ಅಪವಿತ್ರ’ಮರ ಕತ್ತರಿಸಲು ಸಿಎಂ ಯೋಗಿ ಸೂಚನೆ

By Suvarna Web DeskFirst Published Jul 1, 2017, 11:54 PM IST
Highlights

ಅಲ್ಲದೆ ಯಾತ್ರೆಯ ಸಂದರ್ಭ ಕನ್ವರಿಯಾಗಳು ಕೇವಲ ಭಜನೆಗಳನ್ನು ಮಾತ್ರ ಹಾಡಬೇಕು ಮತ್ತು ಅಶ್ಲೀಲ ಪದಗಳನ್ನು ಹಾಡುವುದಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಿಎಂ ಯೋಗಿ ನಿರ್ದೇಶಿಸಿದ್ದಾರೆ.

ನವದೆಹಲಿ(ಜು.02): ‘ಕನ್ವರ್ ಯಾತ್ರೆ’ಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಯಾತ್ರಾರ್ಥಿಗಳು ಅಪವಿತ್ರವೆಂದು ಭಾವಿಸುವ ಅತ್ತಿ ಹಣ್ಣಿನ ಮರಗಳನ್ನು ಕತ್ತರಿಸಲು ಆದೇಶಿಸಿದ್ದಾರೆ. ಅಲ್ಲದೆ ಯಾತ್ರೆಯ ಸಂದರ್ಭ ಕನ್ವರಿಯಾಗಳು ಕೇವಲ ಭಜನೆಗಳನ್ನು ಮಾತ್ರ ಹಾಡಬೇಕು ಮತ್ತು ಅಶ್ಲೀಲ ಪದಗಳನ್ನು ಹಾಡುವುದಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಿಎಂ ಯೋಗಿ ನಿರ್ದೇಶಿಸಿದ್ದಾರೆ. ಜೋರಾದ ಮತ್ತು ಪ್ರಚೋದನಾತ್ಮಕ ಡಿಜೆಗಳಿಂದಾಗಿ ಸಮಸ್ಯೆಗಳಾಗುತ್ತಿದ್ದವು, ಈ ಬಾರಿ ಡಿಜೆಗಳಿಗೆ ಅವಕಾಶ ನೀಡದಂತೆ ಅಥವಾ ಉತ್ತೇಜನ ನೀಡದಂತೆ ಸೂಚಿಸಲಾಗಿದೆ. ಜು. ೮ರಂದು ಆರಂಭವಾಗಲಿರುವ ವಾರ್ಷಿಕ ಯಾತ್ರೆಯ ತಯಾರಿ ಬಗ್ಗೆ ಸಿಎಂ ಯೋಗಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಇದೇ ಮೊದಲ ಬಾರಿ ಸ್ವತಃ ಸಿಎಂ ಯಾತ್ರೆಯ ವ್ಯವಸ್ಥೆಗಳ ಅವಲೋಕನ ಮಾಡಿದ್ದಾರೆ.

click me!