
ಮುಂಬೈ (ಸೆ.01): ಸೋನಿ ಎಂಟರ್ಟೈನ್ಮೆಂಟ್ ಚಾನೆಲ್ನಲ್ಲಿ ದಿಢೀರ್ ಬೆಳವಣಿಗೆಗಳು ನಡೆಯುತ್ತಿವೆ. ಸೋನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪಹ್ರೇದಾರ್ ಪಿಯಾ ಕಿ’ ಧಾರಾವಾಹಿ ತೀವ್ರ ವಿವಾದಕ್ಕೆ ಗ್ರಾಸವಾಗಿತ್ತು. ಇದೀಗ ‘ದಿ ಕಪಿಲ್ ಶರ್ಮಾ ಶೋ’ ವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ.
ಕಪಿಲ್ ಶರ್ಮಾ ಶೋ ಬದಲು ‘ಸೂಪರ್ ಡಾನ್ಸರ್’ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಕಳೆದ ಕೆಲ ದಿನಗಳಿಂದ ಕಪಿಲ್ ಶರ್ಮಾ ಆರೋಗ್ಯ ಆಗಾಗ ಏರುಪೇರಾಗುತ್ತಿದೆ. ಕಪಿಲ್ ಸರಿಯಾದ ಸಮಯಕ್ಕೆ ಶೂಟಿಂಗ್ಗೆ ಕೂಡ ಹಾಜರಾಗುತ್ತಿಲ್ಲ. ಸೆಲೆಬ್ರಿಟಿಗಳು ಶೂಟಿಂಗ್ಗಾಗಿ ಕಾದು ವಾಪಸ್ ಹೋಗೋದು ಕಾಮನ್ ಆಗಿ ಬಿಟ್ಟಿದೆ. ಫ್ರೆಶ್ ಎಪಿಸೋಡ್’ಗಳು ಸಿದ್ಧವಿಲ್ಲದ ಕಾರಣ ಅನಿವಾರ್ಯವಾಗಿ ಸೋನಿ ಟಿವಿ ಕಪಿಲ್ ಶೋವನ್ನೇ ಸದ್ಯಕ್ಕೆ ಸ್ಥಗಿತ ಮಾಡುತ್ತಿದೆ. ಕಪಿಲ್ ಸಂಪೂರ್ಣ ಚೇತರಿಸಿಕೊಂಡ ಬಳಿಕ ಮತ್ತೆ ಶೋ ಆರಂಭಿಸುವುದಾಗಿ ಹೇಳಿದೆ. ಸದ್ಯಕ್ಕೆ ಸೂಪರ್ ಡಾನ್ಸರ್, ‘ಡ್ರಾಮಾ ಕಂಪನಿ’ ಸ್ಲಾಟ್ ನಲ್ಲಿ ಅಂದ್ರೆ 8 ಗಂಟೆಗೆ ಪ್ರಸಾರವಾಗಲಿದೆ. ನಂತರ ಸೂಪರ್ ಡಾನ್ಸರ್ ಶೋವನ್ನು 9ಕ್ಕೆ ಪ್ರಸಾರ ಮಾಡಲಾಗುತ್ತದೆ. ಕಪಿಲ್ ಶರ್ಮಾರ ಅಹಂಕಾರದ ವರ್ತನೆ ವಾಹಿನಿ ಮುಖ್ಯಸ್ಥರಿಗೂ ಬೇಸರ ತರಿಸಿದೆ ಅಂತಾ ಹೇಳಲಾಗ್ತಿದೆ. ಹಾಗಾಗಿ ಮತ್ತೆ ಕಪಿಲ್ ಶರ್ಮಾ ಶೋ ಪ್ರಸಾರವಾಗುವುದು ಅನುಮಾನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.