
ಥೆಸ್ಸಾಲೊನಿಕಿ(ಫೆ.11): ಇತ್ತೀಚೆಗೆ ಗ್ರೀಸ್‌ನಲ್ಲಿ ಪತ್ತೆಯಾದ 2ನೇ ಮಹಾಯುದ್ಧದ ಬಾಂಬ್‌ನ್ನು ಭಾನುವಾರ ನಿಷ್ಕ್ರಿಯಗೊಳಿಸಲು ಭರದ ಸಿದ್ಧತೆ ನಡೆದಿದೆ. ಇದರ ಭಾಗವಾಗಿ ಥೆಸ್ಸಾಲೊನಿಕಿ ನಗರದಲ್ಲಿ ವಾಸವಿರುವ 70,000 ಮಂದಿಯನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಕಳೆದ ವಾರ ರಸ್ತೆ ದುರಸ್ತಿ ಕಾಮಗಾರಿ ವೇಳೆ ಉತ್ತರ ಭಾಗದ ನಗರದಲ್ಲಿ 250 ಕೆಜಿಯಷ್ಟಿರಬಹುದಾದ ಸ್ಫೋಟಕಗಳನ್ನು ಹೊಂದಿದ ಬಾಂಬ್ ಪತ್ತೆಯಾಗಿತ್ತು. ಅದನ್ನೀಗ ನಿಷ್ಕ್ರಿಯಗೊಳಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 300ಕ್ಕೂ ಹೆಚ್ಚು ಮಂದಿ ದಿವ್ಯಾಂಗರು ಮತ್ತು ರೋಗಿಗಳನ್ನು ಆ್ಯಂಬುಲೆನ್ಸ್ ಮೂಲಕ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯದ ವೇಳೆ ಪರಿಣಾಮ ಉಂಟಾಗಬಹುದಾದ ಸುತ್ತಲಿನ 1.9 ಕಿ.ಮೀ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾರ್ವಜನಿಕರನ್ನು ಭಾನುವಾರದೊಳಗೆ ರವಾನಿಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.