
ನವದೆಹಲಿ (ಫೆ.01): 'ಉತ್ತಮ ಉದ್ದೇಶ ಎಂದಿಗೂ ವಿಫಲವಾಗುವುದಿಲ್ಲ' ಎಂಬ ಮಹಾತ್ಮ ಗಾಂಧಿಯ ಹೇಳಿಕೆನ್ನು ಉಲ್ಲೇಖಿಸಿ ಬಜೆಟ್ ಆರಂಭಿಸಿದ ಅರುಣ್ ಜೇಟ್ಲಿ, ಕೃಷಿಕರಿಗೆ ಭರ್ಜರಿ ಯೋಜನೆಗಳನ್ನು ಘೋಷಿಸಿದ್ದಾರೆ. ಕೃಷಿ ಜೇಟ್ಲಿ ಬಜೆಟ್'ನಲ್ಲಿ ಕೃಷಿ ಸಾಲಕ್ಕೆ 10 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ದೇಶದ ಬೆನ್ನೆಲುಬು ರೈತರನ್ನು ಶ್ಲಾಘಿಸಿದ್ದಾರೆ. ಭಾರತೀಯ ರೈತ ಪ್ರಸಕ್ತ ವರ್ಷದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಬಿತ್ತನೆ ಹೆಚ್ಚಾಗಿದೆ. ಉತ್ತಮ ಮುಂಗಾರಿನಿಂದ ಕೃಷಿ ಕ್ಷೇತ್ರ ಈ ವರ್ಷ ಶೇ. 4.1 ರಷ್ಟು ಅಭಿವೃದ್ಧಿಯಾಗುವ ನಿರೀಕ್ಷೆಯಿದೆ.
ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಮುಂದಿನ 5 ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ಧರಾಗಿದ್ದೇವೆ. 2017-18 ನೇ ಸಾಲಿನಲ್ಲಿ ರೈತರಿಗೆ ದಾಖಲೆ ನಿರ್ಮಾಣ ಪ್ರಮಾಣದಲ್ಲಿ 10 ಲಕ್ಷ ಕೋಟಿ ರೂ ಮೊತ್ತ ಸಾಲವನ್ನು ನೀಡಲಾಗುವುದು. ಜಮ್ಮು ಕಾಶ್ಮೀರ ಸೇರಿದಂತೆ ಪೂರ್ವ ರಾಜ್ಯಗಳ ರೈತರಿಗೆ ಸಹಕಾರಿ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ 60 ದಿನಗಳವರೆಗೆ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದಿದ್ದಾರೆ.
ಈ ಬಾರಿಯ ಬಜೆಟ್''ನಲ್ಲಿ ಗ್ರಾಮೀಣ, ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಿಗೆ ಅನೇಕ ಯೋಜನೆಗಳನ್ನು ಘೋಷಿಸಲಾಗಿದ್ದು, 1,87,223 ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಲಾಗಿದೆ.
ರೈತರ ಸಾಲಕ್ಕೆ ಸಂಬಂಧಿಸಿದಂತೆ ರೈತರ ಸಾಲಕ್ಕಾಗಿ 10 ಲಕ್ಷ ಕೋಟಿ ಹಣವನ್ನು ಮೀಸಲು ಇಡಲಾಗಿದೆ. ರೈತರ ಅಭಿವೃದ್ಧಿ ಹಾಗೂ ಕೃಷಿವಲಯಗಳ ಬೆಳವಣಿಗೆ, ನರೇಗಾ ಯೋಜನೆಯಲ್ಲಿ 48 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ , ರೈತರ ಬೆಳೆ ಹಾನಿಗೆ 9 ಸಾವಿರ ಕೋಟಿ ಹಣವನ್ನು ಘೋಷಣೆ ಮಾಡಲಾಗಿದೆ.
ಹಾಲು ಉತ್ಪಾದನೆಯನ್ನ ಹೆಚ್ಚಿಸಲು ಹಾಲು ಉತ್ಪಾದನೆಗೆ 8 ಸಾವಿರ ಕೋಟಿ ನಿಧಿಯನ್ನು ಸ್ಥಾಪಿಸಲಾಗಿದೆ. ಇನ್ನು ದೀರ್ಘಾವಧಿಯ ನೀರಾವರಿ ಯೋಜನೆಗೆ 20 ಸಾವಿರ ಕೋಟಿಯಷ್ಟು ಹಣವನ್ನು ಈ ಬಾರಿ ಬಜೆಟ್'ನಲ್ಲಿ ಮೀಸಲಿರಿಸಲಾಗಿದೆ.
ಈ ಬಾರಿಯ ಬಜೆಟ್'ನಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ರೈತರಿಗೆ ಫಸಲ್ ವಿಮಾ ಯೋಜನೆ ಅಡಿಯಲ್ಲಿ ಹಲವು ಹೊಸ ಅಂಶಗಳ ಘೋಷಣೆ ಮಾಡಿದೆ.
ಮಣ್ಣಿನ ಗುಣ ಮತ್ತು ಅದರ ಸ್ವಭಾವದ ಮೇಲೆ ‘ರೈತರು ಮಣ್ಣು ಪರೀಕ್ಷೆ ಮಾಡಿಸಲು ಹೆಚ್ಚುವರಿ ಮಿನಿ ಲ್ಯಾಬ್‌ಗಳ ಸ್ಥಾಪನೆ ಮಾಡಲಾಗಿದ್ದು , ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ, ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣವನ್ನು ಮಾಡುವ ಘೋಷಣೆಯನ್ನು ಮಾಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ನಲ್ಲಿ ಕಳೆದ ಬಾರಿಗಿಂತ ಶೇ 24 ರಷ್ಟು ಹೆಚ್ಚಳ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.