ಮೂರನೇ ಮದ್ವೆಗೆ ಬಂಧನ ಭೀತಿ: ತಾಳಿ ಕಟ್ಟಲು ತಮ್ಮನ ಕಳುಹಿಸಿದ ಅಣ್ಣ!

Published : Feb 10, 2019, 03:50 PM IST
ಮೂರನೇ ಮದ್ವೆಗೆ ಬಂಧನ ಭೀತಿ: ತಾಳಿ ಕಟ್ಟಲು ತಮ್ಮನ ಕಳುಹಿಸಿದ ಅಣ್ಣ!

ಸಾರಾಂಶ

ಮೂರನೇ ಮದುವೆಯಾಗಲು ಹೊರಟಿದ್ದ ವರನೊಬ್ಬ ಪೊಲೀಸರ ಅತಿಥಿಯಾಗುವ ಭೀತಿಯಿಂದ ತಾತ್ಕಾಲಿಕವಾಗಿ ತನ್ನ ತಮ್ಮನ್ನನೇ ಮದುವೆಯಾಗಲು ಕಳುಹಿಸಿದ್ದಾನೆ.

ನವದೆಹಲಿ[ಫೆ.10]: ಮೂರನೇ ಮದುವೆಗೆ ತೆರಳುತ್ತಿದ್ದ ವೇಳೆ, ಬಂಧನ ಭೀತಿಗೆ ಒಳಗಾದ ವರ ಮಹಾಶಯ, ಮದುವೆಯಾಗಲು ತಾನು ತೆರಳುವ ಬದಲು ತಾತ್ಕಾಲಿಕವಾಗಿ ತನ್ನ ಸೋದರನನ್ನು ಕಳುಹಿಸಿದ ವಿಚಿತ್ರ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಹೀಗೆ 3ನೇ ಮದುವೆಗೆ ಮುಂದಾಗಿದ್ದ ಕರೀಂ ಎಂಬಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕರೀಂ ಎಂಬಾತನೇ ಈ ಹೈಡ್ರಾಮಾದ ಖಳನಾಯಕ. ಕರೀಂಗೆ ಮೂರನೇ ಮದುವೆ ಆಗುವಂತೆ ಸ್ವತಃ ಅವರ ತಾಯಿಯೇ ಒತ್ತಾಯ ಹಾಕುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕರೀಂನ 3ನೇ ಮದುವೆಗೆ ಸಿದ್ಧತೆ ನಡೆದು, ಆತ ಕುಟುಂಬ ಸದಸ್ಯರ ಜೊತೆ ಮದುವೆ ಮನೆಗೆ ತೆರಳುತ್ತಿದ್ದ. ಈ ವೇಳೆ ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಹೆದರಿದ ಕರೀಂ, ತನ್ನ ಸೋದರನ ಕಳುಹಿಸಿದ್ದ.

ಆತ್ತ ಮದುವೆ ವೇಳೆ ವರ ಬದಲಾಗಿರುವುದು ಕಂಡು ವಧುವಿನ ಮನೆಯವರು ಕೆಂಡಾಮಂಡಲವಾಗಿ, ವರನ ಮನೆಯವರ ಮೇಲೆ ಮುಗಿಬಿದ್ದಿದ್ದಾರೆ. ಜೊತೆಗೆ ಮದುವೆ ರದ್ದುಪಡಿಸಿದ್ದೂ, ಅಲ್ಲದೆ ಮದುವೆ ಸಿದ್ಧಪಡಿ ಸಲು ಮಾಡಿದ ವೆಚ್ಚ ಪಾವತಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಕರೀಂ ವಿರುದ್ಧ ದೂರು ಕೂಡಾ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರೀಂನನ್ನು ಬಂಧಿಸಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು