ಅಡುಗೆ, ಊಟ & ಎಲೆಕ್ಷನ್ ರಿಲೇಷನ್ ಸ್ಟೋರಿ ಹೇಳಿದ ಮೋದಿ

By Suvarna Web DeskFirst Published Mar 31, 2017, 10:05 AM IST
Highlights

ತರಾತುರಿಯಲ್ಲಿ ಚಪಾತಿ ಹಿಟ್ಟು ಕಲಸಿ ಮಾಡಿದರೆ, 100 ಗ್ರಾಂ ಹಿಟ್ಟಿಗೆ 3 ಚಪಾತಿ ತಯಾರಾಗುತ್ತೆ
ಅಷ್ಟೇ ಹಿಟ್ಟನ್ನು 3 ಗಂಟೆ ಮೊದಲೇ ಕಲಸಿಟ್ಟರೆ, 100 ಗ್ರಾಂಗೆ 3ಕ್ಕಿಂತ ಹೆಚ್ಚು ಚಪಾತಿಯಾಗುತ್ತೆ!
ಕಾಳನ್ನು ಅರ್ಧ ಗಂಟೆ ನೆನೆಸಿಟ್ಟರೆ, ಅದರ ತೂಕದಲ್ಲಿ ಯಾವ ವ್ಯತ್ಯಾಸವೂ ಆಗಲ್ಲ
ಅಷ್ಟೇ ಕಾಳನ್ನು 3 ಗಂಟೆ ಮೊದಲೇ ನೆಸಿಟ್ಟರೆ, ಮೊಳಕೆ ಕಾಳು ಜಾಸ್ತಿಯಾಗುತ್ತೆ

ಇದೇನು? ರಾಜಕೀಯ ಮಾಡುವ ಸಂಸದರಿಗೆ ಪ್ರಧಾನಿ ಮೋದಿ ಪಾಕಶಾಸ್ತ್ರ ಹೇಳಿಕೊಟ್ಟರೆಂದು ನೀವು ಭಾವಿಸಿದರೆ ಅದು ತಪ್ಪು.  ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸಂಸದರ ಜೊತೆ ಚರ್ಚಿಸುತ್ತಾ ಪ್ರಧಾನಿ ಮೋದಿ, ಅಡುಗೆ ಮತ್ತು ಊಟ ಹಾಗೂ ಎಲೆಕ್ಷನ್ ರಿಲೇಷನ್ ಸ್ಟೋರಿ ಹೇಳಿ ಕೆಲ ಉದಾಹರಣೆಗಳನ್ನು ನೀಡಿದ್ದು ಹೀಗೆ.

ಚುನಾವಣೆಗೂ ಈ ಸೂತ್ರ ಅನ್ವಯವಾಗುತ್ತೆ ಎಂಬುದನ್ನು ಮರೆಯಬೇಡಿ,  ಆದಷ್ಟು ಬೇಗನೇ ಜನರಿಗೆ ನಮ್ಮ ಯೋಜನೆಗಳ ಮಾಹಿತಿ ತಲುಪಿಸಿ, ಚುನಾವಣೆ ಬಂದಾಗ ಹೇಳುವುದಕ್ಕಿಂತ, ಈಗಲೇ ಹೇಳುವುದು ಪರಿಣಾಮಕಾರಿ
ಬಡವರಿಗೆ ಯೋಜನೆಗಳ ಮಾಹಿತಿ ನೀಡಿ, ಅವುಗಳ ಲಾಭ ತಲುಪಿಸಿ, ಜನ ಚುನಾವಣೆಗೆ ಮೊದಲೇ ನಮ್ಮ ಬಗ್ಗೆ ಪಾಸಿಟಿವ್ ಆಗಿ ಯೋಚಿಸುತ್ತಾರೆ ಎಂದು ಪ್ರಧಾನಿ ಮೋದಿ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.

click me!