(ವಿಡಿಯೋ)ಫೇಸ್'ಬುಕ್'ನಲ್ಲಿ ವೈರಲ್ ಆಗುತ್ತಿದೆ CRPF ಪೇದೆಗಳ ನೋವು ಬಿಚ್ಚಿಟ್ಟ ಜೀತ್ ಸಿಂಗ್ ವಿಡಿಯೋ!

By Suvarna Web DeskFirst Published Jan 12, 2017, 5:25 AM IST
Highlights

ಯೋಧರಿಗೆ ನೀಡುತ್ತಿರುವ ಕಳಪೆ ಆಹಾರದ ಬಗ್ಗೆ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್​ ಯಾದವ್​​ ಹರಿಯಬಿಟ್ಟ ವಿಡಿಯೋ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಮತ್ತೊಬ್ಬ ಯೋಧ ತಮಗೆ ನೀಡುವ ಸೌಲಭ್ಯಗಳು ಉತ್ತಮವಾಗಿಲ್ಲ ಎಂದು ಆರೋಪಿಸಿದ್ದಾರೆ.

ನವದೆಹಲಿ(ಜ.12): ಯೋಧರಿಗೆ ನೀಡುತ್ತಿರುವ ಕಳಪೆ ಆಹಾರದ ಬಗ್ಗೆ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್​ ಯಾದವ್​​ ಹರಿಯಬಿಟ್ಟ ವಿಡಿಯೋ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಮತ್ತೊಬ್ಬ ಯೋಧ ತಮಗೆ ನೀಡುವ ಸೌಲಭ್ಯಗಳು ಉತ್ತಮವಾಗಿಲ್ಲ ಎಂದು ಆರೋಪಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯಾಗಿರುವ ಮಥುರಾ ನಿವಾಸಿ ಜೀತ್ ಸಿಂಗ್, ​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ವಿಡಿಯೋದಲ್ಲಿ

Latest Videos

'ಗೆಳೆಯರೇ, ನಾನು ಕಾನ್ಸ್ಟೇಬಲ್ ಜೀತ್ ಸಿಂಗ್ ನಾನೊಬ್ಬ CRPF ಯೋಧ, ನಾನು ನಿಮ್ಮ ಮೂಲಕ ನಮ್ಮ ದೇಶದ ಪ್ರಧಾನಿ ಮಾನ್ಯ ನರೇಂದ್ರ ಮೋದಿಗೆ ಸಂದೇಶವೊಂದನ್ನು ತಲುಪಿಸಬೇಕೆಂದಿರುವೆ. ನೀವು ನನಗೆ ಬೆಂಬಲ ನೀಡುತ್ತೀರಿ ಎಂದು ಸಂಪೂರ್ಣವಾಗಿ ನಂಬಿದ್ದೇನೆ. ನಾನು ಹೇಳುವುದೇನೆಂದರೆ 'ನಾವು CRPF ಜವಾನರು ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತೇವೆ. ನೀಡಿಲ್ಲ ಎನ್ನುವಂತಹ ಯಾವುದೇ ಡ್ಯೂಟಿ ಇಲ್ಲ. ಲೋಕಸಭೆ, ರಾಜ್ಯಸಭೆ ಅಲ್ಲದೇ ಚಿಕ್ಕ ಪುಟ್ಟ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲೂ ಡ್ಯೂಟಿ ಸೇವೆ ನೀಡುತ್ತೇವೆ. ಅಲ್ಲದೆ VIP ಹಾಗೂ VVIP ಸಕ್ಯೂರಿಟಿ, ಸಂಸತ್ ಭವನ, ಏರ್ ಪೋರ್ಟ್, ದೇವಸ್ಥಾನ ಹಾಗೂ ಮಸೀದಿ ಹೀಗೆ CRPF ಯೋಧ ಸೇವೆ ಸಲ್ಲಿಸದ ಸ್ಥಳವಿಲ್ಲ. ಇಷ್ಟೆಲ್ಲಾ ಮಾಡಿದ ಬಳಿಕವೂ ಭಾರತೀಯ ಸೇನೆಯ CRPF ಹಾಗೂ ಇತರ ವಿಂಗ್'ಗಳ ಯೋಧರಿಗೆ ನೀಡುವ ಸೌಲಭ್ಯಗಳ ನಡುವೆ ಬಹಳದೆ. ಈ ಕುರಿತಾಗಿ ನಿಮಗೆ ತಿಳಿದರೆ ದಂಗಾಗುತ್ತೀರಿ.

