ಕೆಲವೇ ವರ್ಷಗಳಲ್ಲಿ ಮಾಯವಾಗಲಿವೆ , ಜಗತ್ತಿನ ಮೂರು ಪ್ರಮುಖ ನಗರಗಳು!: ವಿಶ್ವಕ್ಕೂ ಕಾದಿದೆ ಅಪಾಯ

Published : Nov 30, 2016, 03:01 PM ISTUpdated : Apr 11, 2018, 12:44 PM IST
ಕೆಲವೇ ವರ್ಷಗಳಲ್ಲಿ ಮಾಯವಾಗಲಿವೆ , ಜಗತ್ತಿನ ಮೂರು ಪ್ರಮುಖ ನಗರಗಳು!: ವಿಶ್ವಕ್ಕೂ ಕಾದಿದೆ ಅಪಾಯ

ಸಾರಾಂಶ

ಇನ್ನು ಕೆಲವೇ ವರ್ಷಗಳಲ್ಲಿ ಜಗತ್ಪ್ರಸಿದ್ದ ನಗರಗಳು ಮುಳುಗಿ ಹೋಗಬಹುದು ಅಂತ ಭಯ ಹುಟ್ಟಿಸ್ತಿದ್ದಾರೆ ವಿಜ್ಞಾನಿಗಳು. ಹೀಗಾಗಿ ಜನರೆಲ್ಲಾ ಭಯದಲ್ಲೇ ನಿದ್ದೇ ಮಾಡುವಂತಾಗ್ತಿದೆ. ಬೆಳಗಾಗುವಷ್ಟ್ರಲ್ಲಿ ನಾವು ಏಳ್ತೀವೋ ಇಲ್ವೋ ಅನ್ನೋ ಭಯ, ಈಗ ಈ ಜನರನ್ನ ಕಾಡ್ತಾ ಇದೆ.

ಜಗತ್ತಿನ ಮೂರು ಮಹಾ ನಗರಗಳಲ್ಲಿ ಈಗ ಜಲಪ್ರಳಯದ ಆತಂಕ ಎದುರಾಗಿದೆ. ಯಾವ ಟೈಮಲ್ಲಿ ಏನಾಗಬಹುದೋ ಅನ್ನೋ ಭಯ ಶುರುವಾಗಿದೆ. ಯಾಕಂದ್ರೆ, ಈ ಜಲಪ್ರಳಯ ತುಂಬಾ ಲೇಟ್​ ಅಂಥ ಅನ್ನೋ ಹಾಗೇ ಇಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಜಗತ್ಪ್ರಸಿದ್ದ ನಗರಗಳು ಮುಳುಗಿ ಹೋಗಬಹುದು ಅಂತ ಭಯ ಹುಟ್ಟಿಸ್ತಿದ್ದಾರೆ ವಿಜ್ಞಾನಿಗಳು. ಹೀಗಾಗಿ ಜನರೆಲ್ಲಾ ಭಯದಲ್ಲೇ ನಿದ್ದೇ ಮಾಡುವಂತಾಗ್ತಿದೆ. ಬೆಳಗಾಗುವಷ್ಟ್ರಲ್ಲಿ ನಾವು ಏಳ್ತೀವೋ ಇಲ್ವೋ ಅನ್ನೋ ಭಯ, ಈಗ ಈ ಜನರನ್ನ ಕಾಡ್ತಾ ಇದೆ.

ಅಪಾಯದ ಮುನ್ಸೂಚನೆ

ಜಾಗತಿಕ ವಲಯದಲ್ಲಿ ಮಹತ್ವದ ಬದಲಾವಣೆಗಳಾಗ್ತಾ ಇವೆ. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಅಪಾಯದ ಮುನ್ಸೂಚನೆ ಸಿಗ್ತಾ ಇದೆ. ಈಗಲೇ ಎಚ್ಚೆತ್ತುಕೊಳ್ಳದೇ ಇದ್ರೆ, ಅಪಾಯ ತಪ್ಪಿದ್ದಲ್ಲ ಅಂತಿದ್ದ ಅರೆ ವಿಜ್ಞಾನಿಗಳು. ಇಷ್ಟಿದ್ರೂ, ಕಳೆದ ವರ್ಷ ಅದೊಂದು ಮಹಾ ದುರ್ಘಟನೆ ನಡೆದೇ ಹೋಗಿದೆ. ಈಗ ಅದು ಮೂರು ಮಹಾನಗರಗಳನ್ನು ಮುಳುಗಿಸೋ ಆತಂಕ ತಂದೊಡ್ಡಿದೆ.

