ಸದನದಲ್ಲಿ  ‘ನೈಸ್’​ ಗದ್ದಲ

Published : Nov 30, 2016, 02:39 PM ISTUpdated : Apr 11, 2018, 12:53 PM IST
ಸದನದಲ್ಲಿ  ‘ನೈಸ್’​ ಗದ್ದಲ

ಸಾರಾಂಶ

ನೈಸ್ ಅಕ್ರಮಗಳ ಕುರಿತು ತನಿಖೆಗೆ ಕಾಗೋಡು ತಿಮ್ಮಪ್ಪ ನವರು ಸ್ಪೀಕರ್ ಆಗಿದ್ದಾಗ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ರಚಿಸಿದ್ದರು. ಆ ಸದನ ಸಮಿತಿ ಈಗಾಗಲೇ ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ್ದು, ವರದಿ ಮಂಡನೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಬೆಳಗಾವಿ  (ನ.30): ನೈಸ್ ಅಕ್ರಮಗಳ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಸದನ ಸಮಿತಿ ನೀಡಿರುವ ವರದಿ ಮಂಡಿಸಬೇಕೆಂದು ಒತ್ತಾಯಿಸಿ ಬಿಜೆಪಿಸದಸ್ಯರು ವಿಧಾನಸಭೆಯಲ್ಲಿಂದು ಸದನದ ಬಾವಿಗಿಳಿದು ಧರಣಿ ನಡೆಸಿದರು.

ನೈಸ್ ಅಕ್ರಮಗಳ ಕುರಿತು ತನಿಖೆಗೆ ಕಾಗೋಡು ತಿಮ್ಮಪ್ಪ ನವರು ಸ್ಪೀಕರ್ ಆಗಿದ್ದಾಗ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ರಚಿಸಿದ್ದರು. ಆ ಸದನ ಸಮಿತಿ ಈಗಾಗಲೇ ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ್ದು, ವರದಿ ಮಂಡನೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಈ ಒತ್ತಾಯಕ್ಕೆ ದನಿಗೂಡಿಸಿದರು.  ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರದಿ ಮಂಡನೆಗೆ ನಮ್ಮ ತಕರಾರಿಲ್ಲ ಅಂದಿದ್ದಾರೆ. ಮೊದಲು ಸದನ ಸಮಿತಿ ವರದಿ ಮಂಡಿಸಿ ಎಂದು ಧರಣಿ ನಿರತ ಬಿಜೆಪಿಸದಸ್ಯರು ಘೋಷಣೆ ಕೂಗಿದ್ದಾರೆ.

ಈ ವೇಳೆ ಸ್ಪೀಕರ್ 15 ನಿಮಿಷಗಳ ವರೆಗೆ ಸದನದ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗ ಮಾತನಾಡಿದ  ಸಮಿತಿಯ ಅಧ್ಯಕ್ಷ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ನಾಳೆಯ ಒಳಗಾಗಿ ವರದಿಯ ಪ್ರತಿಗಳ ಮುದ್ರಿಸಿ ಮಂಡಿಸುವ ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆ ಆಗಿರುವ ಬೈರತಿ ಬಸವರಾಜು ವಿರುದ್ಧ ಲುಕ್ ಔಟ್ ನೋಟಿಸ್
ಜರ್ಮನಿಯಲ್ಲೂ ‘ಮತಚೋರಿ’ ಆರೋಪ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