ಇನ್ನು ಮಾನ್ಯ ಪ್ರಧಾನಿ ಮೋದೀಜೀ ಬಳಿ ಹೇಳಬೇಕೆಂದಿರುವ ಬಹುದೊಡ್ಡ ವಿಚಾರವೆಂದರೆ ನಮ್ಮ ದೇಶದಲ್ಲಿ ಅದೆಷ್ಟು ಶಾಲೆ ಹಾಗೂ ಕಾಲೇಜುಗಳಿವೆ ಎಂದು ತಿಳಿದಿಲ್ಲ. ಆದರೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ತಿಂಗಳಿಗೆ ಹೆಚ್ಚು ವೇತನ ನೀಡುತ್ತೀರಿ ಅಲ್ಲದೇ ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿ ರಜೆಯನ್ನೂ ನೀಡಲಾಗುತ್ತದೆ ಇವರೆಲ್ಲಾ ಹಬ್ಬದ ಸಂದರ್ಭವನ್ನು ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಕಳೆಯುತ್ತಾರೆ. ಆದರೆ ನಾವು ಈ ಸಂದರ್ಭದಲ್ಲಿ ಅರಣ್ಯ ಪ್ರದೇಶ, ಹಳ್ಳಿಗಾಡಿನಲ್ಲಿ ಬಿದ್ದುಕೊಂಡಿರುತ್ತೇವೆ. ನಮಗೆ ಯಾವುದೇ ಸವಲತ್ತು, ರಜೆ, ಏನೂ ಸಿಗುವುದಿಲ್ಲ. ನಮ್ಮ ಈ ಕಷ್ಟವನ್ನು ಅರ್ಥೈಸಿಕೊಳ್ಳುವವರು ಯಾರೂ ಇಲ್ಲ ಗೆಳೆಯರೇ... ನಾವು ಈ ಸೌಲಭ್ಯ ಪಡೆಯಲು ಹಕ್ಕುದಾರರಲ್ಲವೇ? ಇಷ್ಟು ಸೇವೆ ನೀಡಿದರೂ ಸೌಲಭ್ಯ ಪಡೆಯುವ ಹಕ್ಕು ನಮಗಿಲ್ಲ. ಆರ್ಮಿ ಜವಾನರಿಗೆ ಪೆನ್ಶನ್ ಸಿಗುತ್ತದೆ, ಆದರೆ ನಮಗೆ ನೀಡುತ್ತಿದ್ದ ಈ ಸೌಲಭ್ಯವನ್ನೂ ನಿಲ್ಲಿಸಿದ್ದಾರೆ. 20 ವರ್ಷಗಳ ಬಳಿಕ ನಾವು ಕೆಲಸ ಬಿಟ್ಟು ತೆರಳುತ್ತೇವೆ ಆಗ ನಾವೇನು ಮಾಡಬೇಕು? ಕ್ಯಾಂಟೀನ್ ವ್ಯವಸ್ಥೆ, ವೈದ್ಯಕೀಯ ಸವಲತ್ತೂ ನಮಗಿಲ್ಲ. ಆದರೆ ದೇಶಕ್ಕೆ ಹೆಚ್ಚಿನ ಸೇವೆ ನೀಡುತ್ತಿರುವವರು ನಾವೇ. ಆರ್ಮಿಗೆ ಸಿಗುತ್ತಿರುವ ಸೌಲಭ್ಯದಿಂದ ನಮಗೇನೂ ಸಮಸ್ಯೆ ಇಲ್ಲ, ಅವರಿಗೆ ಸಿಗಬೇಕು. ಆದರೆ ನಮಗಿದು ಸಿಗುವುದಿಲ್ಲ. ಇಂತಹ ಭೇದ ಬಾವ ಯಾಕೆ? ನಮಗೂ ಸಿಗಬೇಕು. ಗೆಳೆಯರೇ ನನ್ನ ಮಾತನ್ನು ನಿಮಗೆ ಸರಿ ಎನಿಸಿದರೆ ಈ ವಿಡಿಯೋವನ್ನು ಸಾಧ್ಯವಾದಷ್ಟು ಶೇರ್ ಮಾಡಿಕೊಳ್ಳಿ' ಎಂದು ಮನವಿ ಮಾಡಿಕೊಂಡಿದ್ದಾರೆ. 

 

click me!