
ಕಳ್ಳನೊಬ್ಬನ ವಿಚಾರ ಟ್ವಿಟರ್‌ನಲ್ಲಿ ಸಖತ್ ಚರ್ಚೆ ಆಗಿದೆ. ಟ್ವಿಟರ್‌ನಲ್ಲಿ ಸದಾ ಕ್ರಿಯಾಶೀಲವಾಗಿರುವ ಸ್ಟೀವ್ ವ್ಯಾಲಂಟೈನ್ ಹಂಚಿಕೊಂಡಿರುವ ಪೋಟೋ ವೈರಲ್ ಆಗಿದೆ.
ಲ್ಯಾಪ್ ಟಾಪ್ ಕದ್ದುಕೊಂಡು ಹೋಗಿದ್ದ ಕಳ್ಳ ಲ್ಯಾಪ್ ಟಾಪ್‌ನ ಅಸಲಿ ಮಾಲೀಕನಿಗೆ ಬರೆದ ಪತ್ರ ವೈರಲ್ ಆಗಿದೆ. ಕಳ್ಳ ಇ ಮೇಲೆ ರವಾನಿಸಿದ್ದಾನೆ. ಕಳ್ಳ ಕ್ಷಮೆ ಕೇಳಿರುವುದಲ್ಲದೇ ಕಾಲೇಜಿಗೆ ಸಂಬಂಧಿಸಿದ ಅಸೈನ್ ಮೆಂಟ್‌ಗಳು ಇದ್ದರೆ ವಾಪಸ್ ಕೊಡುವುದಾಗಿಯೂ ಕೊಡುವುದಾಗಿಯೂ ಹೇಳಿದ್ದಾನೆ.
ದಯವಿಟ್ಟು ನನ್ನ ಕ್ಷಮಿಸಿ.. ನಾನು ಕಡು ಬಡವ.. ಹಣಕ್ಕಾಗಿ ನಿಮ್ಮ ಲ್ಯಾಪ್‌ಟಾಪ್ ಅನಿವಾರ್ಯವಾಗಿ ಕಳ್ಳತನ ಮಾಡಿದ್ದೇನೆ. ನಿಮ್ಮ ಪೋನ್ ಮತ್ತು ವಾಲೆಟ್ ಮುಟ್ಟಿಲ್ಲ. ಅದರಿಂದ ನಿಮಗೆ ಕೊಂಚ ಸಹಾಯ ಆಗಿದೆ ಎಂದು ಭಾವಿಸಿದ್ದೇನೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ. ಇದರಲ್ಲಿ ಇರುವ ಡ್ಯಾಕ್ಯುಮೆಂಟ್‌ಗಳು ಬೇಕಾದರೆ ಕೇಳಿ..ಕಳುಹಿಸಿ ಕೊಡುತ್ತೇನೆ ಎಂದು ಸಹ ಕಳ್ಳ ಆಫರ್ ನೀಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