
ವಾರಣಾಸಿ (ಜ.18): ಪ್ರಧಾನಿ ನರೇಂದ್ರ ಮೋದಿ ಅವರು ದತ್ತು ಪಡೆದಿರುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯಾಪುರ ಗ್ರಾಮದ ಬೀದಿಗಳು ಬೆಳಗುವಂತಾಗಬೇಕು ಎಂದು 2 ವರ್ಷದ ಹಿಂದೆ 135 ಸೌರ ಬೀದಿ ದೀಪ ಅಳವಡಿಸಲಾಗಿತ್ತು. ಈ ಪೈಕಿ 80 ಬೀದಿ ದೀಪಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿದ್ದು, ಗ್ರಾಮದ ಬೀದಿಗಳು ಪುನಃ ಕಾರ್ಗತ್ತಲಿಗೆ ಮರಳಿವೆ. ವಿದ್ಯುತ್ ಕಡಿತದಿಂದ ಬಾಧಿತವಾದ ಜಯಾಪುರದಲ್ಲಿ ವಿದ್ಯುದ್ದೀಪಗಳು ರಾತ್ರಿ ವೇಳೆ ನಿರಂತರವಾಗಿ ರಸ್ತೆಗಳನ್ನು ಬೆಳಗಬೇಕು ಎಂಬ ಉದ್ದೇಶದಿಂದ ಮೋದಿ ಅವರು 135 ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲು ಸೂಚಿಸಿದ್ದರು.
ಆ ಪ್ರಕಾರ ಇವುಗಳನ್ನು ಅಳವಡಿಸಿಯೂ ಆಗಿತ್ತು. 1 ವರ್ಷದ ಹಿಂದೆ ಏಕಾಏಕಿ 50 ದೀಪಗಳ ಬ್ಯಾಟರಿಗಳನ್ನು ಕಳ್ಳರು ಕದ್ದರು. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಹೊರಠಾಣೆಯಲ್ಲಿ ದೂರು ಸಲ್ಲಿಸುವ ಹೊತ್ತಿಗೆ ಮತ್ತೆ 30 ಬ್ಯಾಟರಿಗಳನ್ನು ಕದ್ದರು. ಈ ಬಗ್ಗೆ ಎಡಿಜಿ ವಿಶ್ವಜಿತ್ ಮಹಾಪಾತ್ರ ಕಳೆದ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದಾಗ ವಿಷಯವನ್ನು ಪುನಃ ಗ್ರಾಮಸ್ಥರು ಅವರ ಅವಗಾಹನೆಗೆ ತಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.