20 ವರ್ಷಗಳಿಂದ ಇಲ್ಲಿ ಬಂದ್'ಗೇ ಬಹಿಷ್ಕಾರ

Published : Oct 17, 2016, 02:38 AM ISTUpdated : Apr 11, 2018, 01:05 PM IST
20 ವರ್ಷಗಳಿಂದ ಇಲ್ಲಿ ಬಂದ್'ಗೇ ಬಹಿಷ್ಕಾರ

ಸಾರಾಂಶ

ಈ ಎರಡೂ ಗ್ರಾಮಗಳ ಜನಪ್ರತಿ​ನಿಧಿ​ಗಳು ಮತ್ತು ರಾಜಕೀಯ ಮುಖಂಡರು ಬಂದ್‌ ಸಂಪ್ರದಾಯ​ವನ್ನು ವಿರೋಧಿಸುತ್ತಿರುವುದೇ ಗ್ರಾಮ ಈ ಸಾಧನೆ ಸಾಧಿಸುವುದಕ್ಕೆ ಸಾಧ್ಯ​ವಾಗಿದೆ. ಈ ಪ್ರದೇಶದಲ್ಲಿ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ, ಸಾರಿಗೆ ಸಾಗಾಟ ವ್ಯವಸ್ಥೆ ಸಹಜ ಸ್ಥಿತಿಯಲ್ಲಿರು​ತ್ತವೆ.

ಕೊಚ್ಚಿ: ರಾಜಕೀಯ ಸಂಘಟನೆಗಳು ಬಂದ್‌ಗೆ ಕರೆ ನೀಡಿದಾಗ ಪ್ರತಿಯೊಬ್ಬರಿಗೂ ಕಿರಿಕಿರಿ​​ಯಾಗುವುದು ಸಹಜ. ಆದರೆ ಕೇರಳದ ಕೊಚ್ಚಿಯ ಎರಡು ಗ್ರಾಮ​ಗಳಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಬಂದ್‌ ನಡೆದಿಲ್ಲ ಎಂಬ ಕುತೂಹಲಕಾರಿ ವಿಷಯ ‘ದ ಟೈಮ್ಸ್‌ ಆಫ್‌ ಇಂಡಿಯಾ' ವರದಿ ಮಾಡಿದೆ. 
ರಾಜಕೀಯ ಪೈಪೋಟಿ ಹೊಂದಿ​ರುವ ಕೇರಳದಲ್ಲಿ ಬಂದ್‌ಗಳು ಸರ್ವೇ ಸಾಮಾನ್ಯ ಎಂಬ ಭಾವನೆಯಿದೆ. ಬಂದ್‌​​ಗಳಿಗೆ ಸಂಘಟನೆಗಳು ಕರೆ ನೀಡಿ​ದಾಗ ಸಾಮಾನ್ಯವಾಗಿ ನಗರಗಳಲ್ಲಿ ಜನ ಜೀವನ ಅಸ್ತವ್ಯಸ್ಥವಾಗುವುದು ಸಹಜ. ಈ ಸಂದರ್ಭ ಬಂದ್‌ ಪರಿ​ಣಾಮ​ಕ್ಕೊಳಪಟ್ಟಜನರು ಬಂದ್‌ ಕರೆ ನೀಡಿದವರನ್ನು ಬೈಕೊಳ್ಳುವುದೂ ಸಾಮಾನ್ಯ. ಆದರೆ ಇಂಥ ಸನ್ನಿವೇಶದಲ್ಲಿ ಕೇರಳದ ಪೆರುಂಬವೂರ್‌ ಸಮೀಪದ ಪುಲ್ಲುವಳಿ ಮತ್ತು ವಲ್ಲಂ ಎಂಬ ಎರಡು ಗ್ರಾಮಗಳಲ್ಲಿ ಬಂದ್‌ ನಡೆಸದಿರಲು ಅವಿರೋಧ ನಿರ್ಣಯವನ್ನು ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ಪಾಲಿಸಿಕೊಂಡು ಬರಲಾಗಿದೆ. 
ಈ ಎರಡೂ ಗ್ರಾಮಗಳ ಜನಪ್ರತಿ​ನಿಧಿ​ಗಳು ಮತ್ತು ರಾಜಕೀಯ ಮುಖಂಡರು ಬಂದ್‌ ಸಂಪ್ರದಾಯ​ವನ್ನು ವಿರೋಧಿಸುತ್ತಿರುವುದೇ ಗ್ರಾಮ ಈ ಸಾಧನೆ ಸಾಧಿಸುವುದಕ್ಕೆ ಸಾಧ್ಯ​ವಾಗಿದೆ. ಈ ಪ್ರದೇಶದಲ್ಲಿ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ, ಸಾರಿಗೆ ಸಾಗಾಟ ವ್ಯವಸ್ಥೆ ಸಹಜ ಸ್ಥಿತಿಯಲ್ಲಿರು​ತ್ತವೆ. ಇಲ್ಲಿ ಯಾರೊಬ್ಬರೂ ಬಂದ್‌ ನಡೆಸಲು ಬಲವಂತ ಮಾಡುವುದಿಲ್ಲ. ಕಣ್ಣೂರಿನಲ್ಲಿ ಆರೆಸ್ಸೆಸ್‌ ಕಾರ್ಯಕರ್ತನ ಕೊಲೆಯಾದ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಕೇರಳ ಬಂದ್‌ಗೆ ಕರೆ ನೀಡಿ​ದ್ದರೂ, ಪುಲ್ಲುವಳಿ ಮತ್ತು ವೆಲ್ಲಂ ಗ್ರಾಮ​ಗಳಲ್ಲಿ ಬಂದ್‌ ನಡೆದಿಲ್ಲ. ಹೀಗಾಗಿ ಬಂದ್‌ ನಡೆಸದಿರುವ ತಮ್ಮ ಗ್ರಾಮಗಳ ನಿರ್ಣಯಕ್ಕೆ ಅವು ಮತ್ತೊಮ್ಮೆ ಬದ್ಧತೆಯನ್ನು ಪ್ರದರ್ಶಿಸಿದಂತಾಗಿದೆ. 

ಬಂದ್‌ ನಡೆಯದ ನಾಡು
* ಕೇರಳದಲ್ಲಿ ಎಲ್ಲದಕ್ಕೂ ಬಂದ್‌ ನಡೆಯುವಾಗಲೂ, ಬಂದ್‌ ಸಂಪ್ರದಾಯದಿಂದ ದೂರ ಇರಲು ಸರ್ವಪಕ್ಷ ಮುಖಂಡರ ನಿರ್ಧಾರ
* ರಾಜ್ಯ ಬಂದ್‌'ಗೆ ಕರೆ ನೀಡಿದ್ದರೂ ಈ ಎರಡು ಹಳ್ಳಿಗಳಲ್ಲಿ ಮಾತ್ರ ಜನಜೀವನ ನಿರಾತಂಕ
* ಬಲವಂತವಾಗಿ ಬಂದ್‌ ಮಾಡುವವರಿಲ್ಲ.
* ಗುರುವಾರ ಬಿಜೆಪಿ ಕರೆ ನೀಡಿದ್ದ ಬಂದ್‌ಗೂ ಯಾವುದೇ ಪ್ರತಿಕ್ರಿಯೆ ಇಲ್ಲ.

(ಕೃಪೆ: ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್