
ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ. ಜೆಡಿಎಸ್, ಬಿಜೆಪಿ ಪಕ್ಷಗಳು ಆಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂದು ಜ್ಯೋತಿಷಿ ಸಹಸ್ರ ಸಾಗರ್ ಭವಿಷ್ಯ ನುಡಿದಿದ್ದಾರೆ.
ಎರಡು ಪಕ್ಷಗಳಿಗೂ ಸೇರಿ 122 ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. 102 ಸ್ಥಾನಗಳಲ್ಲಿ ಗೆಲುವು ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
30 ವರ್ಷ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅಭ್ಯಾಸ ಮಾಡಿದ್ದೇನೆ. 25 ಚುನಾವಣೆ ಗಳ ಫಲಿತಾಂಶ ನನ್ನ ಲೆಕ್ಕಾಚಾರದಂತೆ ಬಂದಿದೆ. ಮನಮೋಹನ್ ಸಿಂಗ್ ಎರಡನೇ ಬಾರಿಗೂ ಅಧಿಕಾರ ಹಿಡಿಯುತ್ತಾರೆ ಎಂದು ನಾನು ಹೇಳಿದ್ದೆ. ಅದೇ ರೀತಿ ಮನಮೋಹನ್ ಸಿಂಗ್ ಅಧಿಕಾರ ಹಿಡಿದಿದ್ದರು.
ಇದೀಗ ರಾಜ್ಯದಲ್ಲಿ ಮತದಾರರ ಸಂಖ್ಯೆಯನ್ನು ಆಧರಿಸಿ ಭವಿಷ್ಯ ನುಡಿದಿದ್ದು, ಒಟ್ಟು 4,97, 75 ಸಾವಿರ ಮತಗಳಿಂದ ಲೆಕ್ಕಾಚಾರ ಮಾಡಿದ್ದೇನೆ. ಅಷ್ಟಕ ವರ್ಗ ಬಿಂದು ಹಾಗೂ ಮಾಸ ಜ್ಯೋತಿಷ್ಯದ ಮೂಲಕ ಭವಿಷ್ಯ ನುಡಿಯಲಾಗಿದೆ.
ವೃಷಭ ಮಾಸದಲ್ಲಿ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಅಡಳಿತಕ್ಕೆ ಬರಲಿದೆ ಎಂದು ಜೋತಿಷಿ ಸಹಸ್ರ ಸಾಗರ್ ಈ ವೇಳೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.