ವಿಶ್ವ ದಾಖಲೆಗಾಗಿ ಉಚಿತ ದಂತಪಕ್ತಿ ಜೋಡಣಾ ಶಿಬಿರ

By suvarna Web DeskFirst Published Nov 25, 2017, 10:02 AM IST
Highlights

ಸರ್ಕಾರದ ಮಹತ್ವಾಕಾಂಕ್ಷಿಯ ದಂತ ಭಾಗ್ಯ ಯೋಜನೆ ಜನಸಾಮಾನ್ಯರಿಗೆ ತಲುಪಿಸುವ, ವಿಶ್ವ ದಾಖಲೆಯ ಗುರಿ ಇಟ್ಟುಕೊಂಡು ನ.25ರಂದು ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿದೆ.  ತಾಲೂಕಿನ ಶ್ರೀರಾಂಪುರದ ನೂತನ ಬಸ್ ನಿಲ್ದಾಣದಲ್ಲಿ ಶಿಬಿರ ನಡೆಯಲಿದೆ.

ಹೊಸದುರ್ಗ(ನ.25): ಸರ್ಕಾರದ ಮಹತ್ವಾಕಾಂಕ್ಷಿಯ ದಂತ ಭಾಗ್ಯ ಯೋಜನೆ ಜನಸಾಮಾನ್ಯರಿಗೆ ತಲುಪಿಸುವ, ವಿಶ್ವ ದಾಖಲೆಯ ಗುರಿ ಇಟ್ಟುಕೊಂಡು ನ.25ರಂದು ಆಯೋಜಿಸಲಾಗಿರುವ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರಕ್ಕೆ ತಾಲೂಕಿನ ಶ್ರೀರಾಂಪುರದ ನೂತನ ಬಸ್ ನಿಲ್ದಾಣ ಸಜ್ಜುಗೊಂಡಿದೆ. ನೂತನ ಬಸ್ ನಿಲ್ದಾಣ ಇನ್ನೂ ಉದ್ಘಾಟನೆ ಆಗಿಲ್ಲ ಕಾರಣ, ಅಲ್ಲಿನ ವಿಶಾಲ ಮೈದಾನ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಶಿಬಿರ ನಡೆಸಲು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ತಾತ್ಕಾಲಿಕ ದಂತ ಆಸ್ಪತ್ರೆಯನ್ನೇ ಇಲ್ಲಿ ನಿರ್ಮಿಸಲಾಗಿದೆ. ಏಕಕಾಲಕ್ಕೆ ಸುಮಾರು 15 ಜನರಿಗೆ ಪರೀಕ್ಷೆ ನಡೆಸಲು ಅನುಕೂಲ ಆಗುವಂತೆ ಚಿಕಿತ್ಸಾ ಕೌಂಟರ್'ಗಳನ್ನು ತೆರೆಯಲಾಗಿದೆ.

ಉಚಿತ ದಂತ: ಸರ್ಕಾರಿ ದಂತ ಮಹಾವಿದ್ಯಾಲಯ, ಜಿಡಿಸಿ ಆರ್‌'ಐ ಅಲೋಮಿನಿ ಅಸೋಸಿಯೇಷನ್, ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಸೇವೆಗಳ ಇಲಾಖೆ, ಬಿ.ಜಿ. ಅಭಿಮಾನಿ ಬಳಗ ಸಹಯೋಗದಲ್ಲಿ ಆಯೋಜಿಸಿರುವ ಶಿಬಿರವನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ವಸ್ತ್ರಮಠ್ ಉದ್ಘಾಟಿಸುವರು. ಶಾಸಕ ಬಿ.ಜಿ. ಗೋವಿಂದಪ್ಪ ಅಧ್ಯಕ್ಷತೆ ವಹಿಸುವರು. ಭಾನುವಾರ ಶಿಬಿರ ಸಮಾರೋಪ ನಡೆಯಲಿದ್ದು, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬ್ರಹ್ಮ ವಿದ್ಯಾನಗರದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಕನಕ ಪೀಠದ ಈಶ್ವರಾನಂದ ಪುರಿ ಸ್ವಾಮೀಜಿ, ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಬೆಲಗೂರಿನ ಬಿಂದುಮಾಧವ ಸ್ವಾಮೀಜಿ ಸಾನಿಧ್ಯ ವಹಿಸುವರು.

ಉಸ್ತುವಾರಿ ಸಚಿವ ಎಚ್.ಆಂಜನೇಯ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಬಿ.ಜಿ. ಗೋವಿಂದಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಚಂದ್ರಪ್ಪ ದಂತ ವೈದ್ಯರನ್ನು ಸನ್ಮಾನಿಸುವರು. ವಿಶೇಷ ಆಹ್ವಾನಿತರಾಗಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಮನೋಜ್ ಕುಮಾರ್ ಮೀನಾ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ. ರತನ್ ಕೇಲ್ಕರ್, ಸರ್ಕಾರಿ ದಂತ ಮಹಾವಿದ್ಯಾಲಯ ನಿರ್ದೇಶಕ ಡಾ. ಪೃಥ್ವಿರಾಜ್, ಡಾ. ಫಯಾಜುದ್ದೀನ್, ಡಾ. ಸೌಂದರ್‌ರಾಜ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಎಸ್‌ಪಿ ಶ್ರೀನಾಥ್ ಜೋಷಿ, ಸಿಇಒ ರವೀಂದ್ರ ಭಾಗವಹಿಸುವರು.

ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕರಾದ ಸುಧಾಕರ್, ತಿಪ್ಪಾರೆಡ್ಡಿ, ರಘುಮೂರ್ತಿ, ತಿಪ್ಪೇಸ್ವಾಮಿ, ವಿಪ ಸದಸ್ಯ ಚೌಡರೆಡ್ಡಿ ತೂಪಲ್ಲಿ, ರಘು ಆಚಾರ್, ಜಯಮ್ಮ ಬಾಲರಾಜ್, ನಿಗಮ ಮಂಡಳಿ ಅಧ್ಯಕ್ಷ ಗೋತಿಪ್ಪೇಶ್, ಓ ಶಂಕರ್, ರುದ್ರಮುನಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು, ತಾಲೂಕಿನ ಎಲ್ಲ ಜಿಪಂ ಸದಸ್ಯರು ಹಾಗೂ ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು.

click me!