ಅತೀ ಶ್ರೀಮಂತ ನಗರಗಳಿವು

ನ್ಯೂಯಾರ್ಕ್​, ಲಂಡನ್​, ಸಿಡ್ನಿ . ಈ ಮೂರು ಜಗದ್ವಿಖ್ಯಾತ ನಗರಗಳಿಗೆ ಈಗಾಗಲೇ ಜಲಪ್ರಳಯದ ಮುನ್ಸೂಚನೆ ಸಿಕ್ಕಿದೆ. 2013ರಲ್ಲೇ  ಜಲಪ್ರಳಯಕ್ಕೆ  ಕೌಂಟ್​ ಡೌನ್​ ಶುರುವಾಗಿದೆ. ಅದರಲ್ಲೂ ಕಳೆದ ವರ್ಷ ಒಂದು ಅತಿ ದೊಡ್ಡ ಎಡವಟ್ಟು ನಡೆದು ಬಿಟ್ಟಿತ್ತು. ಆ ಎಡವಟ್ಟು ಹೇಗಿತ್ತು ಅಂದ್ರೆ, ಮೂರು ಮಹಾನಗರಗಳಲ್ಲಿ ಜಲಪ್ರಳಯವಾಗೋದು ಗ್ಯಾರಂಟಿ ಅನ್ನೋ ಮಟ್ಟಕ್ಕೆ, ಸನ್ನಿವೇಶವನ್ನು ಕ್ರಿಯೇಟ್​ ಮಾಡಿದೆ.

ವಿಶ್ವವೇ ಮುಳುಗಿ ಹೋಗುತ್ತೆ

ಮಹಾ ಪ್ರಳಯ. ವಿಶ್ವವೇ ಮುಳುಗಿ ಹೋಗುತ್ತೆ. ವಿವಿಧ ರೀತಿಯಲ್ಲಿ ಜಗತ್ತು ನಾಶವಾಗುತ್ತೆ ಅನ್ನೋ ಸುದ್ದು ಈ ಹಿಂದೆ ಕೇಳಿ ಬಂದಿತ್ತು. ಆ ಸುದ್ದಿಯನ್ನು ಆಧರಿಸಿನೇ ಹಲವು ಸಿನಿಮಾಗಳು ತೆರೆಗೆ ಅಪ್ಪಳಿಸಿದ್ವು.

ಜಗತ್ತು ಅಂತ್ಯವಾಗೋ ದೃಶ್ಯಗಳನ್ನ, ಸಿನಿಮಾಗಳಲ್ಲಿ ನೋಡ್ತಿದ್ರೇನೇ ಎದೆ ಝಲ್​ ಅನ್ನುತ್ತೆ. ಇದೇ ತರ ನಿಜ ಜೀವನದಲ್ಲಿ ಆದ್ರೆ ಹೇಗಪ್ಪಾ ಅನ್ನೋ ಪ್ರಶ್ನೆ ಬಹುತೇಕರನ್ನ ಕಾಡಿದ್ದೂ ಇದೆ. ಆದ್ರೆ ಸಿನಿಮಾದಲ್ಲಿನ ದೃಶ್ಯಗಳು ಮುಂದಿನ ದಿನಗಳಲ್ಲಿ ನಿಜವಾಗುವ ಆತಂಕ ಎದುರಾಗಿದೆ. ಇದಕ್ಕೆ ಕಾರಣ, ಅಂಟಾರ್ಟಿಕ್​ ಖಂಡದಲ್ಲಾಗ್ತಿರೋ ಆಘಾತಕಾರಿ ಬದಲಾವಣೆ.

ಹಿಮಪರ್ವತಗಳು ಕುಸಿದು ಬೀಳ್ತಿವೆ

ಜಾಗತಿಕ ಮಟ್ಟದಲ್ಲಿ ಆಗ್ತಾ ಇರೋ ಹವಾಮಾನ ವೈಪರಿತ್ಯದಿಂದಾಗಿ, ಹಿಮಪರ್ವತಗಳು ಕುಸಿದು ಬೀಳ್ತಿವೆ. ಕಳೆದ ನೂರು ವರ್ಷಗಳಲ್ಲಿ, ಅಂದಾಜಿಸಲಾಗದಷ್ಟು ಹಿಮಪರ್ವತಗಳು ಜಗತ್ತಿನಾದ್ಯಂತ ಕರಗಿ ಹೋಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅಂಟಾರ್ಟಿಕದಲ್ಲಿರೋ ಬೃಹತ್ ಹಿಮಪರ್ವತಗಳು ನೆಲಕ್ಕುರುಳ್ತಾ ಇರೋದು.

