ಟೊಮೆಟೋ ಏಕೆ ತಿನ್ನಬೇಕು?

By Web DeskFirst Published Sep 16, 2016, 7:28 AM IST
Highlights

ಟೊಮೆಟೋ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನವಿದೆ ಎಂಬ ಅಂಶಗಳು ಇಲ್ಲಿವೆ ನೋಡಿ.

ಟೊಮೆಟೋ ಬಹುಮುಖ ಆಹಾರ, ಇದರಲ್ಲಿ ಸಿ ಜೀವಸತ್ವಗಳು, ಮೆಗ್ನೀಷಿಯಂ,ರಂಜಕ, ತಾಮ್ರದ ಅಂಶಗಳು, ಫೈಬರ್ ಅಂಶಗಳು ಹೇರಳವಾಗಿದ್ದು ಪೌಷ್ಟಿಕತೆಯ ಆಗರವಾಗಿದೆ. ಇಂತಹ ಟೊಮೆಟೋ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನವಿದೆ ಎಂಬ ಅಂಶಗಳು ಇಲ್ಲಿವೆ ನೋಡಿ.

ಕಣ್ಣಿನ ಖಾಯಿಲೆಯನ್ನು ತಡೆಯುತ್ತದೆ:

ಟೊಮೆಟೋ ಚರ್ಮ ಮತ್ತು ಕಣ್ಣಿನ ರೋಗವನ್ನು ಗುಣಪಡಿಸುತ್ತದೆ. ಕಣ್ಣಿನ ಸುತ್ತ ಉಂಟಾದ ಕಪ್ಪ ಕಲೆಗಳನ್ನು ಟೊಮೆಟೋ ರಸವನ್ನು ಹಚ್ಚುವ ಮೂಲಕ ದೂರಪಡಿಸಬಹುದು. ಹಾಗೂ ಇದರಲ್ಲಿನ ವಿಟಮಿನ್ ಎ ಮತ್ತು ಈ ಇರುಳುಗಣ್ಣು ರೋಗವನ್ನು ನಿಯಂತ್ರಿಸುತ್ತದೆ.

ತೀವ್ರ ರಕ್ತದೊತ್ತಡ ನಿಯಂತ್ರಣ:

ಟೊಮೆಟೋದಲ್ಲಿ ಇರುವ ಖನಿಜಗಳು ಮತ್ತು ಪೋಷಕಾಂಶಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ.

ಹಲ್ಲು ಮತ್ತು ಮೂಳೆಗಳ ಆರೋಗ್ಯ:

ಇದು ದೇಹದಲ್ಲಿ ಮೂಳೆಯ ರಚನೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಅಂಶಗಳು ಮೂಳೆ ಗಟ್ಟಿಯಾಗಲು ಮತ್ತು ಹಲ್ಲುಗಳು ಆರೋಗ್ಯವಾಗಿರಲು ಬಹಳ ಸಹಾಯಕವಾಗಿದೆ.

ಇಷ್ಟೆ ಅಲ್ಲದೆ ಟೊಮೆಟೋ ಸಾಮಾನ್ಯವಾಗಿ ಕಾಡುವ ಶೀತ ಮತ್ತು ಜ್ವರವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಟೊಮೆಟೋ ತಿನ್ನಿ, ಆದರೆ ಅತಿಯಾದರೆ ಅಮೃತವೂ ವಿಷ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಟೊಮೆಟೋವನ್ನು ಮಿತವಾಗಿ ಸೇವಿಸಿ.

click me!