ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಭಕ್ತರ ಗಮನಕ್ಕೆ..

First Published Jun 12, 2018, 3:50 PM IST
Highlights

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧೀನದಲ್ಲಿ ಯಾವುದೇ ಮಠ ಮಂದಿರವಾಗಲೀ, ಇತರ ಶಾಖೆಗಳಾಗಲೀ, ಉಪಶಾಖೆಗಳಾಗಲೀ ಇರುವುದಿಲ್ಲ. ಹಾಗಾಗಿ, ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಭಕ್ತಾದಿಗಳು ಸಲ್ಲಿಸುವ ಹರಕೆ, ಸೇವೆ ಮತ್ತು ಕಾಣಿಕೆಗಳನ್ನು ದೇವಳದ ಕೌಂಟರ್‌, ಕಚೇರಿಯಲ್ಲೇ ಸಂದಾಯ ಮಾಡಬೇಕು ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

ಸುಬ್ರಹ್ಮಣ್ಯ :  ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧೀನದಲ್ಲಿ ಯಾವುದೇ ಮಠ ಮಂದಿರವಾಗಲೀ, ಇತರ ಶಾಖೆಗಳಾಗಲೀ, ಉಪಶಾಖೆಗಳಾಗಲೀ ಇರುವುದಿಲ್ಲ. ಹಾಗಾಗಿ, ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಭಕ್ತಾದಿಗಳು ಸಲ್ಲಿಸುವ ಹರಕೆ, ಸೇವೆ ಮತ್ತು ಕಾಣಿಕೆಗಳನ್ನು ದೇವಳದ ಕೌಂಟರ್, ಕಚೇರಿಯಲ್ಲೇ ಸಂದಾಯ ಮಾಡಬೇಕು ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

ಈ ಸಂಬಂಧ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ ಅವರು, ಸರ್ಪಸಂಸ್ಕಾರ ಸೇವೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಹಲವಾರು ಮಧ್ಯವರ್ತಿಗಳ ಮೂಲಕ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ತೋರಿಸಲಾಗಿದೆ. ಆದರೆ, ಈ ಅವ್ಯವಸ್ಥೆಗೂ, ಕುಕ್ಕೆ ದೇವಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು
ಸ್ಪಷ್ಟಪಡಿಸಿದರು.  

click me!