ಹೈದರಾಬಾದ್ ಮೊದಲ ಹಂತದ ಮೆಟ್ರೋಗೆ ಮೋದಿ ಚಾಲನೆ

Published : Nov 28, 2017, 08:21 PM ISTUpdated : Apr 11, 2018, 12:44 PM IST
ಹೈದರಾಬಾದ್ ಮೊದಲ ಹಂತದ ಮೆಟ್ರೋಗೆ ಮೋದಿ ಚಾಲನೆ

ಸಾರಾಂಶ

ಹೈದರಾಬಾದ್'ನ ಮೊದಲ ಹಂತದ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ನವದೆಹಲಿ (ನ.28): ಹೈದರಾಬಾದ್'ನ ಮೊದಲ ಹಂತದ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಜೊತೆಯಲ್ಲಿ ಮಿಯಾಪುರ್ ಮತ್ತು ಕುಕತ್'ಪಲ್ಲಿ ನಡುವೆ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಚಾಲನೆ ನೀಡಿದರು.

ಮೆಟ್ರೋದಲ್ಲಿ ಪ್ರಯಾಣ ಮಾಡುವ ವೇಳೆ, ಪ್ರಧಾನಿ ನರೇಂದ್ರ ಮೋದಿ,  ನಾವು ಸಹಕಾರ ಪದ್ಧತಿಯಲ್ಲಿ ನಂಬಿಕೆಯಿಟ್ಟಿದ್ದೇವೆ. ನಾವು ಅಧಿಕಾರದಲ್ಲಿ ಇಲ್ಲದೇ ಇರುವ ರಾಜ್ಯಗಳಲ್ಲಿ ನಾವು ಭೇದ-ಭಾವ ತೋರುತ್ತಿಲ್ಲ. ದೇಶದ ಸಮಗ್ರ ಅಭಿವೃದ್ದಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಹೈದರಾಬಾದ್'ನಲ್ಲಿ ನಡೆಯುತ್ತಿರುವ ಜಾಗತಿಕ ಉದ್ಯಮಿಗಳ ಶೃಂಗಸಭೆಯ ಬಗ್ಗೆ ಉಲ್ಲೇಖಿಸುತ್ತಾ, ಇಂದು ಜಗತ್ತಿನ ಕಣ್ಣು ಹೈದರಾಬಾದ್'ನ ಮೇಲೆ ನೆಟ್ಟಿದೆ. ಈ ನಗರವು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಶೃಂಗಸಭೆಯನ್ನು ಆಯೋಜಿಸಿದೆ. ಬೇರೆ ಬೇರೆ ದೇಶಗಳ ಉದ್ಯಮಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇದು ನಮ್ಮ ಹೆಮ್ಮೆ ಎಂದು ಮೋದಿ ಹೇಳಿದರು.

ಮೊದಲ ಹಂತದ ಮೆಟ್ರೋ 30 ಕಿಮೀ ಅಂತರವನ್ನು ಹೊಂದಿದ್ದು ಒಟ್ಟು 24 ಸ್ಟೇಷನ್'ಗಳನ್ನು ಕವರ್ ಮಾಡುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮೆಟ್ರೋ ಸೇವೆ ಇರಲಿದೆ. ವಿಕಲಚೇತನರಿಗೆ, ವೀಲ್'ಚೇಲರ್'ಗಳಿಗೆ ಮೆಟ್ರೋದಲ್ಲಿ ವಿಶೇಷ ಆಸನ ವ್ಯವಸ್ಥೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Extreme fast-food consumer: ಸಿಕ್ಕಾಪಟ್ಟೆ ಫಾಸ್ಟ್‌ಫುಡ್‌ ತಿನ್ನುತ್ತಿದ್ದ 16ರ ಬಾಲಕಿ ಅನಾರೋಗ್ಯಕ್ಕೆ ಸಾವು
ಭಾರತದ ಪ್ರಜಾಪ್ರಭುತ್ವಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊಡುಗೆಗಳು: ಒಂದು ಸ್ಮರಣಾರ್ಥ ಲೇಖನ