ಇಂದು ಬಿಬಿಎಂಪಿ ಚುನಾವಣೆ: ಪದ್ಮಾವತಿ ಮೇಯರ್, ಆನಂದ್ ಉಪಮೇಯರ್?

Published : Sep 28, 2016, 02:28 AM ISTUpdated : Apr 11, 2018, 01:11 PM IST
ಇಂದು ಬಿಬಿಎಂಪಿ ಚುನಾವಣೆ: ಪದ್ಮಾವತಿ ಮೇಯರ್, ಆನಂದ್ ಉಪಮೇಯರ್?

ಸಾರಾಂಶ

ಬೆಂಗಳೂರು(ಸೆ. 28): ಬಿಬಿಎಂಪಿಯ ಎರಡನೇ ಅವಧಿಗೆ ಮೇಯರ್, ಉಪ-ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಇಂದು ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದ್ದು, ಮೂರು ಪಕ್ಷಗಳು ಸೇರಿದಂತೆ ಪಕ್ಷೇತರರನ್ನು ಒಳಗೊಂಡು ಒಟ್ಟು 269 ಮತಗಳು ಚಲಾವಣೆಯಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಪ್ಪಂದದ ಪ್ರಕಾರ ಕಾಂಗ್ರೆಸ್'ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್'ಗೆ ಉಪಮೇಯರ್ ಸ್ಥಾನ ಹೋಗಲಿದೆ.

ಪದ್ಮಾವತಿ ಮೇಯರ್?
ಕಾಂಗ್ರೆಸ್'ನಿಂದ ಮೇಯರ್ ಸ್ಥಾನಕ್ಕೆ ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದು, ಪ್ರಕಾಶನಗರ ವಾರ್ಡಿನ ಜಿ.ಪದ್ಮಾವತಿ ಮತ್ತು ಶಾಂತಿನಗರ ವಾರ್ಡಿನ ಸೌಮ್ಯ ಶಿವಕುಮಾರ್ ರೇಸ್'ನಲ್ಲಿದ್ದಾರೆ. ಸೌಮ್ಯ ಶಿವಕುಮಾರ್ ಪರ ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಬ್ಯಾಟಿಂಗ್ ಮಾಡ್ತಾಯಿದ್ರೆ, ಜಿ.ಪದ್ಮಾವತಿ ಬೆನ್ನಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿಂತಿದ್ದಾರೆ. ನಿನ್ನೆ ತಡರಾತ್ರಿಯವರೆಗೂ ಮೇಯರ್ ಯಾರು ಆಗ್ಬೇಕು ಅನ್ನೋದನ್ನ ಸಿಎಂ ಬಳಿ ಸಚಿವರು ಚರ್ಚಿಸಿದ್ರು. ಅಂತಿಮವಾಗಿ ಪ್ರಕಾಶನಗರದ ಪದ್ಮಾವತಿಯವರೇ ಮೇಯರ್ ಸ್ಥಾನಕ್ಕೆ ನಾಮಪತ್ರಕ್ಕೆ ಸಲ್ಲಿಸಲಿದ್ದಾರಂತೆ.

