
ಭೋಪಾಲ(ಜು.17): ಮಧ್ಯಪ್ರದೇಶದಲ್ಲಿ ಕಳೆದ 14 ವರ್ಷಗಳಿಂದ ಕಾಂಗ್ರೆಸ್ ಅಧಿಕಾರ ಹಿಡಿದಿಲ್ಲ. ಜನರ ಆಶೋತ್ತರಗಳಿಗೆ ಕಾಂಗ್ರೆಸ್ಸಿಗರು ಸ್ಪಂದಿಸುತ್ತಿಲ್ಲದಿರುವುದೇ ಆ ಪಕ್ಷದ ಸೋಲಿಗೆ ಕಾರಣವಿರಬಹುದು ಎಂದುಕೊಂಡರೆ ಅದು ತಪ್ಪು. ಕಾಂಗ್ರೆಸ್ಸಿಗರ ಪ್ರಕಾರ, ಪಕ್ಷದ ಸತತ ಸೋಲಿಗೆ ವಾಸ್ತು ದೋಷ ಕಾರಣವಂತೆ! ಭೋಪಾಲದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಕೇಂದ್ರ ಕಚೇರಿ ಇದೆ. ಅದರ 3ನೇ ಮಹಡಿಯಲ್ಲಿ ಒಂದು ಟಾಯ್ಲೆಟ್ ಇದೆ. ಅದರಿಂದಾಗಿಯೇ ಪಕ್ಷ ಸೋಲುತ್ತಿದೆ ಎಂದು ನಾಯಕರು ತಿಳಿಸಿದ್ದಾರೆ.
ಈಶಾನ್ಯ ದಿಕ್ಕಿಗೆ ಮುಖ ಮಾಡಿಕೊಂಡಂತೆ ಈ ಟಾಯ್ಲೆಟ್ ಇರುವುದೇ ಪಕ್ಷದ ಸೋಲಿಗೆ ಕಾರಣ ಎಂದು ವಾಸ್ತು ತಜ್ಞರೊಬ್ಬರು ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ 2018ರ ಚುನಾವಣೆಯಲ್ಲಿ ಪಕ್ಷ ದೈವ ಬಲ ನಿರೀಕ್ಷಿಸಲಿದೆ ಎಂದು ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ ತಿಳಿಸಿದ್ದಾರೆ.
ಬಿಜೆಪಿ ಕೂಡ ವಾಸ್ತು ಶಾಸ್ತ್ರ ಸಮರ್ಥಿಸಿದ್ದು, ಇದೆಲ್ಲಾ ಮೂಢನಂಬಿಕೆ ಅಲ್ಲ ಎಂದಿದೆ. ಇದೇ ವೇಳೆ, ವಾಸ್ತು ದೋಷ ಸರಿಪಡಿಸಿದರೆ ಕಾಂಗ್ರೆಸ್ ಚುನಾವಣೆ ಗೆಲ್ಲಲ್ಲ. ಅವರು ಶುದ್ಧ ಹಸ್ತರಾಗಿ ಹೊರಬರಬೇಕು ಎಂದು ಬಿಜೆಪಿ ವಕ್ತಾರ ಡಾ| ಹಿತೇಶ್ ಬಾಜಪೇಯಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.