ಬದಲಾವಣೆಗಾಗಿ ಯಾಂತ್ರಿಕ ವಿಧಾನದಲ್ಲಿ ಕಾರ್ಯ ನಡೆಯಲಿ : ಪ್ರಧಾನಿ ಮೋದಿ

By Suvarna Web DeskFirst Published Mar 10, 2018, 12:10 PM IST
Highlights

ರಾಷ್ಟ್ರೀಯ ಸಂಸದರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಎಲ್ಲಾ ಸಂಸದರಿಗೂ ಕೂಡ ಕಾರ್ಯವೈಖರಿಗಳ ಬಗ್ಗೆ  ತಿಳಿಯಪಡಿಸಿದ್ದಾರೆ.

ನವದೆಹಲಿ : ರಾಷ್ಟ್ರೀಯ ಸಂಸದರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಎಲ್ಲಾ ಸಂಸದರಿಗೂ ಕೂಡ ಕಾರ್ಯವೈಖರಿಗಳ ಬಗ್ಗೆ  ತಿಳಿಯಪಡಿಸಿದ್ದಾರೆ. ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ ಎಂದು ಪ್ರಧಾನಿ ಹೇಳಿದ್ದಾರೆ. ಅಲ್ಲದೇ ಕೆಲಸದಲ್ಲಿ ಸ್ಫೂರ್ತಿದಾಯಕತೆ ಹಾಗೂ ಸ್ಪರ್ಧಾತ್ಮಕತೆ , ಸಹಕಾರ ಮನೋಭಾವ ದೇಶದ ಬೆಳವಣಿಗೆಯ ಮೇಲೆ ಉತ್ತಮವಾದ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಇದೆಲ್ಲವೂ ಕೂಡ ನೀವು ಪ್ರತಿನಿಧಿಸುವ ಪ್ರದೇಶಗಳ ಅಭಿವೃದ್ಧಿಪಡಿಸಲು  ಸಹಕಾರಿಯಾಗುತ್ತದೆ. ಅಲ್ಲದೇ ನೀವು ಪ್ರತಿನಿಧಿಸುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ  ಎಂದು ಅವರು ಹೇಳಿದ್ದಾರೆ.

ನಾವೂ ಮಾನವ ಸಂಪನ್ಮೂಲ, ಕೌಶಲ್ಯವನ್ನೂ ಹೊಂದಿದ್ದೇವೆ.  ಸಕಾರಾತ್ಮಕವಾದ ಬದಲಾವಣೆಯನ್ನು ತರಲು ಯಾಂತ್ರಿಕ ವಿಧಾನದಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಪ್ರಧಾನಿ ಹೇಳಿದ್ದಾರೆ.

click me!