ಯತಾ ತಾತ ತಥಾ ಪೌತ್ರ: ಸ್ವಂತಕ್ಕೆ ವಾರ್ ಶಿಪ್ ಬಳ್ಸೋದು ಕಲಿಸಿದ್ದೇ ನೆಹರೂ!

By Web DeskFirst Published May 9, 2019, 12:16 PM IST
Highlights

ರಾಜೀವ್ ಗಾಂಧಿ ಕುಟುಂಬ 1980ರಲ್ಲೇ ಯುದ್ಧನೌಕೆಗಳನ್ನು ವೈಯಕ್ತಿಕ ಟ್ಯಾಕ್ಸಿಯಂತೆ ಬಳಸಿತ್ತು| ಮೋದಿ ಆರೋಪದ ಬೆನ್ನಲ್ಲೇ ಬೆಳಕಿಗೆ ಬಂತು ಮತ್ತೊಂದು ಅಚ್ಚರಿಯ ವಿಷಯ| ರಾಜೀವ್ ಗಾಂಧಿಯಲ್ಲ ನೆಹರೂ ಕಾಲದಲ್ಲೇ ಯುದ್ಧನೌಕೆಗಳ ಬಳಕೆ| ಸಾಕ್ಷಿ ಎಂಬಂತಿವೆ ಈ ಫೋಟೋಗಳು

ನವದೆಹಲಿ[ಮೇ.09]: ಪ್ರಧಾನಿ ನರೇಂದ್ರ ಮೋದಿ ರಾಜೀವ್ ಗಾಂಧಿ ಕುಟುಂಬ 1980ರಲ್ಲಿ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆಯನ್ನೇ ಗಾಂಧೀ ಕುಟುಂಬ ವೈಯಕ್ತಿಕ ಟ್ಯಾಕ್ಸಿ ರೀತಿ ಬಳಸಿಕೊಂಡಿತ್ತು ಎಂಬ ಗಂಭೀರ ಆರೋಪ ಮಾಡಿರುವುದು ಸದ್ಯ ಚರ್ಚೆ ಹುಟ್ಟು ಹಾಕಿದೆ. ಇದರ ಬೆನ್ನಲ್ಲೇ ಮೈ ನೇಷನ್ ಪ್ರಕಟಿಸಿರುವ ವರದಿಯಲ್ಲಿ, 1950ರಲ್ಲೇ  ಗಾಂಧೀ ಕುಟುಂಬ ಯುದ್ಧನೌಕೆಯನ್ನು ವೈಯುಕ್ತಿಕವಾಗಿ ಬಳಸಿಕೊಳ್ಳುತ್ತಿದ್ದ ಪದ್ಧತಿ ಆರಂಭವಾಗಿತ್ತು ಎಂಬ ಅಚ್ಚರಿಯ ವಿಚಾರ ಬಹಿರಂಗಗೊಂಡಿದೆ.

ರಾಜೀವ್‌ ಗಾಂಧಿ ಕುಟುಂಬದ ವಿರುದ್ಧ ಮೋದಿ ಮತ್ತೊಂದು ಗಂಭೀರ ಆರೋಪ!

ಹೌದು ದೇಶದ ಮೊದಲ ಪ್ರಧಾನಿ ಜವಾಹರ‌ಲಾಲ್ ನೆಹರು 1950ರ ಜೂನ್ ತಿಂಗಳ ರಜೆ ಕಳೆಯಲು ಐಎನ್‌ಎಸ್‌ ಡೆಲ್ಲಿ ಯುದ್ಧನೌಕೆಯನ್ನು ಬಳಸಿಕೊಂಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಯುದ್ಧನೌಕೆಯಲ್ಲಿ ಕ್ಲಿಕ್ಕಿಸಿದ ಫೋಟೋಗಳೂ ಲಭ್ಯವಾಗಿವೆ. ಪೋಟೋಗಳಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ತಮ್ಮ ಮಗಳು ಇಂಧಿರಾ ಗಾಂಧಿ, ಮೊಮ್ಮಕ್ಕಳಾದ ರಾಜೀವ್ ಹಾಗೂ ಸಂಜಯ್ ಗಾಂಧಿ ಜೊತೆ ಐಎನ್‌ಎಸ್‌ ಯುದ್ಧನೌಕೆಯಲ್ಲಿ ರಜಾ ದಿನಗಳನ್ನು ಕಳೆಯುತ್ತಿರುವುದು ನೋಡಬಹುದು.

ಐಎನ್‌ಎಸ್‌ ಡೆಲ್ಲಿ ಯುದ್ಧನೌಕೆಯ ಪಯಣ:

1933 ರಲ್ಲಿ ಈ ಲಿಯಾಂಡರ್ ಕ್ಲಾಸ್ ಲಘು ಕ್ರೂಸರ್ ನ್ನು ನೌಕಾಪಡೆಗಾಗಿ ನಿರ್ಮಿಸಲಾಗಿತ್ತು. ಬ್ರಿಟಿಷ್ ಕಾಲದಲ್ಲಿ ಎಚ್ ಎಮ್ ಎಸ್ ಅಖಿಲೀಸ್ ಎಂದೇ ಖ್ಯಾತವಾಗಿದ್ದ ಇದನ್ನು ರಾಯಲ್ ನೇವಿಯು 1937ರಲ್ಲಿ ನ್ಯೂಜಿಲ್ಯಾಂಡ್ ವಿಭಜನೆ ವೇಳೆ ಬಳಸಿತ್ತು. ಎರಡನೇ ಮಹಾ ವಿಶ್ವಯುದ್ಧದಲ್ಲಿಯೂ ಇದು ಪ್ರಮುಖ ಪತ್ರ ವಹಿಸಿತ್ತು. 1948ರಲ್ಲಿ ರಾಯಲ್ ಇಂಡಿಯನ್ ನೇವಿಗೆ ಹಸ್ತಾಂತರಗೊಂಡ ಈ ಯುದ್ಧನೌಕೆಯನ್ನು ನವೀಕರಿಸಿ HMIS ಎಂದು ಹೆಸರಿಸಲಾಯಿತು. ಆದರೆ 1950ರಲ್ಲಿ ಇದನ್ನು ಐಎನ್‌ಎಸ್‌ ಡೆಲ್ಲಿ ಎಂದು ಮರುನಾಮಕರಣ ಮಾಡಲಾಯಿತು. ಭಾರತೀಯ ನೌಕಾಸೇನೆಯಲ್ಲಿ ನಿರಂತರ ಸೇವೆ ಸಲ್ಲಿಸಿದ ಐಎನ್‌ಎಸ್‌ ಡೆಲ್ಲಿಯನ್ನು 1978ರ ಜೂನ್ 30ರಂದು ಸೇವೆಯಿಂದ ನಿವೃತ್ತಿಗೊಳಿಸಲಾಗಿತ್ತು.

ನಿಮ್ಮ ತಂದೆಯ ಜೀವನ ನಂ. 1 ಭ್ರಷ್ಟಾಚಾರಿಯಾಗಿ ಕೊನೆಯಾಯ್ತು: ರಾಹುಲ್ ವಿರುದ್ಧ ಮೋದಿ ಕಿಡಿ!

‘ಕರ್ಮ’ ಕಾಯುತ್ತಿದೆ: ಮೋದಿಯನ್ನು ಮತ್ತೆ ತಬ್ಬಿಕೊಂಡ ರಾಹುಲ್!

click me!