ಉಪಮೇಯರ್ ಸ್ಥಾನಕ್ಕೆ ಐವರು ಆಕಾಂಕ್ಷಿಗಳು!
ಇತ್ತ ಜೆಡಿಎಸ್'ನಿಂದ ಉಪ-ಮೇಯರ್ ಸ್ಥಾನಕ್ಕೆ ಐವರು ಆಕಾಂಕ್ಷಿಗಳಿದ್ದಾರೆ.. ರಾಧಾಕೃಷ್ಣ ವಾರ್ಡಿನ ಆನಂದ್, ಪಾದರಾಯನಪುರದ ಇಮ್ರಾನ್ ಪಾಷಾ, ವಿ. ನಾಗೇನಹಳ್ಳಿಯ ರಾಜಶೇಖರ್, ನಾಗಪುರ ವಾರ್ಡಿನ ಭದ್ರೇಗೌಡ ಮತ್ತು ಕಾವಲ್ ಭೈರಸಂದ್ರದ ನೇತ್ರಾ ನಾರಾಯಣ್ ರೇಸಿನಲ್ಲಿದ್ದಾರೆ. ಈ ಸಂಬಂಧ  ದೇವೇಗೌಡರ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಡರಾತ್ರಿಯವರೆಗೂ ಸಭೆ ನಡೆಯಿತು. ಉಪ-ಮೇಯರ್ ಸ್ಥಾನಕ್ಕೆ ರಾಧಾಕೃಷ್ಣ ವಾರ್ಡಿನ ಆನಂದ್ ಹೆಸರು ಬಹುತೇಕವಾಗಿ ಅಂತಿಮವಾಗಿದೆ. ಜೊತೆಗೆ ಇವತ್ತಿನ ವೋಟಿಂಗ್'​​ನಲ್ಲಿ ಭಾಗವಹಿಸುವಂತೆ ಮೂವರು ಅಮಾನತುಗೊಂಡಿರುವ ಶಾಸಕರು, ಐವರು ಪರಿಷತ್ ಸದಸ್ಯರು, ಒಬ್ರು ರಾಜ್ಯಸಭಾ ಸದಸ್ಯರು ಹಾಗೂ 14 ಮಂದಿ ಪಾಲಿಕೆ ಸದಸ್ಯರಿಗೆ ಪಕ್ಷ ವಿಪ್ ಜಾರಿ ಮಾಡಿದೆ.

ಈ ಮಧ್ಯೆ 4 ಸ್ಥಾಯಿ ಸಮಿತಿಗಳು ಜೆಡಿಎಸ್ ತೆಕ್ಕೆಗೆ ಸಿಕ್ಕಿದ್ದು, ಶಿಕ್ಷಣ, ಆರ್ಥಿಕ, ಬೃಹತ್ ಕಾಮಗಾರಿ ಮತ್ತು ನಗರ ಯೋಜನೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಹೆಸರನ್ನು ಪಕ್ಷ ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಒಟ್ನಲ್ಲಿ ಬೆಂಗಳೂರಿನ ಪ್ರಥಮ ಪ್ರಜೆ ಯಾರು ಆಗ್ತಾರೆ ಅನ್ನೋದು ಮಧ್ಯಾಹ್ನದ ನಂತ್ರ ತಿಳಿಯಲಿದೆ.

ಬಿಬಿಎಂಪಿ ಚುನಾವಣೆ ವಿವರ:
ಒಟ್ಟು ಮತಗಳು: 269
ಮ್ಯಾಜಿಕ್ ನಂಬರ್: 135

ಪಕ್ಷಗಳ ಬಲಾಬಲ ಹೀಗಿದೆ
ಕಾಂಗ್ರೆಸ್
ಕಾರ್ಪೊರೇಟರ್​'ಗಳು: 76
ವಿಧಾನಸಭೆ ಸದಸ್ಯರು: 13
ವಿಧಾನ ಪರಿಷತ್ ಸದಸ್ಯರು: 15
ಸಂಸದರು: 02
ರಾಜ್ಯಸಭಾ ಸದಸ್ಯರು: 06
ಒಟ್ಟು: 112

ಜೆಡಿಎಸ್
ಕಾರ್ಪೊರೇಟರ್​ಗಳು: 14
ವಿಧಾನಸಭೆ ಸದಸ್ಯರು: 03
ವಿಧಾನ ಪರಿಷತ್ ಸದಸ್ಯರು: 05
ಸಂಸದರು: 00
ರಾಜ್ಯಸಭಾ ಸದಸ್ಯರು: 01
ಒಟ್ಟು: 23

