ಬೇಸಿಗೆಯಲ್ಲಿ ಈ ಸಲ ಉತ್ತರ ಭಾರತದಲ್ಲಿ ಉರಿ ಬಿಸಿಲು

By Suvarna Web DeskFirst Published Mar 2, 2018, 9:26 AM IST
Highlights

ಮಾರ್ಚ್’ನಿಂದ  ಮೇ ತಿಂಗಳ ಅವಧಿಯಲ್ಲಿ ಉತ್ತರ ಭಾರತದೆಲ್ಲೆಡೆ ತಾಪಮಾನ ಸಾಮಾನ್ಯಕ್ಕಿಂತ 1 ಡಿಗ್ರಿ ಸೆಲ್ಸಿಯಸ್‌ ಅಧಿಕವಾಗಿರಲಿದ್ದು, ಉರಿ ಬಿಸಿಲಿಗೆ ತುತ್ತಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನವದೆಹಲಿ: ಮಾರ್ಚ್’ನಿಂದ  ಮೇ ತಿಂಗಳ ಅವಧಿಯಲ್ಲಿ ಉತ್ತರ ಭಾರತದೆಲ್ಲೆಡೆ ತಾಪಮಾನ ಸಾಮಾನ್ಯಕ್ಕಿಂತ 1 ಡಿಗ್ರಿ ಸೆಲ್ಸಿಯಸ್‌ ಅಧಿಕವಾಗಿರಲಿದ್ದು, ಉರಿ ಬಿಸಿಲಿಗೆ ತುತ್ತಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಾದ ಹರ್ಯಾಣ, ಪಂಜಾಬ್‌ ಮತ್ತು ರಾಜಸ್ಥಾನಗಳಲ್ಲಿ ಸಾಮಾನ್ಯಕ್ಕಿಂತ 1.5 ಡಿಗ್ರಿ ಅಧಿಕ ತಾಪಮಾನ ಕಂಡು ಬರಲಿದೆ. ಹಿಮಾಲಯದ ತಪ್ಪಲು ಪ್ರದೇಶಗಳಾದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಸಾಮಾನ್ಯಕ್ಕಿಂತ ತಾಪಮಾನ 2.3 ಡಿಗ್ರಿಯಷ್ಟುಏರಿಕೆಯಾಗುವ ಸಾಧ್ಯತೆಯಿದೆ.

ಇನ್ನು ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ತಾಪಮಾನ ಎಂದಿನಂತೆ ಇರಲಿದೆ. ಸಾಮಾನ್ಯವಾಗಿ ಮಾಚ್‌ರ್‍ನಿಂದ ಜೂಲೈ ಅವಧಿಯಲ್ಲಿ ಭಾರತದಲ್ಲಿ ಬಿಸಿಲಿನ ತೀವ್ರತೆ ಅಧಿಕವಾಗಿರುತ್ತದೆ.

click me!