
ನವದೆಹಲಿ (ನ.17): ಹಣಕಾಸು ಅಡಚಣೆಯಿಂದಾಗಿ ದಿನ ನಿತ್ಯದ ಅಗತ್ಯ ವಸ್ತುಗಳು ಸಿಗದೆ ಜನ ಪರದಾಡುತ್ತಿದ್ದಾರೆ. ಇದು ನೋಟ್ ಬ್ಯಾನ್ ಅಲ್ಲ ಇದೊಂದು ದೊಡ್ಡ ಹಗರಣ ಎಂದು ಆಜಾದ್ಪುರ ಮಂಡಿಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಲ್ಯರಂಥ ಉದ್ಯಮಿಗಳ ರಕ್ಷಣೆಗೆ ನಿಂತಿದೆ. ಕಪ್ಪುಹಣ ಇರುವವರ ಹೆಸರುಗಳನ್ನು ಸರ್ಕಾರ ಮೊದಲು ಬಹಿರಂಗಗೊಳಿಸಲಿ. ಕಪ್ಪುಹಣ ತಡೆಯುವ ನೆಪದಲ್ಲಿ ಜನರಿಗೆ ಮೋದಿ ವಂಚಿಸಿದ್ದಾರೆ. ಇದು 8 ಲಕ್ಷ ಕೋಟಿ ಮೌಲ್ಯದ ಭಾರಿ ಹಗರಣ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಜನಾರ್ದನರೆಡ್ಡಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ದುಬಾರಿ ವೆಚ್ಚದಲ್ಲಿ ತಮ್ಮ ಪುತ್ರಿಯ ಮದುವೆ ಮಾಡಿದ್ದಾರೆ. ಇಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ಕೇಂದ್ರ ಹೇಳಲಿ.
ದೇಶದ ಜನಸಾಮಾನ್ಯರು ನಿತ್ಯ ಹಣಕ್ಕಾಗಿ ಬ್ಯಾಂಕ್ಗಳ ಮುಂದೆ ನಿಂತು ಪರದಾಡುತ್ತಿದ್ದಾರೆ. ಜನರು ತಮ್ಮ ಮಕ್ಕಳ ಮದುವೆಗೆ ಹಣ ಪಡೆಯಲು ಕಷ್ಟಪಡುತ್ತಿದ್ದಾರೆ.
ಆದರೆ ರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲಿ ಕೇಜ್ರಿ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.