90 ಕೆಜಿ ಇದ್ದವ 3 ತಿಂಗಳಲ್ಲಿ 60 ಕೆಜಿಯಾದ: ಬೆಂಗಳೂರು ಲೇಖಕನ ತೂಕ ಇಳಿಸಿಕೊಂಡ ಕತೆಯಿದು

By Suvarna Web DeskFirst Published Jan 5, 2017, 10:51 AM IST
Highlights

ಮೂಲತಃ ಉತ್ತರ ಭಾರತದವರಾದರೂ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಇವರು ಮೊದಲೆಲ್ಲ ನಗರದ ಆಧುನಿಕ ನಗರ ಜೀವನಶೈಲಿಗೆ ಒಗ್ಗಿ ನಿತ್ಯ ಸ್ನೇಹಿತರ ಜೊತೆ ಪಾರ್ಟಿ, ಹೋಟಲ್'ನಲ್ಲೇ ಊಟ, ಮದ್ಯಪಾನ,ಧೂಮಪಾನ ರೂಢಿಸಿಕೊಂಡು ತಮ್ಮ ದೇಹವನ್ನು ಯರ್ರಾಬಿರ್ರಿ ಬೆಳಸಿಕೊಂಡಿದ್ದರು.

Click Here: ಜಿಯೋಗೆ ಸೆಡ್ಡು ಹೊಡೆದ ಏರ್ಟೆಲ್: 1 ವರ್ಷ ಉಚಿತ 4ಜಿ ಸೇವೆ

ಬೆಂಗಳೂರು(ಜ.05): ದಪ್ಪಗಿದ್ದವರು ತೂಕ ಕಡಿಮೆ ಮಾಡಿಕೊಳ್ಳಲು ಏನಲ್ಲ ಕಸರತ್ತು ಮಾಡುತ್ತಾರೆ. ಟ್ರೈನರ್'ಗಳನ್ನು ನೇಮಿಸಿಕೊಳ್ಳುತ್ತಾರೆ, ಊಟ ಬಿಡುತ್ತಾರೆ, ದಿನಗಟ್ಟಲೆ ಜಿಮ್ ಮಾಡುತ್ತಾರೆ ಇವೆಲ್ಲಕ್ಕೂ ಲಕ್ಷಾಂತರ ರೂ. ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಕೆಲವರು ಮಾತ್ರ ಫಲಿತಾಂಶದಲ್ಲಿ ಯಶಸ್ಸಾಗುತ್ತಾರೆ.  ಬಹುತೇಕರು ತಾವು ಅಂದುಕೊಂದಷ್ಟು ಸಣ್ಣಗಾಗುವುದು ಕಡಿಮೆ.

ಆದರೆ ಇಲ್ಲೊಬ್ಬರು ಬೆಂಗಳೂರಿನ ಆಂಗ್ಲ ಲೇಖಕರೊಬ್ಬರು ಕೇವಲ ಮೂರು ತಿಂಗಳಲ್ಲಿ 90 ಕೆಜಿ ಇದ್ದವರು 60 ಕೆಜಿಗೆ ತೂಕ ಇಳಿಸಿಕೊಂಡಿದ್ದಾರೆ. ಅವರ್ಯಾರು ಅಂತೀರಾ ಹೆಸರು ಶೋಮ್ ಪ್ರಕಾಶ್ ಸಿನ್ಹಾ ರಾಯ್. ವಯಸ್ಸು 26 ವರ್ಷ. ಮೂಲತಃ ಉತ್ತರ ಭಾರತದವರಾದರೂ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಇವರು ಮೊದಲೆಲ್ಲ ನಗರದ ಆಧುನಿಕ ನಗರ ಜೀವನಶೈಲಿಗೆ ಒಗ್ಗಿ ನಿತ್ಯ ಸ್ನೇಹಿತರ ಜೊತೆ ಪಾರ್ಟಿ, ಹೋಟಲ್'ನಲ್ಲೇ ಊಟ, ಮದ್ಯಪಾನ,ಧೂಮಪಾನ ರೂಢಿಸಿಕೊಂಡು ತಮ್ಮ ದೇಹವನ್ನು ಯರ್ರಾಬಿರ್ರಿ ಬೆಳಸಿಕೊಂಡು 90 ಕೆಜಿ ದಪ್ಪಗಾಗಿದ್ದರು. ಅಷ್ಟರಲ್ಲೆ ಇವರಿಗೆ ಇವರ ಗೆಳತಿಯ ಜೊತೆ ಮದುವೆಯೂ ನಿಶ್ಚಯವಾಯಿತು.

