
ಬೆಂಗಳೂರು(ನ.18): ದೇಶದಲ್ಲಿ 500 ಹಾಗೂ 1000 ನೋಟು ರದ್ದಾದ ಕಪ್ಪು ಹಣ ಬಿಳಿ ಮಾಡೋ ಗ್ಯಾಂಗ್ಗಳು ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಂಡಿವೆ. ಈ ಗ್ಯಾಂಗ್ಗಳು ಬೆಚ್ಚಿ ಬೀಳಿಸೋ ಮಟ್ಟಕ್ಕೆ ಕಮಿಷನ್ ದಂಧೆ ಮಾಡುತ್ತಿವೆ. ಅದು ಹೇಗೆ?ಎಷ್ಟು ಪರ್ಸಂಟೇಜ್ ನಡೆಯುತ್ತಿದೆ, ಈ ಗ್ಯಾಂಗ್'ನ ಸೀಕ್ರೆಟ್'ಗಳೇನು ಎನ್ನುವುದನ್ನು ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ಮಾಡಿ ಬಯಲು ಮಾಡಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ.
ಸುವರ್ಣ ನ್ಯೂಸ್ ನಿರಂತರವಾಗಿ ಕಪ್ಪು ಹಣ ದಂಧೆಕೋರರ ಬಣ್ಣ ಬಯಲು ಮಾಡುತ್ತಲೇ ಇದೆ. ದೇಶಕ್ಕೆ ದ್ರೋಹ ಮಾಡುವ ದ್ರೋಹಿಗಳ ಮುಖವಾಡ ಕಳಚುತ್ತಲೇ ಇದೆ. ಈಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಅದುವೇ ಆಪರೇಷನ್ ಬ್ಲ್ಯಾಕ್ ಆಂಡ್ ವೈಟ್.
ಸುವರ್ಣ ನ್ಯೂಸ್ ತಂಡ ಭಾರೀ ರಿಸ್ಕ್ ಎದುರಿಸಿ ಕಪ್ಪು ಹಣ ದಂಧೆಕೋರರ ಕೋಟೆಯೊಳಗೆ ಲಗ್ಗೆ ಇಟ್ಟಿದೆ. ಅಷ್ಟೇ ಅಲ್ಲ ಕಪ್ಪು ಹಣ ಬಿಳಿ ಮಾಡಯುವ ಏಜೆಂಟರನ್ನೂ ಭೇಟಿಯಾಗಿ ಅವರ ದಂಧೆಯ ರಹಸ್ಯವನ್ನೂ ಪತ್ತೆ ಹಚ್ಚಿದೆ.
ಈ ದಂಧೆಯ ಕರಾಳ ಮುಖಗಳು ಹಾಗೂ ಸೀಕ್ರೆಟ್'ಗಳು ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿವೆ. ಅಲ್ಲದೆ ಅಧಿಕಾರಿಗಳು, ಸಂಸ್ಥೆಗಳು ಹೇಗೆ ಈ ಕರಾಳ ದಂಧೆಯಲ್ಲಿ ತೊಡಗಿದ್ದಾರೆ ಅನ್ನೋದರ ಸಂಪೂರ್ಣ ಮಾಹಿತಿಗಾಗಿ ವೀಕ್ಷಿಸಿ ಕವರ್'ಸ್ಟೋರಿ ಇಂದು ರಾತ್ರಿ 8.30ಕ್ಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.