ಭಾರತದೊಳಗೆ ನುಸುಳಲು ಗಡಿಯಲ್ಲಿ ನಿಂತಿದ್ದಾರೆ 250 ಉಗ್ರರು!

First Published Jun 25, 2018, 6:31 PM IST
Highlights

250 ಉಗ್ರರು ಭಾರತದ ಗಡಿ ನುಸುಳಲು ಸಜ್ಜು

ಲೆಫ್ಟಿನೆಂಟ್ ಜನರಲ್ ಎ.ಕೆ ಭಟ್ ಮಾಹಿತಿ

ವಿಧ್ವಂಸಕ ಕೃತ್ಯವೆಸಗಲು ಸಜ್ಜಾಗಿ ಬಂದ ಉಗ್ರರು

ಕಾಯಾರ್ಯಾಚರಣೆಗೆ ಇಳಿಯಲಿದೆ ಎನ್‌ಎಸ್‌ಜಿ

ಶ್ರೀನಗರ(ಜೂ.25): ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ತೀವ್ರಗೊಳಿಸಿದ ಬೆನ್ನಲ್ಲೇ, ಕಣಿವೆ ರಾಜ್ಯಾದಾದ್ಯಂತ 250ಕ್ಕೂ ಹೆಚ್ಚು ಮಂದಿ ಭಯೋತ್ಪಾದಕರು ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 

ಈ ಬಗ್ಗೆ ಬಾರಾಮುಲ್ಲಾದಲ್ಲಿ ಮಾತನಾಡಿರುವ ಲೆ.ಜ. ಎ.ಕೆ.ಭಟ್, ಕಾಶ್ಮೀರ ಕಣಿವೆಯಲ್ಲಿ 250 ರಿಂದ 275 ಉಗ್ರರು ಸಕ್ರಿಯರಾಗಿದ್ದಾರೆ. ಅಲ್ಲದೆ, ಗಡಿ ರೇಖೆಯಲ್ಲಿ ಭಾರತದ ಮೇಲೆ ವಿಧ್ವಂಸಕ ಕೃತ್ಯವೆಸಗಲು 25ರಿಂದ 30 ತಂಡಗಳ ಒಟ್ಟು 250ರಿಂದ 270 ಉಗ್ರರು ಸಿದ್ಧರಾಗಿ ನಿಂತಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ. 

ದಕ್ಷಿಣ ಕಾಶ್ಮೀರಕ್ಕೆ ಹೋಲಿಕೆ ಮಾಡಿದರೆ, ಉತ್ತರ ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಕಡಿಮೆಯಿದೆ. ಉತ್ತರ ಕಾಶ್ಮೀರದಲ್ಲಿನ ಪರಿಸ್ಥಿತಿ ಕೂಡ ಉತ್ತಮವಾಗಿದೆ. ಇದಕ್ಕೆ ಜನತೆಗೆ ಪ್ರಮುಖವಾಗಿ ಯುವಕರಿಗೆ ಧನ್ಯವಾದಗಳನ್ನು ಹೇಳುವುದಾಗಿ ಭಟ್ ತಿಳಿಸಿದ್ದಾರೆ. 

ಶ್ರೀನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಎನ್ಎಸ್‌ಜಿ ಕೈಜೋಡಿಸುವುದೇ ಎಂಬ ಪ್ರಶ್ನಗೆ ಉತ್ತರಿಸಿರುವ ಅವರು, ಶ್ರೀನಗರದಲ್ಲಿ ಪೊಲೀಸರೊಂದಿಗೆ ಎನ್ಎಸ್‌ಜಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

click me!