ಕೊರಿಯನ್ನರಿಗೆ ಅಯೋಧ್ಯೆ 'ತಾಯಿ ಮನೆ: ದಿವ್ಯಶಕ್ತಿಯ ಕಲ್ಲಿನ ರಹಸ್ಯವೇನು?

By nikhil vkFirst Published Jun 25, 2018, 7:18 PM IST
Highlights

ಕೊರಿಯನ್ನರಿಗೇಕೆ ಅಯೋಧ್ಯೆ ಕಂಡ್ರೆ ಭಕ್ತಿ?

ಕೊರಿಯಾಗೂ ಅಯೋಧ್ಯೆಗೂ ಇರುವ ಸಂಬಂಧವೇನು?

ಯಾರು ಮಹಾರಾಣಿ ಹಿಯೋ-ಹ್ವಾಂಗ್ ಒಕೆ?

ಹಿಯೋ ಕಠಿಣ ಪ್ರವಾಸ ಮಾಡಿ ಅಯೋಧ್ಯೆಗೆ ಬಂದಿದ್ದೇಕೆ?

ಹಿಯೋ ತಂದಿದ್ದ ದಿವ್ಯ ಶಕ್ತಿಯ ಕಲ್ಲಿನ ರಹಸ್ಯವೇನು?
 

ಅಯೋಧ್ಯೆ(ಜೂ.25): ಎತ್ತಣ ಮಾಮರ ಎತ್ತಣ ಕೋಗಿಲೆ..?ಎಂಬಂತೆ ಎಲ್ಲಿಯ ದ.ಕೊರಿಯಾ ಮತ್ತು ಎಲ್ಲಿಯ ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆ?.  ಆದರೆ ಇತಿಹಾಸವೇ ಅಂತದ್ದು. ತನ್ನೊಡಲಲ್ಲಿ ಅನೇಕ ರೋಮಾಂಚನಕಾರಿ ವಿಷಯಗಳನ್ನು ಅದು ಬಚ್ಚಿಟ್ಟುಕೊಂಡಿರುತ್ತದೆ. ದ.ಕೊರೊಯನ್ನರ ಅಯೋಧ್ಯೆ ಪ್ರೀತಿ ಹಿಂದೆ ಅಂತದ್ದೇ ರೋಮಾಂಚನಕಾರಿ ಕತೆ ಇದೆ.

ಹೌದು, ದ. ಕೊರಿಯಾ ಜನರಿಗೆ ಅಯೋಧ್ಯೆ ಎಂದರೆ ಪವಿತ್ರ ಸ್ಥಳ. ಇದೇ ಕಾರಣಕ್ಕೆ ಲಕ್ಷಾಂತರ ದ.ಕೊರಿಯನ್ನರು ಪ್ರತೀ ವರ್ಷವೂ ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಕಾರಣ ಕೊರಿಯಾ ಇತಿಹಾಸ ಕಂಡ ಅತ್ಯಂತ ಪ್ರಖ್ಯಾತ ರಾಣಿ ಹಿಯೋ-ಹ್ವಾಂಗ್-ಒಕೆ.

ಕೊರಿಯಾದ ರಾಣಿಗೂ ಅಯೋಧ್ಯೆಗೂ ಏನು ಸಂಬಂಧ ಅಂತೀರಾ. ಹಿಯೋ-ಹ್ವಾಂಗ್ ರಾಜಕುಮಾರಿಯಾಗಿದ್ದಾಗ ತನ್ನ 16ನೇ ವಯಸ್ಸಿನಲ್ಲೇ ಅಯೋಧ್ಯೆಗೆ ಭೇಟಿ ನೀಡಲು ಏಕಾಂಗಿಯಾಗಿ ಕೊರಿಯಾದಿಂದ ಪ್ರವಾಸ ಕೈಗೊಂಡಿದ್ದಳಂತೆ. ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಲು ಹಿಯೋ-ಹ್ವಾಂಗ್ ಈ ಪ್ರವಾಸ ಕೈಗೊಂಡಿದ್ದಳು.

ಹಿಯೋ-ಹ್ವಾಂಗ್ ಕೊರಿಯಾದಿಂದ ಬರುವಾಗ ದಿವ್ಯ ಶಕ್ತಿಯ ಕಲ್ಲೊಂದನ್ನು ತಂದಿದ್ದಳು. ಈ ಕಲ್ಲು ಆಕೆಗೆ ಸಮುದ್ರವನ್ನು ಶಾಂತಗೊಳಿಸಲು ಮತ್ತು ದಾರಿ ತೋರಲು ಸಹಾಯ ಮಾಡಿತ್ತಂತೆ. ಅಲ್ಲದೇ ಈ ಕಲ್ಲಿನ ಸಹಾಯದಿಂದಲೇ ಆಕೆ ಕೊರಿಯಾಗೆ ಮರಳಿದ್ದಳು ಎನ್ನುತ್ತದೆ ಇತಿಹಾಸ. ಇದೇ ಕಾರಣಕ್ಕೆ ಕೊರಿಯನ್ನರು ಅಯೋಧ್ಯೆಯನ್ನು ತಮ್ಮ ತಾಯಿಯ ಮನೆ ಎಂದು ಭಾವಿಸುತ್ತಾರೆ. ಅಲ್ಲದೇ ಪ್ರತೀ ವರ್ಷ ಅಯೋಧ್ಯೆಗೆ ಭೇಟಿ ನೀಡಿ ತಮ್ಮ ರಾಣಿ ಹಿಯೋ-ಹ್ವಾಂಗ್‌ಳನ್ನು ನೆನೆಯುತ್ತಾರೆ.

ಅಯೋಧ್ಯೆಗೆ ಮರಳಿದ ಹಿಯೋ-ಹ್ವಾಂಗ್ ನಂತರ ಹರಿದು ಹಂಚಿ ಹೋಗಿದ್ದ ಕೊರಿಯಾ ಭೂ-ಪ್ರದೇಶಗಳನ್ನು ಒಟ್ಟುಗೂಡಿಸಿ ಅಖಂಡ ಕೊರಿಯಾದ ಏಕಮಾತ್ರ ಮಹಾರಾಣಿಯಾಗಿ ಮೆರೆದಳು. ಆಕೆಯ ಶ್ರೆಯೋಭಿವೃದ್ಧಿಗೆ ಪಟ್ಟಕ್ಕೂ ಏರುವ ಮೊದಲು ಆಕೆ ಅಯೋಧ್ಯೆಗೆ ಬೇಟಿ ನೀಡಿದ್ದೇ ಕಾರಣ ಎಂಬ ನಂಬಿಕೆ ಕೊರಿಯನ್ನರಲ್ಲಿದೆ.

click me!