ಇಂದು ಬಹುನಿರೀಕ್ಷಿತ ಮಹಾ ಬಜೆಟ್: ಜನಸಾಮಾನ್ಯರ ನಿರೀಕ್ಷೆಗಳು ನೂರೆಂಟು

Published : Jan 31, 2017, 08:05 PM ISTUpdated : Apr 11, 2018, 12:45 PM IST
ಇಂದು ಬಹುನಿರೀಕ್ಷಿತ ಮಹಾ ಬಜೆಟ್: ಜನಸಾಮಾನ್ಯರ ನಿರೀಕ್ಷೆಗಳು ನೂರೆಂಟು

ಸಾರಾಂಶ

ಬಹುನಿರೀಕ್ಷಿತ ಸಂಸತ್​ ಬಜೆಟ್​ ಇಂದು ಅರುಣ್​ ಜೇಟ್ಲಿ ಮಂಡಿಸಲಿದ್ದಾರೆ. ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್​ ಹಾಗೂ ಮುಖ್ಯ ಬಜೆಟ್'​​​​ನ್ನು ವಿಲೀನಗೊಳಿಸಿ ಮಂಡನೆ ಮಾಡಲಾಗುತ್ತಿದೆ. ಹೀಗಾಗಿ ಈ ಬಾರಿಯ ಬಜೆಟ್​ ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನೂ ಈ ಸಾರಿಯ ಬಜೆಟ್'ನ  ಕುರಿತಾದ ಸಂಪೂರ್ಣ ವರದಿ ಇಲ್ಲಿದೆ.

ನವದೆಹಲಿ(ಫೆ.01): ಬಹುನಿರೀಕ್ಷಿತ ಸಂಸತ್​ ಬಜೆಟ್​ ಇಂದು ಅರುಣ್​ ಜೇಟ್ಲಿ ಮಂಡಿಸಲಿದ್ದಾರೆ. ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್​ ಹಾಗೂ ಮುಖ್ಯ ಬಜೆಟ್'​​​​ನ್ನು ವಿಲೀನಗೊಳಿಸಿ ಮಂಡನೆ ಮಾಡಲಾಗುತ್ತಿದೆ. ಹೀಗಾಗಿ ಈ ಬಾರಿಯ ಬಜೆಟ್​ ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನೂ ಈ ಸಾರಿಯ ಬಜೆಟ್'ನ  ಕುರಿತಾದ ಸಂಪೂರ್ಣ ವರದಿ ಇಲ್ಲಿದೆ.

ದೇಶದ ಜನರ ಚಿತ್ತ ಜೇಟ್ಲಿ ಸೂಟ್​'ಕೇಸ್'​ನತ್ತ

ಇಂದು ಬೆಳಗ್ಗೆ ೧೧ ಗಂಟೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ  ೨೦೧೭-೧೮ ನೇ ಸಾಲಿನ ಹಣಕಾಸು ಮುಂಗಡಪತ್ರ ಮಂಡಿಸಲಿದ್ದಾರೆ. ನೋಟು ರದ್ದತಿಯ ನಂತರ ದೇಶದಲ್ಲಿ ಆರ್ಥಿಕ  ಸ್ಥಿತಿಗತಿ ಏರು ಪೇರಾಗಿರುವಾಗ ಜೇಟ್ಲಿ ನೀಡುವ ಕಾಯಕಲ್ಪದ ಬಗ್ಗೆ ದೇಶದ ಉದ್ಯಮ ಮತ್ತು ಜನಸಾಮಾನ್ಯ ಇಬ್ಬರಿಗೂ ಕೂಡ ಸಾಕಷ್ಟು ನಿರೀಕ್ಷೆಗಳಿವೆ. ಇನ್ನುನೂ ಸ್ವಾತಂತ್ರ್ಯ ಬಂದ  ನಂತರ ಮೊದಲ ಬಾರಿಗೆ ರೈಲ್ವೆ  ಇಲಾಖೆಯ ಪ್ರತ್ಯೇಕ ಮುಂಗಡಪತ್ರ ರದ್ದುಗೊಳಿಸಿ, ಸಾಮಾನ್ಯ ಬಜೆಟ್'ನಲ್ಲಿಯೇ ರೈಲ್ವೆ ಇಲಾಖೆಯ ಆಯವ್ಯಯವನ್ನು ಕೂಡ ಮುಂದಿಡಲಿದ್ದಾರೆ.

