ಆಧಾರ್‌ ಎಫೆಕ್ಟ್: 2.75 ಕೋಟಿ ಬೋಗಸ್‌ ರೇಶನ್‌ ಕಾರ್ಡು ರದ್ದು

By Suvarna Web DeskFirst Published Mar 2, 2018, 8:30 AM IST
Highlights

ಪಡಿತರ ಚೀಟಿಗಳ ಡಿಜಟಲೀಕರಣ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಕ್ರಮದಿಂದಾಗಿ ಇದುವರೆಗೂ 2.75 ಕೋಟಿ ನಕಲಿ ಮತ್ತು ಬೋಗಸ್‌ ರೇಷನ್‌ ಕಾರ್ಡ್‌ಗಳನ್ನು ವ್ಯವಸ್ಥೆಯಿಂದ ತೊಡೆದು ಹಾಕಲು ಸರ್ಕಾರಕ್ಕೆ ನೆರವಾಗಿದೆ ಎಂದು ಕೇಂದ್ರ ಆಹಾರ ಇಲಾಖೆ ಹೇಳಿದೆ.

ನವದೆಹಲಿ: ಪಡಿತರ ಚೀಟಿಗಳ ಡಿಜಟಲೀಕರಣ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಕ್ರಮದಿಂದಾಗಿ ಇದುವರೆಗೂ 2.75 ಕೋಟಿ ನಕಲಿ ಮತ್ತು ಬೋಗಸ್‌ ರೇಷನ್‌ ಕಾರ್ಡ್‌ಗಳನ್ನು ವ್ಯವಸ್ಥೆಯಿಂದ ತೊಡೆದು ಹಾಕಲು ಸರ್ಕಾರಕ್ಕೆ ನೆರವಾಗಿದೆ ಎಂದು ಕೇಂದ್ರ ಆಹಾರ ಇಲಾಖೆ ಹೇಳಿದೆ.

2013ರ ಜನವರಿಯಿಂದಲೇ ಪಡಿತರ ಚೀಟಿಗಳನ್ನು ಡಿಜಟಲೀಕರಣಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಇದು ಸಬ್ಸಿಡಿ ಸಹಿತ ಗೋಧಿ, ಅಕ್ಕಿ ಮತ್ತು ಇತರ ಆಹಾರ ದಾನ್ಯಗಳ ಸೋರಿಕೆಯನ್ನು ತಪ್ಪಿಸಲು ನೆರವಾಯಿತು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 17500 ರು. ಕೋಟಿ ಉಳಿತಾಯವಾಗಿದೆ. ಅಲ್ಲದೆ, ಸರಿಯಾದ ಫಲಾನುಭವಿಗಳಿಗೆ ಕೇಂದ್ರದ ಯೋಜನೆಗಳು ತಲುಪಿಸಲು ಇದು ನೆರವಾಗಿದೆ. ಆದರೆ, ಪಡಿತರ ಚೀಟಿಗೆ ಹೊಸ ಫಲಾನುಭವಿಗಳು ಸೇರ್ಪಡೆಯಾಗುತ್ತಿರುವ ಕಾರಣದಿಂದಾಗಿ ಸರ್ಕಾರಕ್ಕೆ ನೇರವಾಗಿ ಲಾಭವಾಗುತ್ತದೆ ಎನ್ನಲಾಗದು ಎಂದು ಆಹಾರ ಮತ್ತು ಪೂರೈಕೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ.

ಸರ್ಕಾರದ ದಾಖಲೆಗಳ ಪ್ರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದಲ್ಲಿ 23.19 ಕೋಟಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಇವುಗಳಲ್ಲಿ ಶೇ.82ರಷ್ಟುಪಡಿತರ ಚೀಟಿಗಳನ್ನು ಡಿಜಿಟಲೀಕರಣ ಮತ್ತು ಆಧಾರ್‌ ಜೋಡಣೆ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ಶೇ.100ರಷ್ಟುಆಧಾರ್‌ ಜೋಡಣೆಯಾದಾಗ ಮತ್ತಷ್ಟುಬೋಗಸ್‌ ಪಡಿತರ ಚೀಟಿಗಳು ನಿಷ್ಕಿ್ರಯಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

click me!