
ಪತಿ ಅಥವಾ ಪತ್ನಿ ತನಗೆ ವಂಚಿಸುತ್ತಿದ್ದಾರೆ ಎಂದು ಅವರ ಕಾಲ್ ಹಿಸ್ಟರಿ, ಇ-ಮೇಲ್, ಎಸ್’ಎಮ್’ಎಸ್’ಗಳನ್ನು ನೋಡುವ ಮೂಲಕ ‘ಬೇಹುಗಾರಿಕೆ’ ನಡೆಸುತ್ತಿದ್ದಲ್ಲಿ, ಆದರೆ ಯಾವುದೇ ಸಾಕ್ಷ್ಯಾಧಾರಗಳು ಕೈಗೆ ಸಿಗುತ್ತಿಲ್ಲವೆಂದಾದಲ್ಲಿ ಈ 4 ಸ್ಮಾರ್ಟ್ ಫೋನ್ ಅ್ಯಪ್’ಗಳು ನಿಮ್ಮ ಪ್ರಯತ್ನಗಳಿಗೆ ನೀರೆರಚುತ್ತಿರಬಹುದು. ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ರಚಿಸಲಾಗಿರುವ ಈ ಅ್ಯಪ್’ಗಳನ್ನು ವಂಚಿಸಲು ಬಳಸುವವರಿಗೇನು ಕೊರತೆಯಿಲ್ಲ.
ಪ್ರೈವೇಟ್ ಫೋಟೋ:
ಬೇಹುಗಾರಿಕೆ ನಡೆಸುವಾಗ ಯಾರಾದರು ಕ್ಯಾಲ್ಕುಲೇಟರ್’ಅನ್ನು ತೆರೆದು ನೋಡುತ್ತಾರೆಯೇ? ನೋಡಲು ಕ್ಯಾಲ್ಕುಲೇಟರನ್ನೇ ಹೋಲುವ ಪ್ರೈವೇಟ್ ಫೋಟೋ ಎಂಬ ಅ್ಯಪ್, ತೆರೆದುಕೊಳ್ಳಲು ಪಾಸ್ವರ್ಡ್ ಅಗತ್ಯವಿದೆ. ಇದರಲ್ಲಿ ಸಂಗ್ರಹಿಸಲಾದ ರಹಸ್ಯ ಫೋಟೋಗಳು, ಫೋನ್’ನ ಗ್ಯಾಲರಿಯಲ್ಲಾಗಲಿ ಅಥವಾ ಫೋಟೋ ಲೈಬ್ರರಿಯಲ್ಲಾಗಲಿ ಕಾಣಿಸುವುದಿಲ್ಲ.
ಟೈಗರ್ ಟೆಕ್ಸ್ಟ್:
ಈ ಅ್ಯಪ್ ಸಂದೇಶಗಳನ್ನು ಅಡಗಿಸಲು ಸಹಕಾರಿಯಾಗಿದೆಯಲ್ಲದೇ, ಅನಗತ್ಯವಾಗಿ ಕರೆ ಮಾಡಿದವರಿಗೆ ‘ ಈ ನಂ. ಚಾಲ್ತಿಯಲ್ಲಿಲ್ಲ’ ಎಂಬ ಸಂದೇಶವನ್ನು ನೀಡುವಂತೆ ಮಾಡಬಹುದು.
ನೋಸಿ ಟ್ರಾಪ್:
ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಫೋನ್’ಅನ್ನು ಯಾರ್ಯಾರು ನೋಡುತ್ತಾರೆಂದು ನೋಸಿ ಟ್ರಾಪ್ ಮೂಲಕ ಕಂಡುಹಿಡಿಯಬಹುದು. ಈ ಅ್ಯಪ್’ನ್ನು ಎನೇಬಲ್ ಮಾಡಿಟ್ಟಾಗ ಫೋನ್’ನ ಮುಂಭಾಗದ ಕ್ಯಾಮೆರಾ ರಹಸ್ಯವಾಗಿ ಫೋಟೋಗಳನ್ನು ಕ್ಲಿಕ್ಕಿಸುತ್ತದೆ.
ಫಾಕ್ಸ್ ಪ್ರೈವೇಟ್ ಮೆಸೇಜ್:
ನಿಮ್ಮನ್ನು ನೋಡಿದಾಗ ಯಾರಾದರೂ ತಮ್ಮ ಮೊಬೈಲನ್ನು ಅಲ್ಲಾಡಿಸುತ್ತಾರೆಂದಾದರೆ ಅವರ ಫೋನ್’ನಲ್ಲಿ ಫಾಕ್ಸ್ ಪ್ರೈವೇಟ್ ಮೆಸೇಜ್ ಎಂಬ ಅ್ಯಪ್ ಇರುವ ಸಾಧ್ಯತೆಗಳಿವೆ. ಈ ಅ್ಯಪ್ ಇದ್ದಲ್ಲಿ ಫೋನ್’ನ್ನು ಅಲ್ಲಾಡಿಸುವ ಮೂಲಕ ಮೆಸೇಜ್’ಗಳನ್ನು ಅಳಿಸಿ ಹಾಕಬಹುದಲ್ಲದೇ, ಮೆಸೇಜ್’ಗಳು ಇನ್’ಬಾಕ್ಸ್’ಗೆ ಬಾರದೇ ನೇರವಾಗಿ ಈ ಅ್ಯಪ್’ನೊಳಗೆ ಬರುವಂತೆ ಮಾಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.