ಬಿಜೆಪಿ :
ಕಾರ್ಪೊರೇಟರ್​ಗಳು: 99
ವಿಧಾನಸಭೆ ಸದಸ್ಯರು: 12
ವಿಧಾನ ಪರಿಷತ್ ಸದಸ್ಯರು: 08
ಸಂಸದರು: 03
ರಾಜ್ಯಸಭಾ ಸದಸ್ಯರು: 03
ಒಟ್ಟು: 125

ಪಕ್ಷೇತರ ರಾಜ್ಯಸಭಾ ಸದಸ್ಯರು         - 02 (ಬಿಜೆಪಿ ಬೆಂಬಲಿಸಬಹುದು)
ಪಕ್ಷೇತರ ಕಾರ್ಪೊರೇಟರ್​ಗಳು          - 07 (ಮೈತ್ರಿ ಬೆಂಬಲಿಗರು)

ಕಾಂಗ್ರೆಸ್ + ಜೆಡಿಎಸ್
112 + 23 = 135

ಬಿಜೆಪಿ = 125

ಪಕ್ಷೇತರರು =07 + 02

ಮೇಯರ್ ಚುನಾವಣೆಗೆ ನಡೆಯುವ ಪ್ರಮುಖ ಬೆಳವಣಿಗೆಗಳು

1) ಬೆಳಿಗ್ಗೆ 9 ರಿಂದ 10 ರೊಳಗೆ ನಾಮಪತ್ರ ಸಲ್ಲಿಕೆ

2) ಮೇಯರ್ ,ಉಪಮೇಯರ್​ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

3) ನಾಮಪತ್ರ ವಾಪಸಾತಿಗೆ 10.30 ಗಂಟೆವರೆಗೂ ಸಮಯ

4) 11ಕ್ಕೆ ಅಧಿಕೃತ ಅಭ್ಯರ್ಥಿಯ ನಾಮಪತ್ರ ಘೋಷಣೆ

5) 11.30 ಗಂಟೆ ಕೌನ್ಸಿಲ್​ ಹಾಲ್​ನಲ್ಲಿ ಹಾಜರಿರೊ ಅಭ್ಯರ್ಥಿಗಳ  ಏಣಿಕೆ

6) 259 ಮತದಾರರಿಂದ ಹಾಜರಾತಿ ಪುಸ್ತಕಕ್ಕೆ ಸಹಿ

7) 12ಕ್ಕೆ ಮೇಯರ್ ,ಉಪಮೇಯರ್​  ಅಭ್ಯರ್ಥಿಗಳಿಗೆ ಚುನಾವಣೆ

8) ಮತದಾರರು ಕೈ ಎತ್ತುವ ಮೂಲಕ ಬೆಂಬಲ

9) ಚುನಾವಣಾ ನೋಡೆಲ್​ ಅಧಿಕಾರಿಗಳು ಮತದಾರರ ಸಂಖ್ಯೆ ಏಣಿಕೆ

10) ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಅಧಿಕಾರಿಗಳಿಂದ ಮತದಾರರ ಸಂಖ್ಯೆ ಮಾಹಿತಿ

11) ಚುನಾವಣಾ ಆಯುಕ್ತರು ಮತ ಏಣಿಕೆ ಪರಿಶೀಲಸಿ ಅಂತಿಮವಾಗಿ 12.30 ಗಂಟೆಗೆ ಮೇಯರ್​ ಘೋಷಣೆ

ವರದಿ: ಮಧುಸೂಧನ್, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂತ್ರಾಲಯದ ಮಡಿಲಲ್ಲಿ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ: ರಾಯರ ದರ್ಶನ ಪಡೆದು ಧನ್ಯತೆ ಅನುಭವಿಸಿದ ಕಾಂತಾರ ನಟ!
ವೀರಪ್ಪನ್‌ಗಿಂತ, ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಜಾಸ್ತಿ.! ಅಂಕಿ-ಅಂಶ ಬಚ್ಚಿಟ್ಟ ಆರ್. ಅಶೋಕ್