
ಬೆಂಗಳೂರು(ಮಾ.31): ಬೆಂಗಳೂರಿನಲ್ಲಿ ಕಾರ್ಪೊರೇಟರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. 15 ಲಕ್ಷ ಲಂಚ ಸ್ವೀಕರಿಸುವಾಗ ಅಧಿಕಾರಿಗಳ ಕೈಗೆ ಕಾರ್ಪೊರೇಟರ್ ಸಿಕ್ಕಿ ಬಿದ್ದಿದ್ದಾರೆ.
ಕೃಷ್ಣಮೂರ್ತಿ, ರಾಜಾಜಿನಗರ ವಾರ್ಡ್ ನಂಬರ್ 99ರ ಕಾರ್ಪೊರೇಟರ್ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಈತನನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಪೋರೇಟರ್ ಗುತ್ತಿಗೆದಾರರ ಬಳಿ ಒಟ್ಟು 23 ಲಕ್ಷ ಬೇಡಿಕೆಯಿಟ್ಟಿದ್ದು, ಮೊದಲ ಕಂತಿನ ಭಾಗವಾಗಿ ತಮ್ಮ ಮನೆಯಲ್ಲೇ 15 ಲಕ್ಷ ಸ್ವೀಕರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಠ ಬಳಿ ಇರುವ ಕಾರ್ಪೊರೇಟರ್ ಮನೆ
ಬಿಬಿಎಂಪಿಯಿಂದ ಕಾಮಗಾರಿಗಾಗಿ 3 ಕೋಟಿಯ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ಹಣ ಬಿಡುಗಡೆ ಮಾಡಬೇಕಾದರೆ ಲಂಚ ಕೊಡುವಂತೆ ಈತ ಬೇಡಿಕೆಯಿಟ್ಟಿದ್ದ. ಈ ಕುರಿತಾಗಿ ಎಸಿಬಿ ಐಜಿಪಿ ಶರತ್ ಚಂದ್ರಗೆ ದೂರು ಕೂಡಾ ನೀಡಲಾಗಿತ್ತು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಎಸಿಬಿ ಎಸ್ಪಿ ಗಿರೀಶ್, ಡಿವೈಎಸ್ಪಿ ಬಾಲರಾಜು ನೇತೃತ್ವದಲ್ಲಿ ಕಾರ್ಪೋರೇಟರ್ ಮನೆಯ ಮೇಲೆ ದಾಳಿ ನಡೆಸಿ ಗುತ್ತಿಗೆದಾರ ದನಂಜಯ್ ಎಂಬುವರಿಂದ ಲಂಚ ಪಡೆಯುತ್ತಿದ್ದಾಗಲೇ ಕಾರ್ಪೋರೇಟರ್ ಕೃಷ್ಣ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧಿತ ಕಾರ್ಪೋರೇಟರ್'ನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಲಂಚ ಪಡೆಯುತ್ತಿದ್ದ ಕಾರ್ಪೋರೇಟರ್ ಕೃಷ್ಣ ಮೂರ್ತಿ ಸಿಎಂ ಸಿದ್ಧರಾಮಯ್ಯರವರ ಆಪ್ತ ಎಂಬ ವಿಚಾರ ಬೆಳಕಿಗೆ ಬಂದಿದೆ. ಈತ ಹಲವು ಗುತ್ತಿಗೆ ಪ್ರಕರಣಗಳಲ್ಲಿ ಅಕ್ರಮವೆಸಗಿರುವುದು ಪತ್ತೆಯಾಗಿದ್ದು, ತನ್ನ ಪ್ರಭಾವ ಬಳಸಿ ಅಕ್ರಮ ನಡೆಸಿರುವ ಬಗ್ಗೆ ಎಸಿಬಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.