ಶೋಮ್ ಅವರ ಬೊಜ್ಜು ದೇಹವನ್ನು ನೋಡಿದ ಮದುವೆಯಾಗುವ ಹುಡುಗಿ ತಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಗುಡ್'ಬೈ ಹೇಳಿದಳು. ಹುಡುಗಿ ಮದುವೆ ರಿಜೆಕ್ಟ್ ಮಾಡಿದ್ದಕ್ಕೆ ಮಾನಸಿಕವಾಗಿ ಆಘಾತಗೊಂಡರು. ಮಾನಸಿಕ ಆಘಾತ ಕಾಯಿಲೆಯಾಗಿ ಕೂಡ  ಇವರನ್ನು ಬಾಧಿಸತೊಡಗಿತು. ಶೋಮ್ ಸ್ಥಿತಿಯನ್ನು ಗಮನಿಸಿದ ಅವರ ಸ್ನೇಹಿತರು ತಮ್ಮ ದಿನನಿತ್ಯದ ದಿನಚರಿಯನ್ನು ಬದಲಿಸಿಕೊಂಡು ಸಣ್ಣಗಾಗುವಂತೆ ಸಲಹೆ ನೀಡಿದರು.

ಆಗ ಶುರುವಾಯಿತು ಶೋಮ್ ಅವರ ತೂಕ ಇಳಿಸಿಕೊಳ್ಳುವ ಇನ್ನೊಂದು ಕತೆ. ನಿತ್ಯ ಮುಂಜಾನೆ ಎದ್ದು ಜಿಮ್'ಗೆ ಹೋಗಿ ದೇಹವನ್ನು ದಂಡಿಸಲು ಶುರು ಮಾಡಿದರು. 12 ವಾರ ಯಾವ ಸ್ನೇಹಿತರ ಪಬ್,ಕ್ಲಬ್ ಸಹವಾಸಕ್ಕೂ ಹೋಗಲಿಲ್ಲ. ಧೂಮಪಾನ,ಮದ್ಯಪಾನ, ಹೋಟಲ್ ಆಹಾರ ಎಲ್ಲವನ್ನು ತ್ಯಜಿಸಿದರು. ದಿನನಿತ್ಯದ ಆಹಾರಕ್ಕಾಗಿ ಒಂದು ಚಾರ್ಟ್'ಅನ್ನು ರೂಢಿಸಿಕೊಂಡರು.

ಪಥ್ಯ ಅನುಸರಿಸಿದ ಮೊದಲ 2 ವಾರಗಳ ಕಾಲ ಅನ್ನ, ಎಣ್ಣೆ, ಹಾಲಿನ ಉತ್ಪನ್ನಗಳು,ಬೀದಿ ಬದಿಯ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ ದ್ರವ ಪದಾರ್ಥವನ್ನು ಸೇವಿಸಲು ಶುರು ಮಾಡಿದರು. ಜೊತೆಗೆ ಗೋಧಿ ರೊಟ್ಟಿ,ಕಂದು ಬ್ರೆಡ್, ಮೇಲ್ಭಾಗದ ಮೊಟ್ಟೆ ಮುಂತಾದ ಕೊಬ್ಬು ಕಡಿಮೆಯಿರುವ ಆಹಾರಗಳನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸುತ್ತಿದ್ದರು. ಕೊನೆಗೆ 12 ವಾರಗಳಲ್ಲಿ ಬೊಜ್ಜು ದೇಹಿಯಾಗಿದ್ದವರು ಸ್ಮಾರ್ಟ್ ಹುಡುಗನಾದರು.

ಇವರ ಈ ಎಲ್ಲ ಪಥ್ಯಕ್ಕೆ ಕಾರಣವಾದ್ದು ಕ್ರಿಸ್ ಗೇಥಿನ್ ಅವರ 12 ವಾರಗಳ ತೂಕ ಇಳಿಸುವಿಕೆ ತರಬೇತಿ ಕಾರ್ಯಕ್ರಮ ಕೂಡ ಹೆಚ್ಚು ಸಹಕಾರಿಯಾಗಿದ್ದು, ಗೇಥಿನ್ ತರಬೇತಿ ಕಾರ್ಯಕ್ರಮವನ್ನು ಅನುಸರಿಸಿ ಮಹೇಶ್ ಬಾಬು, ರಣವೀರ್ ಸಿಂಗ್, ಜಾನ್ ಅಬ್ರಹಾಂ ಹಾಗೂ ಹೃತಿಕ್ ರೋಶನ್ ಕೂಡ ಯಂಗ್'ಮನ್'ಗಳಾಗಿದ್ದಾರೆ ಎಂದು ಶೋಮ್ ಹೇಳುತ್ತಾರೆ.

click me!