ಸರಕಾರಿ ಶಾಲೆಯಾದರೂ ಬಯಲಲ್ಲಿ ಕೂತು ಪಾಠ; ಶಿಕ್ಷಣ ಸಚಿವರೇ, ಇತ್ತ ಗಮನ ಹರಿಸುವಿರಾ?

Published : Nov 25, 2017, 10:14 AM ISTUpdated : Apr 11, 2018, 01:08 PM IST
ಸರಕಾರಿ ಶಾಲೆಯಾದರೂ ಬಯಲಲ್ಲಿ ಕೂತು ಪಾಠ; ಶಿಕ್ಷಣ ಸಚಿವರೇ, ಇತ್ತ ಗಮನ ಹರಿಸುವಿರಾ?

ಸಾರಾಂಶ

ಶಿಕ್ಷಣ ಸಚಿವರೇ ಇದು ನೀವು ನೋಡಲೇಬೇಕಾದ ಸುದ್ದಿ. ಪ್ರಾಥಾಮಿಕ ಶಾಲೆಯ ಮಕ್ಕಳ ಈ ಗೋಳಿನ ಕಥೆಯನ್ನ ನೋಡಿದರೆ ಕಣ್ಣೀರು ಬರುತ್ತೆ. ಕಳೆದ 17 ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳು ಪಡುತ್ತಿರುವ ಗೋಳಿನ ಕತೆ ಇದು.

ಬೆಂಗಳೂರು (ನ.25): ಶಿಕ್ಷಣ ಸಚಿವರೇ ಇದು ನೀವು ನೋಡಲೇಬೇಕಾದ ಸುದ್ದಿ. ಪ್ರಾಥಾಮಿಕ ಶಾಲೆಯ ಮಕ್ಕಳ ಈ ಗೋಳಿನ ಕಥೆಯನ್ನ ನೋಡಿದರೆ ಕಣ್ಣೀರು ಬರುತ್ತೆ. ಕಳೆದ 17 ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳು ಪಡುತ್ತಿರುವ ಗೋಳಿನ ಕತೆ ಇದು.

ಬಯಲಲ್ಲೇ ಪಾಠ, ಆಟ,  ಕೂತು ಪಾಠ ಕೇಳುವುದಕ್ಕೂ ಸರಿಯಾದ ಜಾಗವಿಲ್ಲ.  ಪಕ್ಕದಲ್ಲೇ ತಿಪ್ಪೆ ಗುಂಡಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಲ್ಲಯ್ಯನದೊಡ್ಡಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು.  ಇದು ಇಂದು ನಿನ್ನೆಯ ಸಮಸ್ಯೆಯಲ್ಲ.  17 ವರ್ಷಗಳಿಂದಲೂ ಇದೇ ಶೋಚನೀಯ ಸ್ಥಿತಿಯಲ್ಲಿ ಪಾಠ ಕಲೀತಿದ್ದಾರೆ ಈ ನತದೃಷ್ಟ ಮಕ್ಕಳು. ಈ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಗ್ರಾಮದ ಅಪ್ಪಾಜಿ ಅನ್ನೋರು ತಮ್ಮ ಮನೆಯ ಕೊಠಡಿಯೊಂದನ್ನೇ ಕೊಟ್ಟಿದ್ದಾರೆ.  27 ಮಕ್ಕಳು, ಇಬ್ಬರು ಶಿಕ್ಷಕರಿರೋದ್ರಿಂದ ಜಾಗ ಸಾಕಾಗಲ್ಲ.  ಹೀಗಾಗೇ ಬಯಲಲ್ಲೇ ಪಾಠ ಕೇಳಬೇಕಾದ ಸ್ಥಿತಿ ಒದಗಿದೆ.  ಇನ್ನೂ ಸ್ವಂತ ಕಟ್ಟಡ ಕಟ್ಟಿಸಿಕೊಡಿ ಎಂದರೆ ಅಧಿಕಾರಿಗಳು ಜಾಗವಿಲ್ಲ ಅನ್ನೋ ಸಬೂಬು ಹೇಳುತ್ತಿದ್ದರು. ಆದರೀಗ ಅಪ್ಪಾಜಿವರು ತಮ್ಮದೇ ಜಾಗವನ್ನು ದಾನವಾಗಿ ನೀಡಿದರೂ  ಚನ್ನಪಟ್ಟಣ ಬಿಇಓ ಸಾಹೇಬರೂ ಡಿಡಿಪಿಐ ಕೇಳಬೇಕು. ಹಾಗೇ ಹೀಗೆ ಅಂತಾ ದಿನ ದೂಡುತ್ತಿದ್ದಾರೆ.  

ಮಾನ್ಯ ಶಿಕ್ಷಣ ಸಚಿವರೇ ಈ ಮಕ್ಕಳಿಗೆ ಯಾಕಿಂತಾ ಶಿಕ್ಷೆ?  ಮಕ್ಕಳೇ ಇಲ್ಲ ಅಂತಾ ಸರ್ಕಾರಿ ಶಾಲೆ ಮುಚ್ಚೋಕೆ ಮುಂದಾಗಿರೋ ಸರ್ಕಾರಕ್ಕೆ ಈ ಮಕ್ಕಳಿಗೊಂದು ಸೂರು ಕಲ್ಪಿಸೋಕು ಆಗಲ್ಲ ಅನ್ನೋದು ನಾಚಿಕೆಗೇಡಿನ ಸಂಗತಿ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ: ವೀಡಿಯೋ
ಹಳದಿ ಬೋರ್ಡ್ ಇದೆ, ಟ್ರೈನ್ ಬರುತ್ತೆ, ಆದ್ರೆ ಹೆಸರಿಲ್ಲ! ಇದು ಭಾರತದ ಅನಾಮಧೇಯ ರೈಲು ನಿಲ್ದಾಣದ ಕಥೆ!