ಜೈಲಿನಿಂದ ಬಂದು ಪತ್ನಿ ಹಂತಕನನ್ನು ಹಿಡಿದ ಪತಿ

Published : Nov 18, 2016, 03:04 AM ISTUpdated : Apr 11, 2018, 12:50 PM IST
ಜೈಲಿನಿಂದ ಬಂದು ಪತ್ನಿ ಹಂತಕನನ್ನು ಹಿಡಿದ ಪತಿ

ಸಾರಾಂಶ

* ಪತ್ನಿ ಕಿರುಕುಳದ ಆರೋಪದಲ್ಲಿ ಜೈಲು ಸೇರಿದ್ದ ಪತಿ * ಆದರೆ ಪತ್ನಿಯ ಸಾವಿಗೆ ಕಾರಣವಾಗಿದ್ದವನೇ ಬೇರೆ * ಪರಪುರುಷನಿಂದ ಮೋಸಹೋಗಿ, ಆತ್ಮಹತ್ಯೆ ಮಾಡಿಕೊಂಡಿದ್ದಳು ಪತ್ನಿ * ಮೊಬೈಲ್‌ ತಿಳಿಸಿತ್ತು ಪತ್ನಿ ಸಾವಿನ ರಹಸ್ಯ  * ಬಯಲಾಗಿತ್ತು ಪತ್ನಿಯ ಅಕ್ರಮ ಸಂಬಂಧ

ಬೆಂಗಳೂರು: ಪತ್ನಿಯ ಆತ್ಮಹತ್ಯೆ ಪ್ರಕರಣ ಸಂಬಂಧ ಪತಿಯೊಬ್ಬ ಸೆರೆವಾಸ ಅನುಭವಿಸಿ ಹೊರ​ಬಂದ ಬಳಿಕ ಪತ್ನಿಯ ಸಾವಿಗೆ ಕಾರಣನಾದ ನಿಜವಾದ ಆರೋಪಿಯನ್ನು ಪೊಲೀಸರಿಗೊ​ಪ್ಪಿಸಿದ ಅಚ್ಚರಿಯ ಘಟನೆ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಿವಾಸ್‌ ಗಿರೀಶ್‌ ಪಟ್ನಾಯಕ್‌ (27) ಬಂಧಿತ ಆರೋಪಿ. ಮಹದೇವಪುರ ನಿವಾಸಿ ವೆಂಕಟ ಜಗದೀಶ್‌ (27) ಆರೋಪಿಯನ್ನು ಪತ್ತೆ ಮಾಡಿದ ಟೆಕ್ಕಿ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಜಗದೀಶ್‌ ಹಾಗೂ ಜ್ಯೋತ್ಸ್ನಾ ಅವರನ್ನು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. 2015ರ ಡಿ. 4ರಂದು ಜೋತ್ಸ್ನಾಳ ಮನೆಯಲ್ಲಿ ಆತ್ಮಹತ್ಯೆ ಮಾಡಿ​ಕೊಂಡಿ​ದ್ದರು. ಈ ಸಂಬಂಧ ಜ್ಯೋತ್ಸ್ಯಾಳ ಪೋಷಕರು ಜಗ​ದೀಶ್‌ ಹಾಗೂ ಆತನ ಕುಟುಂಬದವರ ವಿರುದ್ಧ ಕಿರುಕುಳ ಆರೋಪ​ದಡಿ ಮಹದೇವ​ಪುರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಬಳಿಕ ಜಗದೀಶ್‌ ಬಂಧನಕ್ಕೊಳ​ಗಾಗಿದ್ದರು.

ಜಾಮೀನು ಪಡೆದು 2016ರ ಜನವರಿ​ಯಲ್ಲಿ ಬಿಡುಗಡೆಯಾದ ಜಗದೀಶ್‌, ಪತ್ನಿ ಸಾವಿಗೆ ಕಾರಣ ಏನೆಂಬುದರ ಮಾಹಿತಿ ಸಂಗ್ರಹಿಸಿದ್ದರು. ಮೊದಲಿಗೆ ಪತ್ನಿಯ ಮೊಬೈಲ್‌​ಗಳನ್ನು ಪರಿಶೀಲಿಸಿದಾಗ ಜ್ಯೋತ್ಸ್ಯಾ ಅವರ ಹಿರಿಯ ಸಹೋದ್ಯೋಗಿ ಬಿ.ಟೆಕ್‌ ಗಿರೀಶ್‌ ಪಟ್ನಾಯಕ್‌ ಜತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ತಿಳಿದು ಬಂದಿದೆ. ಗಿರೀಶ್‌ಗೆ ನಿರಂತರವಾಗಿ ಕರೆ ಮಾಡುತ್ತಿರುವುದು, ಆತ್ಮೀಯವಾಗಿರುವ ಫೋಟೋಗಳು ದೊರೆತಿವೆ. ಈ ನಡುವೆ ಗಿರೀಶ್‌ಗೆ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಗಿರೀಶ್‌ಗೆ ನಿಶ್ಚಯವಾಗಿದ್ದ ಯುವತಿ ಸಹ ಜ್ಯೋತ್ಸ್ಯಾರಿಗೆ ಕರೆ ಮಾಡಿ ನಿಂದಿಸಿದ್ದರು. ಗಿರೀಶ್‌ ಸಹ ತನ್ನನ್ನು ಮರೆಯು​ವಂತೆ ಹೇಳಿದ್ದರು. ಈ ಎಲ್ಲಾ ವಿಚಾರಗಳು ಜ್ಯೋತ್ಸಾ$್ನ ಅವರ ಮೊಬೈಲ್‌ ಚಾಟ್‌ನಲ್ಲಿ ಪತ್ತೆಯಾಗಿತ್ತು. ಈ ಮಾಹಿತಿಯನ್ನು ಜಗದೀಶ್‌ ಪೊಲೀಸರಿಗೆ ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಶ್ರೀನಿವಾಸ್‌ನನ್ನು ಆಂಧ್ರದ ಶ್ರೀಕುಳಂನಲ್ಲಿ ಬಂಧಿಸಿದ್ದಾರೆ.

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆ ಕಾಯ್ದೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಲ್ಲ: ಬಿ.ಕೆ.ಹರಿಪ್ರಸಾದ್‌ ಲೇಖನ
ಬೆಂಗಳೂರು ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೆರವು ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್