
ಬೆಂಗಳೂರು(ಅ. 17): ಸರ್ಕಾರದ ದುಬಾರಿ ವೆಚ್ಚದ ಉಕ್ಕಿನ ಸೇತುವೆ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ಅನೇಕ ಸಂಘನೆಗಳ ಕಾರ್ಯಕರ್ತರು ಭಾನುವಾರ ಚಾಲುಕ್ಯ ವೃತ್ತದಿಂದ ಹಿಡಿದು ಹೆಬ್ಬಾಳದವರೆಗೂ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಧರಣಿಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ರಂಗಕರ್ಮಿ ಅರುಂಧತಿ ನಾಗ್, ನಟ ಪ್ರಕಾಶ್ ಬೆಳವಾಡಿ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಸೇರಿದಂತೆ ಸಾವಿರಾರು ನಾಗರಿಕರು ಬೀದಿಗಿಳಿದು ವಿರೋಧಿಸಿದರು.
ಪ್ರತಿಭಟನೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ನಾಗರೀಕರು ಪಾಲ್ಗೊಂಡಿದ್ದರು. ಸರ್ಕಾರ ಈ ಯೋಜನೆಯಲ್ಲಿ ಪಾರದರ್ಶಕತೆ ಅನುಸರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇವಲ ಬೆಂಗಳೂರಿಗರಷ್ಟೇ ಅಲ್ಲ, ವಿದೇಶಿಗರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷ.
ಉಕ್ಕಿನ ಸೇತುವೆ ನಿರ್ಮಾಣದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ದೊಡ್ಡ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ಧರಾಮಯ್ಯ ಸರ್ವೆ ನಡೆಸಲು ಸ್ವತಃ ತೆರಳಲಿದ್ದಾರೆ. ಸರ್ವೆಯ ಬಳಿಕ ಉದ್ದೇಶಿತ ಸ್ಟೀಲ್ ಬ್ರಿಡ್ಜ್ ಯೋಜನೆ ಬಗ್ಗೆ ಸಿಎಂ ತೀರ್ಮಾನಕ್ಕೆ ಬರಲಿದ್ದಾರೆ.
ಒಟ್ಟಾರೆ ವಿರೋಧದ ನಡುವೆಯೂ ಸರ್ಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುತ್ತಾ ಅಥವಾ ಪಥ ಬದಲಾವಣೆ ಮಾಡುತ್ತಾ, ಇಲ್ಲವೇ ಯೋಜನೆಯನ್ನೇ ಕೈ ಬಿಡುತ್ತಾ ಎಂಬುದು ಕುತೂಹಲ ಮೂಡಿಸಿದೆ.
ವರದಿ: ಮುತ್ತಪ್ಪ ಲಮಾಣಿ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.