ಮುಂಬರುವ ವರ್ಷ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಜಾರಿಯಾಗಲಿದ್ದು ಹೀಗಾಗಿ ದೇಶದ ತೆರಿಗೆ ಪದ್ಧತಿ ಸರಳೀಕರಣ ದ್ರಷ್ಟಿಯಿಂದ ಕೂಡ ಅರುಣ್ ಜೇಟ್ಲಿ ಪ್ಲಾನ್ ಎನು ಎಂಬುದು ಗೊತ್ತಾಗಲಿದೆ . 

-ಸರ್ವಿಸ್ ಟ್ಯಾಕ್ಸ್ ೧೬ ರಿಂದ ೧೮ ಪ್ರತಿಶತಕ್ಕೆ ಏರಿಸುವ ಸಾಧ್ಯತೆ

-ಇನ್ಕಮ್ ಟ್ಯಾಕ್ಸ್  ಸ್ಲ್ಯಾಬ್ ೪ ಲಕ್ಷಕ್ಕೆ ಏರಿಸುವ ಸಾಧ್ಯತೆ 

-ಪರ್ಸನಲ್ ಲೋನ್ ನೀಡುವ ದರದಲ್ಲಿ ಗಣನೀಯ ಇಳಿಕೆ ಸಾಧ್ಯತೆ 

-ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಒತ್ತು ನೀಡುವ ದೃಷ್ಟಿಯಿಂದ ಈ ನಿರ್ಧಾರ

-ಆಟೋ ಮೊಬೈಲ್ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ 

-ಸಾರ್ವಜನಿಕ ವಲಯದಲ್ಲಿ ಹೂಡಿಕೆ ಪ್ರಮಾಣ ಏರಿಕೆ

ನಿನ್ನೆ ಆರಂಭವಾದ ಸಂಸತ್ ಬಜೆಟ್ ಅಧಿವೇಶನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಜೆಟ್ ಬಗ್ಗೆ ಉತ್ತಮ ಆಶಯ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಹಣಕಾಸು ಬಜೆಟ್'​ಗೂ ಮುನ್ನಾ ದಿನ ಮಂಡಿಸಲಾಗುವ ಆರ್ಥಿಕ ಸರ್ವೇಕ್ಷಣೆಯನ್ನು ನಿನ್ನೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ .

-ಆರ್ಥಿಕ ಕುಸಿತ ಮೂರು ತಿಂಗಳಲ್ಲಿ ಚೇತರಿಕೆಯಾಗಲಿದೆ 

-ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಳೆದ ೪ ತಿಂಗಳಲ್ಲಿ ಹೆಚ್ಚು ಕುಸಿತ

-ನೋಟ್​ ಬ್ಯಾನ್​ನಿಂದ ಎಲ್ಲ ವರ್ಗಗಳಿಗೆ ಹಣ ಸಮಾನ ಹಂಚಿಕೆ

ಇನ್ನೊಂದೆಡೆ ಪ್ರಧಾನಿ ಮೋದಿ ಕೂಡ ಬಜೆಟ್'​ಗೆ ಸಹಕರಿಸುವಂತೆ ಸರ್ವ ಪಕ್ಷಗಳಿಗೂ ಮನವಿ ಮಾಡಿಕೊಂಡಿದ್ದಾರೆ.. ಒಟ್ಟಿನಲ್ಲಿ ಬಹು ನಿರೀಕ್ಷಿತ ಜೇಟ್ಲಿ  ಬಜೆಟ್ ರಹಸ್ಯ ಇಂದು ಹೊರ ಬೀಳಲಿದ್ದು, ಯಾರಿಗೆ ಸಿಹಿ ಯಾರಿಗೆ ಕಹಿ ಎನ್ನುವುದು ಗೊತ್ತಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!