ಈ ಜನಪ್ರಿಯ ಆ್ಯಪ್’ನಿಂದ 3 ಕೋಟಿ ಬಳಕೆದಾರರ ವೈಯುಕ್ತಿಕ ಮಾಹಿತಿ ಸೋರಿಕೆ!

By Suvarna Web DeskFirst Published Dec 6, 2017, 6:12 PM IST
Highlights

ಜನಪ್ರಿಯ ಆ್ಯಪ್’ವೊಂದರ ಮೂಲಕ 3 ಕೋಟಿಕ್ಕಿಂತಲೂ ಹೆಚ್ಚು ಬಳಕೆದಾರರ ವೈಯುಕ್ತಿಕ ಮಾಹಿತಿಯು ಸೋರಿಕೆಯಾಗಿದೆ ಎಂದು ಸೈಬರ್ ಸುರಕ್ಷತೆ ಅಧ್ಯಯನ ಸಂಸ್ಥೆಯೊಂದರ ವರದಿ ಹೇಳಿದೆ.

ಜನಪ್ರಿಯ ಆ್ಯಪ್’ವೊಂದರ ಮೂಲಕ 3 ಕೋಟಿಕ್ಕಿಂತಲೂ ಹೆಚ್ಚು ಬಳಕೆದಾರರ ವೈಯುಕ್ತಿಕ ಮಾಹಿತಿಯು ಸೋರಿಕೆಯಾಗಿದೆ ಎಂದು ಸೈಬರ್ ಸುರಕ್ಷತೆ ಅಧ್ಯಯನ ಸಂಸ್ಥೆಯೊಂದರ ವರದಿ ಹೇಳಿದೆ.

ಜನಪ್ರಿಯವಾಗಿರುವ Ai.Type ಎಂಬ  ವರ್ಚುವಲ್ ಕೀಬೋರ್ಡ್ ಆ್ಯಪ್’ನಿಂದ ಸುಮಾರು 3.1 ಕೋಟಿ ಆ್ಯ0ಡ್ರಾಯಿಡ್ ಬಳಕೆದಾರರ ವೈಯುಕ್ತಿಕ ಮಾಹಿತಿ ಹಾಗೂ ಇನ್ನಿತರ ಮಾಹಿತಿಗಳು ಸೋರಿಕೆಯಾಗಿವೆ ಎಂದು ಕ್ರೋಮ್’ಟೆಕ್ ಸೆಕ್ಯುರಿಟಿ ಸಂಸ್ಥೆ ಹೇಳಿದೆಯೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

31,293,959 ಬಳಕೆದಾರರ ಮಾಹಿತಿಯು ಆನ್’ಲೈನ್/ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆಯೆಂದು ಎಂದು ಹೇಳಲಾಗಿದೆ.

ಆ್ಯಪ್ ಡೆವಲಪರ್ಸ್’ಗಳು ತಮ್ಮ ಸರ್ವರ್’ನ್ನು ಸುರಕ್ಷಿತವಾಗಿಟ್ಟುಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆಯಾಗಿದೆ, ಎಂದು ಹೇಳಲಾಗಿದೆ.

click me!