
ಭಾಗಲಕೋಟೆ(ಮಾ.10): ಸೂಕ್ತ ಭದ್ರತೆಯಿದ್ದಿದ್ದರೆ ಲೋಕಾಯುಕ್ತರ ಮೇಲೆ ದಾಳಿ ನಡೆಯುತ್ತಿರಲಿಲ್ಲ ಎಂದು ನಿವೃತ್ತ ಉಪ ಲೋಕಾಯುಕ್ತ ಸುಭಾಷ್ ಅಡಿ ಹೇಳಿದ್ದಾರೆ.
ಭಾಗಲಕೋಟೆಯಲ್ಲಿ ಮಾತನಾಡಿದ ಅವರು, ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಿದರಷ್ಟೇ ಸಾಲದು, ಪರಿಣಿತ ಪೊಲೀಸರನ್ನು ನಿಯೋಜಿಸಬೇಕು. ಅಲ್ಲಿರುವ ಪೊಲೀಸರಿಗೆ ಲಾಠಿ, ಕೋಲು ಹಿಡಿಯೋದನ್ನು ಬಿಟ್ಟರೆ ಬೇರೆ ಅನುಭವ ಗೊತ್ತಿಲ್ಲ ಎಂದು ಭದ್ರತೆಯ ಗುಣಮಟ್ಟದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.
ಲೋಕಾಯುಕ್ತ ಸಂಸ್ಥೆಯಿರುವುದೇ ಜನರಿಗಾಗಿ. ಎಲ್ಲಾ ರೀತಿಯ ಜನರು ಇಲ್ಲಿಗೆ ಬರ್ತಾರೆ. ಲೋಕಾಯುಕ್ತರಿಂದ ಜನರನ್ನು ದೂರವಿಟ್ಟರೆ ಅದರಿಂದ ಆಗುವ ದುಷ್ಪರಿಣಾಮಗಳೇ ಹೆಚ್ಚು. ಜನರಿಗೆ ಭೇಟಿ ಮಾಡಲು ಅವಕಾಶವನ್ನು ನೀಡಬೇಕು ಹಾಗೂ ಸೂಕ್ತ ಭದ್ರತೆಯನ್ನೂ ಒದಗಿಸಬೇಕು ಎಂದು ಸುಭಾಶ್ ಅಡಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.