ಇದೆ ತಿಂಗಳು ಅಂತ್ಯವಾಗಲಿದೆ ವಿಶ್ವ..! ಆಕಾಶದಲ್ಲಿ ಗೋಚರಿಸುತ್ತದೆ ನಿಬಿರು ಗ್ರಹ

By Suvarna Web DeskFirst Published Apr 12, 2018, 12:08 PM IST
Highlights

ಪಿತೂರಿ ಸಿದ್ಧಾಂತ ಪ್ರಕಾರವಾಗಿ ವಿಶ್ವದ ಅಂತ್ಯವು ಸಮೀಪಿಸುತ್ತಿದೆ ಎಂದು ಹೇಳಲಾಗಿದೆ.

ನವದೆಹಲಿ : ಪಿತೂರಿ ಸಿದ್ಧಾಂತ ಪ್ರಕಾರವಾಗಿ ವಿಶ್ವದ ಅಂತ್ಯವು ಸಮೀಪಿಸುತ್ತಿದೆ ಎಂದು ಹೇಳಲಾಗಿದೆ.

ಅದರ ಪ್ರಕಾರ ಇದೇ ಏ. 23 ರಂದು ಜಗತ್ತೇ ಕೊನೆಗೊಳ್ಳುವಂತಹ ಆರಂಭಿಕ ವಿದ್ಯಮಾನವು ನಡೆಯಲಿದೆ. ಅಂದು ರಾತ್ರಿ ಆಕಾಶದಲ್ಲಿ ನಿಬಿರು ಗ್ರಹವು ಕಾಣಿಸಿಕೊಳ್ಳಲಿದೆ ಎಂದು ಈ ಸಿದ್ಧಾಂತವು ಹೇಳಿದೆ. ಅದೇ ಭೂಮಿ ಅಂತ್ಯವಾಗುವ ಮುನ್ಸೂಚನೆಯಾಗಿದೆ. ಅಂದಿನಿಂದ ಒಟ್ಟು 7 ವರ್ಷಗಳಲ್ಲಿ ಭೂಮಿಯಲ್ಲಿ ಅತ್ಯಂತ ಕ್ಲೇಷದ ವಾತಾವರಣ ನಿರ್ಮಾಣವಾಗಿ ವಿಶ್ವವೇ ಅಂತ್ಯವಾಗಲಿದೆ.

ಸೂರ್ಯ, ಚಂದ್ರ, ಗುರು ಗ್ರಹಗಳು ಒಂದೇ ಕಡೆ ಬರಲಿವೆ. ಭೂಮಿಯ ಅತ್ಯಂತ ಸಮೀಪಕ್ಕೆ ನಿಬಿರು ಬರಲಿದೆ. ಇದರಿಂದ ಭೂಮಿಯಲ್ಲಿ ಮೂರನೇ ವಿಶ್ವ ಯುದ್ಧ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಆದರೆ ಪದೇ ಪದೇ ಇಂತಹ ಸುದ್ದಿಗಳು ಹಬ್ಬುತ್ತಿದ್ದು, ಭೂಮಿಯು ಅಂತ್ಯವಾಗುತ್ತದೆ ಎನ್ನುವ ಅನೇಕ ದಿನಗಳು ಈಗಾಗಲೇ ದಾಟಿವೆ. ಇಂತಹ ಯಾವುದೇ ವಿದ್ಯಮಾನವು ಸಂಭವಿಸದು ಎಂದು ಈ ವಿಚಾರವನ್ನು ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ.

click me!