ಚಿನ್ನ ಬೆಳ್ಳಿ ಬೆಲೆಯಲ್ಲಿ ದಿಢೀರ್ ಏರಿಕೆ: ಕಾರಣ ಎರಡು

By Suvarna Web DeskFirst Published Nov 10, 2016, 4:55 AM IST
Highlights

ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. 1 ಕೆ.ಜಿ. ಬೆಳ್ಳಿಗೆ 2000 ರೂ ಹೆಚ್ಚಳವಾಗಿ 44,520 ರೂಪಾಯಿಗೆ ತಲುಪಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಕಂಡ ಅತಿ ಹೆಚ್ಚು ಬೆಲೆ ಎಂದು ತಿಳಿದುಬಂದಿದೆ. 

ಮುಂಬೈ(ನ.10): 500 ರೂ., 1000 ರೂ. ನೋಟುಗಳ ಚಲಾವಣೆ ರದ್ದುಪಡಿಸಿರುವುದು ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ನಡೆಯುತ್ತಿರುವುದು ಮಾರುಕಟ್ಟೆಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. 

ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ ಕಂಡಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನ ಪ್ರತಿ 10 ಗ್ರಾಂಗೆ ಸುಮಾರು 1000 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 30,700 ರೂ.ನಿಂದ 31,600 ರೂಪಾಯಿಗೆ ಹೆಚ್ಚಳವಾಗಿದೆ. 

ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. 1 ಕೆ.ಜಿ. ಬೆಳ್ಳಿಗೆ 2000 ರೂ ಹೆಚ್ಚಳವಾಗಿ 44,520 ರೂಪಾಯಿಗೆ ತಲುಪಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಕಂಡ ಅತಿ ಹೆಚ್ಚು ಬೆಲೆ ಎಂದು ತಿಳಿದುಬಂದಿದೆ. 

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಇಂದು ಟ್ರಂಪ್ ಅವರ ಗೆಲುವು ಘೋಷಣೆಯಾಗಿದ್ದು, ರಾಜಕೀಯ ಮತ್ತು ಹಣಕಾಸು ನೀತಿಗಳಲ್ಲಿ ಬದಲಾವಣೆಯ ಸಾಧ್ಯತೆ ಈ ಏರಿಕೆಗೆ ಕಾರಣ ಎಂದು ಊಹಿಸಲಾಗಿದೆ. 

click me!