ಹೋರಾಟ ಮಾಡಿದ್ದಕ್ಕೆ ಪೊಲೀಸರ ಸೇಡು? ಪ್ರತಿಭಟನೆ ನಡೆಸಿದ್ದಕ್ಕೆ ರೌಡಿಶೀಟರ್​ ಪಟ್ಟ!

Published : Sep 16, 2016, 07:25 AM ISTUpdated : Apr 11, 2018, 01:00 PM IST
ಹೋರಾಟ ಮಾಡಿದ್ದಕ್ಕೆ ಪೊಲೀಸರ ಸೇಡು? ಪ್ರತಿಭಟನೆ ನಡೆಸಿದ್ದಕ್ಕೆ ರೌಡಿಶೀಟರ್​ ಪಟ್ಟ!

ಸಾರಾಂಶ

ಮಂಗಳೂರು(ಸೆ.16): ಮಂಗಳೂರಿನಲ್ಲಿ ಬೃಹತ್ ತೈಲ ಸಂಸ್ಕರಣ ಘಟಕ ಎಂಆರ್​ಪಿಎಲ್​ ವಿರುದ್ಧ ಹೋರಾಟ ನಡೆಸಿದ ಗ್ರಾಮಸ್ಥರಿಗೆ ಈಗ ರೌಡಿಶೀಟರ್ ಪಟ್ಟ ಕಟ್ಟಲಾಗಿದೆ. ಹೌದು ಅಚ್ಚರಿ ಆದರೂ ಸತ್ಯ. 

ಎಂಆರ್​ಪಿಎಲ್​ನ ಕೋಕ್ ಮತ್ತು ಸಲ್ಫರ್ ಘಟಕದ ವಿರುದ್ಧ, ಎರಡು ವರ್ಷ ಸತತ ಮುಂಚೂಣಿ ಹೋರಾಟ ನಡೆಸಿದ ನಾಲ್ವರನ್ನು ಸುರತ್ಕಲ್​ ಪೊಲೀಸರು ರೌಡಿಶೀಟರ್​ ಪಟ್ಟಿಗೆ ಸೇರಿಸಿದ್ದಾರೆ. 

ಕಳೆದ ಎರಡು ವರ್ಷಗಳಲ್ಲಿ ಎಂಆರ್​ಪಿಎಲ್ ಹೋರಾಟದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ, ಒಂದೇ ಒಂದು ಬಸ್ ಕಲ್ಲು ಒಡೆದಿಲ್ಲ, ಯಾರೊಬ್ಬರಿಗೂ ಹಲ್ಲೆಯಾಗಿಲ್ಲ, ರಕ್ತ ಹರಿದಿಲ್ಲ. ಆದರೂ ದೊಂಬಿ, ಗಲಭೆ ಪ್ರಚೋದನೆ ಮಾಡಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ. 

ಅದೂ ಅಲ್ಲದೆ ಸಂತ್ರಸ್ತ ಹೋರಾಟಗಾರರು ಸ್ಥಳೀಯ ಗ್ರಾಮ ಮತ್ತು ತಾಲೂಕು ಪಂಚಾಯತ್ ಸದಸ್ಯರಾಗಿದ್ದು, ಸಾಮಾಜಿಕ ಸೇವೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾಲಿನ್ಯ ನಿಯಂತ್ರಣ ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿದ್ದಾರೆ. 

ಪ್ರತಿಭಟನೆ ನಡೆದಿರುವುದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಾದರೂ ಸುರತ್ಕಲ್​ ಇನ್ಸ್​ಪೆಕ್ಟರ್​ ಚೆಲುವರಾಜು ಬೃಹತ್ ಕಂಪೆನಿಯ ಪ್ರಭಾವಕ್ಕೊಳಗಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!