
ಪುಣೆ: ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರ ವಿರುದ್ಧ ನಕಾರಾತ್ಮಕ ಸುದ್ದಿಗಳೇ ಹೆಚ್ಚಿರುವ ದಿನಗಳಲ್ಲಿ, ಒಬ್ಬನೇ ಒಬ್ಬ ವಿದ್ಯಾರ್ಥಿಗಾಗಿ ಶಿಕ್ಷಕರೊಬ್ಬರು ನಿತ್ಯ 50 ಕಿ.ಮೀ ಸಂಚರಿಸಿ, ಅದರಲ್ಲೂ 12 ಕಿ.ಮೀ. ದುರ್ಗಮ ಹಾದಿ ಕ್ರಮಿಸಿ ಪಾಠ ಹೇಳಿ ಬರುವ ಅಚ್ಚರಿಯ ಪ್ರಕರಣ ಮಹಾರಾಷ್ಟ್ರದ ಪುಣೆಯಿಂದ ವರದಿಯಾಗಿದೆ.
ಹೌದು, 8 ವರ್ಷಗಳ ಹಿಂದೆ ರಜನೀಕಾಂತ್ ಮೆಂಧೆ ಎಂಬ ಶಿಕ್ಷಕರನ್ನು ಭೋರ್ ಪ್ರದೇಶದ ಚಂದರ್ ಗ್ರಾಮಕ್ಕೆ ವರ್ಗ ಮಾಡಲಾಗಿತ್ತು. ಮೊದಲು ಮೆಂಧೆ ಈ ಗ್ರಾಮಕ್ಕೆ ತೆರಳಿದಾಗ ಅಲ್ಲಿಗೆ 11 ಮಕ್ಕಳು ಬರುತ್ತಿದ್ದರು. ಆದರೆ ಈ ಕುಗ್ರಾಮದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು 12 ಕಿ.ಮೀ ದೂರದ ಊರಿಗೆ ನಿತ್ಯ ಹೋಗಬೇಕು.
ಹೀಗಾಗಿ ಕ್ರಮೇಣ 10 ಮಕ್ಕಳು ಶಾಲೆ ತ್ಯಜಿಸಿದರು. ಉಳಿದವನು ಯುವರಾಜ್ ಎಂಬ ಒಬ್ಬನೇ ಒಬ್ಬ ಹುಡುಗ. ಈತನಿಗೆ ಪಾಠ ಹೇಳಲೆಂದೇ ರಜನಿ ನಿತ್ಯ ಹಳ್ಳಿಗೆ ಹೋಗುತ್ತಾರೆ. ಆದರೆ ಈ ಹಳ್ಳಿಗೆ ಹೋಗುವುದು ಅಷ್ಟು ಸುಲಭವಲ್ಲ. ಪ್ರತಿ ನಿತ್ಯ ಬೈಕ್‌ನಲ್ಲಿ ಹೋಗಬೇಕು. ಅದರಲ್ಲಿ ತೀರಾ ದುರ್ಗಮವಾದ 12 ಕಿ.ಮೀ. ಸಂಚರಿಸುವ ಮಣ್ಣಿನ ರಸ್ತೆಯ ಎರಡೂ ಕಡೆಗಳಲ್ಲಿ ೪೦೦ ಅಡಿ ಆಳ ಕಂದಕವಿದೆ.
ಮಳೆ ಬಂದರಂತೂ ಬೈಕ್ ಓಡಿಸುವುದೇ ದುಸ್ಸಾಹಸ. ಅಲ್ಲದೇ ಇಲ್ಲಿ ಹಾವುಗಳ ಉಪಟಳ. ಇಷ್ಟಾದ ಮೇಲೆ ವಿದ್ಯಾರ್ಥಿಯನ್ನು ಹುಡುಕುವುದೇ ರಜನೀಕಾಂತ್ ಅವರ ಮೊದಲ ಕೆಲಸ. ಮರಗಳ ಮರೆಯಲ್ಲಿ ಅಡಗಿ ಕೂರುವ ಆತನನ್ನು ಕರೆತಂದು ಪಾಠ ಮಾಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.