ಉಗ್ರ ಚಟುವಟಿಕೆ ನಿಲ್ಲಿಸದ ಪಾಕ್‌ಗೆ ಅಮೆರಿಕಾ ರಕ್ಷಣಾ ನೆರವು ಸ್ಟಾಪ್

By Suvarna Web DeskFirst Published Dec 30, 2017, 12:20 PM IST
Highlights

- ಪದೆ ಪದೇ ಎಚ್ಚರಿಸಿದರೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ ಪಾಕಿಸ್ತಾನ

- ಪಾಕಿಸ್ತಾನ ನಡೆ ವಿರುದ್ಧ ಅಮೆರಿಕ ಮುನಿಸು

- ಸೈನ್ಯ ನೆರವು ತಡೆಯಲು ಮುಂದಾದ ಅಮೆರಿಕ

ವಾಷಿಂಗ್ಟನ್: ಪದೆ ಪದೇ ಎಚ್ಚರಿಸಿದರೂ ಭಯೋತ್ಪಾದನೆ ಹಾಗೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ ಪಾಕಿಸ್ತಾನದ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಆ ರಾಷ್ಟ್ರಕ್ಕೆ ನೀಡುತ್ತಿದ್ದ ಸಾವಿರಾರು ಕೋಟಿ ಸೇನಾ ನೆರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ವಿದೇಶ ರಕ್ಷಣಾ ಇಲಾಖೆಯ ವಿತ್ತೀಯ ನೆರವಿನಡಿಯಲ್ಲಿ ಪಾಕಿಸ್ತಾನಕ್ಕೆ 255 ಮಿಲಿಯನ್ ಡಾಲರ್ (ಸುಮಾರು 16 ಸಾವಿರ ಕೋಟಿ) ನೀಡದಿರಲು ಅಮೆರಿಕ ನಿರ್ಧರಿಸಿದೆ, ಎಂದು ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

'ತನ್ನದೇ ಮಣ್ಣಲ್ಲಿರುವ ಭಯೋತ್ಪಾದನೆ ತಡೆಗಟ್ಟುವಲ್ಲಿ ಪಾಕಿಸ್ತಾನ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಬೇಕು. ಪಾಕಿಸ್ತಾನ ತೆಗೆದುಕೊಳ್ಳುವ ಕ್ರಮ ದಕ್ಷಿಣ ಏಷ್ಯಾ ತಂತ್ರಕ್ಕೆ ಪೂರಕವಾಗಿರಬೇಕೆಂಬುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಪಾಕಿಸ್ತಾನಕ್ಕೆ ನೀಡುವ ಸಕಲ ನೆರವನ್ನು ಅಮೆರಿಕ ಮುಂದುವರಿಸಲಿದೆ,' ಎಂದಿದ್ದಾರೆ.

ಅಮೆರಿಕದಿಂದ ಈ ನಿರ್ಧಾರದಿಂದ ಪಾಕಿಸ್ತಾನ ಉದ್ಧಟತನ ತೋರುವುದು ಕಡಿಮೆಯಾಗಲಿದ್ದು, ಇದು ಭಾರತಕ್ಕೂ ಪರೋಕ್ಷವಾಗಿ ನೆರವಾಗುವ ನಿರೀಕ್ಷೆಯಿದೆ.

click me!