ಜಲಪ್ರಳಯದ ಮುನ್ಸೂಚನೆ ನೀಡ್ತಿದೆ

ಪಶ್ಚಿಮ ಅಂಟಾರ್ಟಿಕಾದಲ್ಲಿ ಸುಮಾರು 1 ಕೋಟಿ 40 ಲಕ್ಷ ಚದರ ಕಿಲೋಮೀಟರ್​ನಷ್ಟು ವಿಸ್ತಾರವಾದ ವ್ಯಾಪ್ತಿಯಲ್ಲಿ ಹಿಮಪರ್ವತಗಳು ಪ್ರಾಕೃತಿಕವಾಗಿ ನಿರ್ಮಾಣಗೊಂಡಿದ್ದವು. ಅಂದ್ರೆ ಜಗತ್ತಿನ ಏಳು ಖಂಡಗಳಲ್ಲಿ ಒಂದು ಖಂಡದಷ್ಟು ಪ್ರದೇಶ ಹಿಮಪರ್ವತಗಳಿಂದಲೇ ಕೂಡಿದೆ. ಆದ್ರೆ ಆ ಒಂದು ಖಂಡವೇ ಸಂಪೂರ್ಣವಾಗಿ ಕರಗಿ ಹೋಗುವ ಆತಂಕವಿದೆ.

2013ರಲ್ಲಿ 363 ಚದರ ಕಿಲೋಮೀಟರ್​ಗಳಷ್ಟು ವಿಸ್ತಾರವಾದ ಹಿಮಪರ್ವತ ಅಂಟಾರ್ಟಿಕಾ ಭಾಗದಲ್ಲಿ ಕುಸಿದು ಬಿದ್ದಿದೆ ಅಂತ ಓಹಿಯೋ ಯೂನಿವರ್ಸಿಟಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆದ್ರೆ ಅದು ಸಂಪೂರ್ಣವಾಗಿ ನೆಲಕ್ಕುಸಿಯದೇ, ಹಿಮಪರ್ವತದ ನಡುವಲ್ಲೇ ಸಿಕ್ಕಾಕೊಂಡಿದೆ ಅಂತ ಹೇಳಲಾಗ್ತಿದೆ.

2013ರಿಂದ 2015ರವರೆಗೆ. 2 ವರ್ಷಗಳ ಅಂತರದಲ್ಲಿ, ಕುಸಿದು ಬಿದ್ದಿದ್ದ ಆ ಹಿಮಪರ್ವತ,  ಜಾಗ ಬದಲಿಸಿದೆ ಅಂತಾನೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದಿಂದ ಅಂಟಾರ್ಟಿಕಾದಲ್ಲಿ ಇಂಥಾ ಬದಲಾವಣೆಗಳು ಆಗ್ತಾ ಇದ್ದು, ಇದು ಮುಂದುವರೆದಿದ್ದೇ ಆದ್ರೆ, ಇನ್ನು ಕೆಲವೇ ದಿನಗಳಲ್ಲಿ ಜಗತ್ತಿನ ಮೂರು ಮಹಾನಗರಗಳಾದ ನ್ಯೂಯಾರ್ಕ್​, ಲಂಡನ್, ಸಿಡ್ನಿಯಲ್ಲಿ ಜಲಪ್ರಳಯವಾಗೋ ಸಾಧ್ಯತೆ ಇದೆ ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಒಂದು ವೇಳೆ, ಜಾಗತಿಕ ತಾಪಮಾನ ಹೆಚ್ಚಾದ್ರೆ, ಮುಂದಿನ ದಿನಗಳಲ್ಲಿ ಅಂಟಾರ್ಟಿಕದಲ್ಲಿರೋ ಎಲ್ಲಾ ಹಿಮಪರ್ವತಗಳು ಕರಗಿ ನೀರಾಗಲಿವೆ. ಹಾಗೇನಾದ್ರೂ ಆದ್ರೆ, ಬರೀ ಮೂರು ನಗರಗಳು ಮಾತ್ರವಲ್ಲ. ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳು ನೀರಲ್ಲಿ ಮುಳುಗಿ ಹೋಗಲಿವೆ.

ವರದಿ: ಶೇಖರ್ ಪೂಜಾರಿ, ಸುವರ್ಣ  ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆ ಆಗಿರುವ ಬೈರತಿ ಬಸವರಾಜು ವಿರುದ್ಧ ಲುಕ್ ಔಟ್ ನೋಟಿಸ್
ಜರ್ಮನಿಯಲ್ಲೂ ‘ಮತಚೋರಿ’ ಆರೋಪ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