ಚಂದ್ರನ ಸೃಷ್ಠಿ ಹಿಂದಿನ ರಹಸ್ಯ ಪತ್ತೆಹಚ್ಚಿದ ಸಂಶೋಧಕರು

By internet desk-First Published Sep 28, 2016, 3:17 AM IST
Highlights

ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಗ್ರಹಗಳ ಘರ್ಷಣೆಯಿಂದ ಚಂದ್ರನ ಸೃಷ್ಟಿಯಾಯಿತು

ಮೇರಿಲ್ಯಾಂಡ್(ಸೆ.29): ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಗ್ರಹಗಳ ಘರ್ಷಣೆಯಿಂದ ಚಂದ್ರನ ಸೃಷ್ಟಿಯಾಯಿತು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

ಚಂದ್ರನ ಸೃಷ್ಟಿಗೆ ಸಂಬಂಧಿಸಿದ ಪ್ರಚಲಿತ ಕಲ್ಪನೆಗೆ ಇದು ಹೊಸ ಸ್ವರೂಪ ನೀಡಿದೆ. ನಮ್ಮ ಗ್ರಹವು ಒಂದು ಸಣ್ಣ ಆಕಾಶಕಾಯಕ್ಕೆ ಡಿಕ್ಕಿ ಹೊಡೆದು ಘರ್ಷಣೆ ಸಂಭವಿಸಿತ್ತು. ಈ ಪ್ರಕ್ರಿಯೆಯ ಪರಿಣಾಮ ಬೃಹತ್ ಅವಶೇಷಗಳ ಭಾಗವೊಂದು ಬಾಹ್ಯಾಕಾಶಕ್ಕೆ ಸಿಡಿದಿತ್ತು. ಇದೇ ಚಂದ್ರನ ಸೃಷ್ಟಿಗೆ ಕಾರಣವಾಯಿತು. ನಮ್ಮ ಪ್ರಯೋಗವು ಪ್ರಚಲಿತ ಕಲ್ಪನೆಗೆ ಹೆಚ್ಚಿನ ಸಾಕ್ಷ್ಯ ಒದಗಿಸಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿವಿ ಸಂಶೋಧಕರು ತಿಳಿಸಿದ್ದಾರೆ.

click me!