ಸಿನೀಮಿಯ ಶೈಲಿಯಲ್ಲಿ ನಡೆಯಿತು ದರೋಡೆ: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

Published : Jul 02, 2017, 08:12 AM ISTUpdated : Apr 11, 2018, 01:07 PM IST
ಸಿನೀಮಿಯ ಶೈಲಿಯಲ್ಲಿ ನಡೆಯಿತು ದರೋಡೆ: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಸಾರಾಂಶ

ಇದು ಸಿನಿಮೀಯ ಶೈಲಿಯಲ್ಲಿ ನಡೆದ ದರೋಡೆ. ಇನ್ನೇನು ಶಾಪ್ ಮುಚ್ಚಬೇಕು ಅಂತಾ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ಆಗಂತಕರು ದರೋಡೆ ಮಾಡಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಬರೀ ಚಿನ್ನ ಅಲ್ಲ ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ ನಡೆಸಿ ಬಂದೂಕು ಕದ್ದು ಪರಾರಿಯಾಗಿದ್ದಾರೆ.

ಚಿಕ್ಕಮಗಳೂರು(ಜು.02): ಇದು ಸಿನಿಮೀಯ ಶೈಲಿಯಲ್ಲಿ ನಡೆದ ದರೋಡೆ. ಇನ್ನೇನು ಶಾಪ್ ಮುಚ್ಚಬೇಕು ಅಂತಾ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ಆಗಂತಕರು ದರೋಡೆ ಮಾಡಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಬರೀ ಚಿನ್ನ ಅಲ್ಲ ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ ನಡೆಸಿ ಬಂದೂಕು ಕದ್ದು ಪರಾರಿಯಾಗಿದ್ದಾರೆ.

ಚಿಕ್ಕಮಗಳೂರಿನ ಚೆಮ್ಮನೂರು ಜ್ಯುವೆಲ್ಲರಿಗೆ ನುಗ್ಗಿದ ದರೊಡೆಕೋರರು ಸುಮಾರು 2 ಕೆಜಿಯಷ್ಟು ಚಿನ್ನ ಕದ್ದು ಪರಾರಿಯಾಗಿದ್ದಾರೆ. ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದರೋಡೆಕೋರರು ಶಾಪ್'ನಲ್ಲಿ ಹೊಗೆ ಬರುವ ಬಾಂಬ್ ಬ್ಲಾಸ್ಟ್ ಮಾಡಿದ್ದಾರೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್​ ಅಶ್ವತಪ್ಪ  ಕಳ್ಳರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಬಚಾವ್​ ಆದ ದರೋಡೆಕೋರರು ಲಾಂಗ್'ನಿಂದ  ಹಲ್ಲೆ ಮಾಡಿ ಚಿನ್ನದ ಜೊತೆ ಬಂದೂಕನ್ನು  ಕದ್ದು ಪರಾರಿಯಾಗಿದ್ದಾರೆ..

ಚೆಮ್ಮನೂರು ಜ್ಯೂವೆಲ್ಲರ್​ ಶಾಪ್ ನವರು ಅಂಗಡಿಯನ್ನು ಕ್ಲೋಸ್ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೂ ಇದು ಸಾರ್ವಜನಿಕರ ಎದುರೇ ಇದೆಲ್ಲಾ ನಡೆದರೂ ಯಾರು ಕೂಡ ಇವರನ್ನು ಹಿಡಿಯಲು ಮುಂದೆ ಬಂದಿಲ್ಲ. ಆದರೆ ದರೋಡೆಕೋರರು ಹೋದ ಬಳಿಕ ಗಾಯಗೊಂಡಿದ್ದ ಸೆಕ್ಯೂರಿಟಿ ಗಾರ್ಡ್​ ನನ್ನು ಆಸ್ಪತ್ರೆಗೆ ದಾಖಲಸಿದ್ದಾರೆ.

ಇನ್ನೂ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಹಾಗೂ ಕೇಂದ್ರವಲಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!