಿಯಿಂದ 20 ಕಿ.ಮೀ. ದೂರದ ಶಿರೂರು ಗ್ರಾಮದಲ್ಲಿ ಮಠಕ್ಕೆ 610 ಎಕರೆಯಷ್ಟು ಜಮೀನು ಇದೆ. ಅದನ್ನು ಹೊರತು ಪಡಿಸಿ ಉಡುಪಿ ಮಠದ ಸುತ್ತಮುತ್ತ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿ ಸುಮಾರು 100 ರಿಂದ 150 ಎಕರೆ ಜಮೀನು ಮಠದ ಹೆಸರಿನಲ್ಲಿದೆ. ಒಂದು ಕಾಲದಲ್ಲಿ 2400 ಎಕ್ರೆಗೂ ಅಧಿಕ ಜಮೀನು ಹೊಂದಿದ್ದ ಮಠ, ಭೂಸುಧಾರಣಾ ಕಾಯ್ದೆ ನಂತರ ಕೇವಲ 800 ಎಕ್ರೆಯಷ್ಟು ಜಮೀನು ಅಷ್ಟೇ ಕಾಯ್ದುಕೊಂಡಿದೆ

click me!