
ನವದೆಹಲಿ(ಆ.01): ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿವಿಐಪಿ ಹೆಲಿಕಾಪ್ಟ್'ರ್ ಅಗಸ್ಟಾ ವೆಸ್ಟ್'ಲ್ಯಾಂಡ್'ಗೆ ಸಂಬಂಧಿಸಿದಂತೆ ಸಿಬಿಐ ಮಾಜಿ ವಾಯುಪಡೆಯ ಮುಖ್ಯಸ್ಥ ಎಸ್'ಪಿ ತ್ಯಾಗಿ ಹಾಗೂ 9 ಇತರರ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ.
ವಾಯುಪಡೆಯ ಉಪ ಮುಖ್ಯಸ್ಥ ಜೆ.ಎಸ್. ಗುಜ್ರಾಲ್, ತ್ಯಾಗಿ ಅವರ ಸಂಬಂಧಿ ಜೂಲಿ ತ್ಯಾಗಿ, ಅಗಸ್ಟಾ ವೆಸ್ಟ್'ಲ್ಯಾಂಡ್ ಕಂಪನಿಯ ಮಾಜಿ ಸಿಇಒ ಗೈಸೆಪೆ ಒರ್ಸಿ, ಫಿನ್ಮೆಕ್ಕಾನಿಕ'ಸ್ ಬ್ರೂನೋ ಸ್ಪಾಗ್ನೋಲಿನಿ, ಯೂರೋಪಿನ ಮೂವರು ಮಧ್ಯವರ್ತಿ'ಗಳು, ಭಾರತೀಯ ಮಧ್ಯವರ್ತಿ ಗೌತಮ್ ಖೈತಾನ್ ಸೇರಿದಂತೆ 9 ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
ಆರೋಪಪಟ್ಟಿ ಸಲ್ಲಿಸಿರುವ ಪ್ರಕಾರ ವಿವಿಐಪಿ ಅಗಸ್ಟಾ ವೆಸ್ಟ್'ಲ್ಯಾಂಡ್ ಖರೀದಿ ಹಗರಣದಲ್ಲಿ ತ್ಯಾಗಿ ಅವರು ಲಂಚಕ್ಕೆ ಬದಲಾಗಿ ಬೇರೆ ರೀತಿಯಲ್ಲಿ ಅನುಕೂಲ ಪಡೆದಿದ್ದರು. ಈ ಹಗರಣದಲ್ಲಿ ಭಾಗಿಯಾಗಿದ್ದ ಒರ್ಸಿ ಮತ್ತು ಸ್ಪಾಗ್ನೋಲಿನಿ ಅವರಿಗೆ ಇಟಲಿ ಕೋರ್ಟ್ ಈಗಾಗಲೇ ಶಿಕ್ಷೆ ವಿಧಿಸಿದೆ.
ಯುರೋಪಿಯನ್ ಮಧ್ಯವರ್ತಿ ಕಾರ್ಲೊ ಗೆರೊಸಾ ಪರಿಚಯ ಸಂಜೀವ್‌ಗಿತ್ತು ಮತ್ತು ಲಂಚದ ಹಣವನ್ನು ಭಾರತಕ್ಕೆ ತಲುಪಿಸುವ ಯೋಜನೆ ಖೇತಾನ್ ರೂಪಿಸಿದ್ದ ಎಂದು ಸಿಬಿಐ ಆಪಾದಿಸಿದೆ. 2007ರಲ್ಲಿ ನಿವೃತ್ತರಾಗಿರುವ ತ್ಯಾಗಿ, ಸಂಜೀವ ಮತ್ತು ಖೇತಾನ್ ಡಿ. 9ರಂದು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದರು. ಆರೋಪಿಗಳು ಪ್ರಸ್ತುತ ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.