ಮೋದಿ- ಕ್ಸಿ ಮಾತುಕತೆಗೆ ಮಹಾಬಲಿಪುರಂ ಏಕೆ?

By Web DeskFirst Published Oct 11, 2019, 10:57 AM IST
Highlights

-ಮೋದಿ ಶೃಂಗಸಭೆ| ಮಾತುಕತೆ ಮಹಾಬಲಿಪುರಂ ಏಕೆ?|  ಪಲ್ಲವ ಅರಸ ನರಸಿಂಹವರ್ಮನ್‌ನ ಬಿರುದು ‘ಮಮ್ಮಲನ್‌’ (ವೀರಯೋಧ) ಎಂಬುದರ ಹೆಸರು

ಮಹಾಬಲಿಪುರಂ[ಅ.11]: ಮಹಾಬಲಿಪುರಂ ಅನ್ನೇ ಕ್ಸಿ-ಮೋದಿ ಶೃಂಗಸಭೆಗೆ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬುದರ ಹಿಂದೆ ಕುತೂಹಲಕರ ಸಂಗತಿಯಿದೆ. ಮಹಾಬಲಿಪುರಕ್ಕೆ ಮಾಮಲ್ಲಪುರಂ ಎಂದೂ ಕರೆಯಲಾಗುತ್ತದೆ. ಇದು ಪಲ್ಲವ ಅರಸ ನರಸಿಂಹವರ್ಮನ್‌ನ ಬಿರುದು ‘ಮಮ್ಮಲನ್‌’ (ವೀರಯೋಧ) ಎಂಬುದರ ಹೆಸರು. ಈಗ ಕ್ರಿ.ಶ. 630-668ರವರೆಗೆ ಆಳ್ವಿಕೆ ನಡೆಸಿದ್ದ. ಈತನ ಆಳ್ವಿಕೆ ವೇಳೆಯೇ ಚೀನಾದ ರಾಯಭಾರಿ ಹ್ಯುಯೆನ್‌ ತ್ಸಾಂಗ್‌ ಪಲ್ಲವರ ರಾಜಧಾನಿಯಾಗಿದ್ದ ಕಾಂಚೀಪುರಕ್ಕೆ ಭೇಟಿ ನೀಡಿದ್ದ. ಹೀಗಾಗಿ ಅಂದಿನಿಂದಲೂ ಮಹಾಬಲಿಪುರಂಗೂ ಚೀನಾಗೂ ನಂಟಿದೆ.

ಮಹಾಬಲಿಪುರಂ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಜಗತ್ತಿನ ಗಮನ ಸೆಳೆಯುವ ತಮ್ಮ ಭರವಸೆಯ ಭಾಗವಾಗಿ ಮೋದಿ ದಕ್ಷಿಣ ಭಾರತದ ಮಹಾಬಲಿಪುರಂ ಆಯ್ಕೆ ಮಾಡಿಕೊಂಡಿದ್ದಾರೆ.

ಚೀನಾದಲ್ಲಿ ಝೆನ್‌ ಬುದ್ಧಿಸಂ ಪ್ರಚಾರ ಮಾಡಿದ ಬೋಧಿಧರ್ಮ ಕೂಡಾ ತಮಿಳುನಾಡಿನವನು. ಈತ ಪಲ್ಲವರ ಕಾಲದಲ್ಲಿ ಭಾರತದಿಂದ ಚೀನಾಕ್ಕೆ ತೆರಳಿ ಅಲ್ಲಿ ಧರ್ಮ ಪ್ರಚಾರ ಮಾಡಿದ್ದ.

ಪಲ್ಲವ ಮತ್ತು ಚೋಳರ ಕಾಲದಲ್ಲಿ ಚೀನಾದೊಂದಿಗೆ ವ್ಯಾಪಾರ ವಹಿವಾಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ಪಲ್ಲವರು, ಚೀನಾದ ರಾಜಮನೆತನಗಳ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿದ್ದರು.

ಕ್ರಿಸ್ತಪೂರ್ವ ಕಾಲದಲ್ಲೂ ತಮಿಳುನಾಡಿನ ಕರಾವಳಿ ಭಾಗ ಮತ್ತು ಚೀನಾದ ವಿವಿಧ ಪ್ರಾಂತ್ಯಗಳ ನಡುವೆ ವ್ಯಾವಹಾರಿಕ ಸಂಬಂಧಗಳ ನಡುವೆ ಹಲವು ಕುರುಹುಗಳು ಸಿಕ್ಕಿವೆ.

click me!