ದುಬೈನಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ಎತ್ತರದ ಕಟ್ಟಡ...! ಎತ್ತರ ಎಷ್ಟಿರಬಹುದು..?

By internet deskFirst Published Oct 13, 2016, 4:08 AM IST
Highlights

ಬುರ್ಜ್ ಖಲೀಫಾ 828 ಮೀಟರ್ ಎತ್ತರವಿದೆ, ನೂತನ ಕಟ್ಟಡ ಅದನ್ನೂ ಮೀರಿಸಲಿದೆ ಅಂತಾ ನಿರ್ಮಾಣದ ಹೊಣೆ ಹೊತ್ತಿರುವ ಎಮಾರ್ ಪ್ರಾಪರ್ಟೀಸ್ ತಿಳಿಸಿದೆ. 

ದುಬೈ(ಅ.13): ದುಬೈನಲ್ಲಿ ಸದ್ಯದಲ್ಲೇ ಮತ್ತೊಂದು ಗಗನಚುಂಬಿ ಕಟ್ಟಡ ತಲೆ ಎತ್ತಲಿದೆ. ಸದ್ಯ ವಿಶ್ವದಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ ಇದು. 

ಈ ಅದ್ಭುತ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. 2020 ರ ವೇಳೆಗೆ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 

Latest Videos

ಬುರ್ಜ್ ಖಲೀಫಾ 828 ಮೀಟರ್ ಎತ್ತರವಿದೆ, ನೂತನ ಕಟ್ಟಡ ಅದನ್ನೂ ಮೀರಿಸಲಿದೆ ಅಂತಾ ನಿರ್ಮಾಣದ ಹೊಣೆ ಹೊತ್ತಿರುವ ಎಮಾರ್ ಪ್ರಾಪರ್ಟೀಸ್ ತಿಳಿಸಿದೆ. 

ಆದರೆ ಎಷ್ಟು ಎತ್ತರವಿರಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಸುಮಾರು 1 ಬಿಲಿಯನ್ ಡಾಲರ್ ವೆಚ್ಚ ಮಾಡಲಾಗಿದೆ. ಸ್ಪೇನ್-ಸ್ವಿಡ್ಜರ್ಲೆಂಡ್ ಮೂಲದ ವಾಸ್ತುಶಿಲ್ಪಿ ಸ್ಯಾಂಟಿಗೋ ಕಾಲಾಟ್ರವಾ ವಾಲ್ಸ್ ಇದನ್ನು ವಿನ್ಯಾಸ ಮಾಡಿದ್ದಾರೆ..
 

click me!