ಆಫ್ರಿಕಾದ ಡೆಮಿ ಮಿಸ್ ಯೂನಿವರ್ಸ್ : ಭಾರತದ ಸ್ಪರ್ಧಾಳು ಶ್ರದ್ಧಾ ಶಶಿಧರ್ ಅಂತಿಮ 16ಕ್ಕೆ ಬರಲೂ ವಿಫಲ

By Suvarna Web DeskFirst Published Nov 28, 2017, 8:52 PM IST
Highlights

ಭಾರತದ ಶ್ರದ್ಧಾ ಶಶಿಧರ್ ಅವರು ಟಾಪ್ 16ರ ಪಟ್ಟಿಯಲ್ಲಿ ಸ್ಥಾನ ಪಡೆಯಲಾಗದೇ ಹೊರಬಿದ್ದರು. ಶ್ರದ್ಧಾ ಚೆನ್ನೈ ಮೂಲದವರು. ಇತ್ತೀಚೆಗಷ್ಟೇ ಮಿಸ್ ವರ್ಲ್ಡ್ ಕಿರೀಟ ಭಾರತದ ಮಾನುಷಿ ಛಿಲ್ಲರ್ ಅವರ ಮುಡಿಗೇರಿತ್ತು.

ಲಾಸ್ ವೇಗಸ್: ದಕ್ಷಿಣ ಆಫ್ರಿಕದ ಸುಂದರಿ ಡೆಮಿ ಲೀ ನೆಲ್ ಪೀಟರ್ಸ್ ಅವರು 2017ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ರಾತ್ರಿ ಅಮೆರಿಕದ ಲಾಸ್ ವೇಗಸ್‌ನಲ್ಲಿ ನಡೆದ ಸಮಾರಂಭದಲ್ಲಿ 22 ವರ್ಷದ ಡೆಮಿ ಅವರು ಕೊಲಂಬಿಯಾದ ಲೌರಾ ಗೊನ್ಸಾಲೆಸ್ ಹಾಗೂ ಜಮೈಕಾದ ಡೇವಿನಾ ಬೆನೆಟ್ ಅವರನ್ನು ಹಿಂದಿಕ್ಕಿ

ಸುಂದರಿ ಪಟ್ಟ ಪ್ರಾಪ್ತಿ ಮಾಡಿಕೊಂಡರು.‘ಮಿಸ್ ಯೂನಿವರ್ಸ್ ಆದವಳು ಭಯವನ್ನು ಮೀರಿ ನಿಂತ ಮಹಿಳೆಯಾಗಿರುತ್ತಾಳೆ. ಆಕೆಯು ಇತರ ಮಹಿಳೆಯರಿಗೂ ಭಯ ಮೆಟ್ಟಿ ನಿಲ್ಲಲು ಸಹಾಯ ಮಾಡಬೇಕು’ ಎಂಬ ಜಾಣ್ಮೆಯ ಉತ್ತರದ ಮೂಲಕ ಡೆಮಿ ಅವರು ವಿಜೇತರಾದರು. ಭಾರತದ ಶ್ರದ್ಧಾ ಶಶಿಧರ್ ಅವರು ಟಾಪ್ 16ರ ಪಟ್ಟಿಯಲ್ಲಿ ಸ್ಥಾನ ಪಡೆಯಲಾಗದೇ ಹೊರಬಿದ್ದರು. ಶ್ರದ್ಧಾ ಚೆನ್ನೈ ಮೂಲದವರು. ಇತ್ತೀಚೆಗಷ್ಟೇ ಮಿಸ್ ವರ್ಲ್ಡ್ ಕಿರೀಟ ಭಾರತದ ಮಾನುಷಿ ಛಿಲ್ಲರ್ ಅವರ ಮುಡಿಗೇರಿತ್ತು.

click me!